ಜೇನು ಸಾಕಾಣಿಕೆ ಹಾಗೂ ಪುಷ್ಟ ಕೃಷಿ, ರೈತರ ಆದಾಯಕ್ಕೆ ಹೊಸ ದಾರಿ – ಮೇಟಿ.ಕುರ್ಕಿ ಶಾಂತವೀರಯ್ಯ.
ಕೆ.ಹೊಸಹಳ್ಳಿ ಮಾ.02

ಪುಷ್ಟ ಕೃಷಿ ಹಾಗೂ ಜೇನು ಸಾಗಾಣಿಕೆ ಕೃಷಿಯ ಮೂಲಕ ಹೆಚ್ಚಿನ ಆದಾಯ ಗಳಿಸಲಿಕ್ಕೆ ಹೊಸ ದಾರಿ ಎಂದು ಜೇನು ತಜ್ಞ ಮೇಟಿ.ಕುರ್ಕಿ ಶಾಂತವೀರಯ್ಯ ಹೇಳಿದರು.
ಕಾನ ಹೊಸಹಳ್ಳಿ ಸಮೀಪದ ಸಿದ್ದಾಪುರ ಗ್ರಾಮದಲ್ಲಿ ರಾಷ್ಟ್ರೀಯ ಸಸ್ಯ ಶಾಸ್ತ್ರೀಯ ಸಂಶೋಧನಾ ಸಂಸ್ಥೆ ಐ.ಸಿ.ಐ.ಆರ್ – ಎನ್.ಬಿ.ಐ.ಆರ್ ಹಾಗೂ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಿಂದ ಮೂರು ದಿನಗಳ ಕಾಲ ಪುಷ್ಟ ಕೃಷಿ ಹಾಗೂ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ವಿದ್ಯಾವಂತ ಯುವಕರು ಕೃಷಿ ಕಾಯಕದಲ್ಲಿ ತೊಡಗಿಸಿ ಕೊಳ್ಳಬೇಕು ಅದರಲ್ಲೂ ಪುಷ್ಟ ಕೃಷಿ ಮಾಡುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು, ಹಾಗೂ ಪುಷ್ಪ ಕೃಷಿಯಲ್ಲಿ ಜೇನು ಸಾಕಾಣಿಕೆ ಮಾಡುವುದರಿಂದ ಲಕ್ಷಾಂತರ ಆದಾಯ ಗಳಿಸಬಹುದು, ಮಲ್ಲಿಗೆ, ಗುಲಾಬಿ, ಸುಗಂಧರಾಜ, ಹೀಗೆ ಪುಷ್ಟ ಕೃಷಿ ಮಾಡುವಾಗ ಜೊತೆಗೆ ಹತ್ತಾರು ಜೇನು ಪೆಟ್ಟಿಗೆ ಇಟ್ಟು ಜೇನು ಸಾಕಾಣಿಕೆ ಮಾಡಬಹುದು ಇದಕ್ಕೆ ಬೇಕಾದ ತರಬೇತಿ ಹಾಗೂ ಸಹಕಾರ ಕೊಡಲಾಗುತ್ತದೆ ಇದನ್ನು ಎಲ್ಲಾ ಯುವಕರು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದರು.
ನಂತರ ಸಿ.ಎಸ್.ಐ.ಆರ್ – ಎನ್.ಬಿ.ಆರ್.ಐ ನ ಮುಖ್ಯ ವಿಜ್ಞಾನಿ ಡಾ, ಸಂಜೀವ ನಾಯಕ ಅವರು ಮಾತನಾಡಿ, ಪುಷ್ಪ ಕೃಷಿ ಮಿಷನ್ ಇದೊಂದು ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೊಜನೆ ಇದಾಗಿದ್ದು ಈ ವರ್ಷ ವಿಜಯನಗರ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಜಿಲ್ಲೆಗಳಲ್ಲಿ ಆಯ್ದ ಗ್ರಾಮಗಳಲ್ಲಿ ಯುವ ರೈತರಿಗೆ ತರಬೇತಿ ಹಾಗೂ ಪ್ರೊತ್ಸಾಹ ನೀಡಿ ಯುವಕರನ್ನು ಪುಷ್ಪ ಕೃಷಿಗೆ ತರುವ ಉದ್ದೇಶವಾಗಿದೆ ಪುಷ್ಪ ಕೃಷಿಯಲ್ಲಿ ಜೇನು ಪೆಟ್ಟಿಗೆ ಇಟ್ಟು, ಜೇನು ಸಾಕಾಣಿಕೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಇದೇ ನಿಟ್ಟಿನಲ್ಲಿ, ಸಿದ್ದಾಪುರ ಹಾಗೂ ಸುತ್ತಮುತ್ತಲಿನ ನಲವತ್ತು ಕೃಷಿಕರಿಗೆ ತರಬೇತಿ ಕೊಟ್ಟು ಅವರಿಗೆ ಪ್ರಮಾಣ ಪತ್ರ, ಜೇನು ಪೆಟ್ಟಿಗೆ ಕೊಟ್ಟಿದ್ದೇವೆ ಎಂದರು ಇದೇ ಸಂದರ್ಭದಲ್ಲಿ, ಮತ್ತೊಬ್ಬ ವಿಜ್ಞಾನಿ ಡಾ, ಸುಶೀಲ್ ಕುಮಾರ್ ಸೇರಿದಂತೆ, ಯುವ ಕೃಷಿಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

