ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ 25 ಸಾವಿರ ಅಕ್ಕಿ ಫೌಂಡೇಶನ್ ಅಧ್ಯಕ್ಷ – ಸಿ.ಬಿ. ಅಸ್ಕಿ ಯವರ ಫೌಂಡೇಶನ್ ನಿಂದ ಘೋಷಣೆ.
ಬಳಬಟ್ಟಿ ಮಾ.02

ಮುದ್ದೇಬಿಹಾಳ ತಾಲೂಕಿನ ಬಳಬಟ್ಟಿ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಸಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಎಂ,ಎಸ್ ಕೊಪ್ಪ ಅವರು ಆರಂಭಿಸಿರುವ ಶಾಲೆ ಬಡವರ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ ಅಸ್ಕಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಇಂದು ಶಿಕ್ಷಣ ಒಳ್ಳೆಯ ಹೆಸರು ಮಾಡಿದೆ ಬಿ.ಎ.ಎಸ್ ಅಂಜುಮನ್ ಅಹಿಲ್ಯಾ ದೇವಿ ಶಿಕ್ಷಣ ಸಂಸ್ಥೆ, ನಾಗರಬೆಟ್ಟ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರುತ್ತಿವೆ.
ಗ್ರಾಮೀಣ ಭಾಗದಲ್ಲಿ ಹುಲ್ಲೂರು ಎಸ್,ಎನ್,ಡಿ ಪಬ್ಲಿಕ ಶಾಲೆಯಲ್ಲಿ ಎಸ್,ಎಸ್,ಎಲ್,ಸಿ ಈ ವರ್ಷದ ಪ್ರಥಮ ಬ್ಯಾಚಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಕೊಳ್ಳುವ ವಿದ್ಯಾರ್ಥಿಗಳಿಗೆ ಅಸ್ಕಿ ಫೌಂಡೇಶನ್ ದಿಂದ 25 ಸಾವಿರ ರೂ, ನಗದು ಬಹುಮಾನ ನೀಡುವುದಾಗಿ ಘೋಷಣೆ ನೀಡಿದರು.
ಮುದ್ದೇಬಿಹಾಳ ಬಸವ ಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ್ ಇಸ್ಲಾಂಪುರ ಮಾತನಾಡಿ, ಕಷ್ಟದ ಜೀವನ ಸವೆಸಿ ಧೈರ್ಯದಿಂದ ಮುಂದಡಿ ಇಟ್ಟಿದ್ದಕ್ಕೆ ಪ್ರತಿಭಾವಂತ ಮಕ್ಕಳನ್ನು ಗುರುತಿಸುವಂತಹ ಶಿಕ್ಷಣ ಸಂಸ್ಥೆ ರೂಪಿಸಲು ಸಾಧ್ಯವಾಗಲಿದೆ.
ಒಳ್ಳೆಯ ಪ್ರಜೆಯಾಗಿ ಒಳ್ಳೆಯ ಸಂದೇಶವನ್ನು ನೀಡುವ ಕಾರ್ಯ ಮಾಡುವ ವ್ಯಕ್ತಿತ್ವ ರೂಪಿಸಿ ಕೊಳ್ಳಬೇಕು. ಎಸ್,ಎಸ್,ಎಲ್,ಸಿ ಪ್ರಥಮ ಬ್ಯಾಚಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಎರಡನೇ ಸ್ಥಾನ ಗಳಿಸಿದವರಿಗೆ 11 ಸಾವಿರ ರೂ, ನೀಡುವುದಾಗಿ ಘೋಷಣೆ ಮಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರ ಲಿಂಗಸ್ವಾಮೀಜಿ ಆಶೀರ್ವಚನ ನೀಡಿ ಹಳ್ಳಿಯ ಮಕ್ಕಳ ಶಿಕ್ಷಣದ ಕನಸನ್ನು ನನಸು ಮಾಡುತ್ತಿರುವ ಎಂ,ಎಸ್ ಕೊಪ್ಪ, ಅವರ ಕಾರ್ಯದ ಹಿಂದೆ ಅಪಾರ ಪರಿಶ್ರಮವಿದೆ, ಸಂಸ್ಥೆಗೆ ಸದಾ ನಾವು ಬೆನ್ನುಲುಬಾಗಿ ಇರುತ್ತೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದರು ಎಸ್,ಎನ್,ಡಿ ನ್ಯಾಷನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ,ಎಸ್ ಕೊಪ್ಪ, ನಾನು ಗೌಂಡಿ ಕೈಯಲ್ಲಿ ಗಾರೆ ಕೆಲಸವನ್ನು ಮಾಡಿದ್ದೇನೆ, ಹೊಲದಲ್ಲಿ ಕೃಷಿ ಕೆಲಸವನ್ನು ಮಾಡಿದ್ದೇನೆ, ಮತ್ತೊಬ್ಬರ ಬಳಿ ಹಾಳಾಗಿಯೂ ಕೆಲಸ ಮಾಡಿದ್ದೇನೆ, ಆದರೆ ನನ್ನ ಕನಸು ಬಡವರ ಮಕ್ಕಳು ಶಿಕ್ಷಣ ಪಡೆದು ಕೊಳ್ಳಬೇಕಾದರೆ ಕಷ್ಟ ಪಡಬಾರದು ಎಂಬ ಉದ್ದೇಶದಿಂದ ಈ ಸಂಸ್ಥೆ ಕಟ್ಟಿದ್ದೇನೆ.
ಜಮಖಂಡಿ ಓಲೆಮಠದ ದಿ. ಚನ್ನಬಸವ ಸ್ವಾಮೀಜಿಯವರ ಆಶೀರ್ವಾದ ಸಂಸ್ಥೆಯ ಮೇಲಿದೆ ಎಂದರು. ಕಾಳಗಿಯ ದೇವಿ ಆರಾಧಕ ಮಾದೇವಪ್ಪ ವಿಶ್ವಕರ್ಮ, ವಿಶ್ವ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರೇಶ್ ಗುರುಮಠ, ಶಾಲೆಯ ಮುಖ್ಯ ಗುರು ಮಾತೆ ರೇಖಾ ಎಂ,ಎಸ್ ಈರಣ್ಣ ಬಡಿಗೇರ್ ಸಾನಿಧ್ಯ ವಹಿಸಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಸ್,ಎ ಲೋನಾರ್ ಮಠ, ಮಾಜಿ ಕುಸ್ತಿಪಟು ಕರಿಯಪ್ಪ ಹಾಸಂಗಿ, ಪ್ರಮುಖರಾದ ಯಮನಪ್ಪ ಪೂಜಾರಿ, ಮಾದೇವಪ್ಪ ಹಳ್ಳದ, ರಾಮನಗೌಡ ಬಿರಾದಾರ್, ಚಂದ್ರಶೇಖರ್ ಕುಂಬಾರ್, ನಿಂಗಪ್ಪ ಓಲೆಕಾರ್, ಸುಭಾಷ್ ಕಟ್ಟಿಮನಿ, ಹನುಮಂತರಾಯ ಮದಿನಾಳ, ಮಲ್ಲಯ್ಯ ಹಿರೇಮಠ, ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ಎಸ್,ಎಸ್,ಎಲ್, ಸಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕ ಪಡೆದು ಕೊಳ್ಳುವ ತೃತೀಯ, ನಾಲ್ಕನೇ, ಐದನೆಯ, ಬಹುಮಾನಗಳನ್ನು ವೇದಿಕೆಯಲ್ಲಿದ್ದ ಕರಿಯಪ್ಪ ಆಸಂಗಿ, ಬಸವರಾಜ್ ಸಂಕನಾಳ, ನಾನಪ್ಪ ಲಮಾಣಿ, ನೀಡುವುದಾಗಿ ವಾಗ್ದಾನ ಮಾಡಿದರು. ಎಚ್,ಆರ್ ಬಾಗಲಕೋಟ್ ಸ್ವಾಗತಸಿದರು ನಂದಿನಿ ಪವಾರ್ ವರದಿ ವಾಚಿಸಿದರು, ಅಶೋಕ್ ಗುಂಡಿನಮನಿ ನಿರೂಪಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

