ನಾಳೆ ಬೆಳಿಗ್ಗೆ 11:00 ಗಂಟೆಗೆ ದೇವರ ಎತ್ತುಗಳ – ಶೆಡ್ ಗಳ ಲೋಕಾರ್ಪಣೆ.
ಚಳ್ಳಕೆರೆ ಮಾ.06

ನಗರದ ದೇವರ ಎತ್ತುಗಳ ಸಂರಕ್ಷಣಾ ಸಮಿತಿಯಿಂದ ಹೊರವಲಯದ ಜಗಲೂರಜ್ಜನ ದೇವಸ್ಥಾನದ ಸಮೀಪದಲ್ಲಿರುವ ನನ್ನಿವಾಳದ ಕಟ್ಟೆ ಮನೆಗೆ ಸೇರಿದ ಮುತ್ತಯ್ಯಗಳ ದೇವರ ಎತ್ತುಗಳಿಗಾಗಿ ನಿರ್ಮಿಸಿರುವ ಎರಡು ಶೆಡ್ ಗಳ ಲೋಕಾರ್ಪಣೆ ಸಮಾರಂಭವು ಶನಿವಾರ ಬೆಳಿಗ್ಗೆ 11 ಗಂಟೆಗೆ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ, ವೈ.ರಾಜಾರಾಮ್ ಗುರುಗಳಿಂದ ನೆರವೇರಲಿದ್ದು.
ಮುಖ್ಯ ಅತಿಥಿಯಾಗಿ ತಾಲೂಕು ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಕೆ.ಎಂ.ಯತೀಶ್, ಶ್ರೀಮತಿ ಶುಭಾ, ಪದ್ಮ ಗೋವಿಂದರಾಜು, ಪ್ರೇಮಲೀಲಾ, ಸುಧಾಮಣಿ, ವಿಶಾಲಾಕ್ಷಿ, ಮಧು, ಜ್ಯೋತಿ, ಯತೀಶ್ ಎಂ ಸಿದ್ದಾಪುರ, ಮೋಹಿನಿ, ತಿಪ್ಪಮ್ಮ, ಶ್ರೀದೇವಿ ಶ್ರೀನಿವಾಸ್, ಗಿಡ್ಡ ಓಬಯ್ಯ, ಚಿನ್ನಯ್ಯ, ಚಾಟಿ ಓಬಯ್ಯ, ಗೊಂಚಿಗಾರ್ ಪಾಪಯ್ಯ, ಪಾಪಯ್ಯ, ಸಿದ್ದೇಶ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕ ಯತೀಶ್.ಎಂ ಸಿದ್ದಾಪುರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

