ಶ್ರೀರಾಮಕೃಷ್ಣ-ಶ್ರೀಮಾತೆ ರೂಪವೆರಡು ಶಕ್ತಿಯೊಂದು – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಮಾ.07


ಶ್ರೀರಾಮಕೃಷ್ಣರು ಮತ್ತು ಶ್ರೀಮಾತೆ ಶಾರದಾದೇವಿಯವರ ರೂಪಗಳು ಬೇರೆ ಬೇರೆಯಾಗಿದ್ದರೂ ಶಕ್ತಿ ಮಾತ್ರ ಒಂದೇ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಮಾತೆ ಶಾರದಾದೇವಿಯವರ ಸಂದೇಶಗಳ” ಬಗ್ಗೆ ವಿಶೇಷ ಪ್ರವಚನ ನೀಡಿದರು.

ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಕವಿತಾ ಗುರುಮೂರ್ತಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಗೀತಾ ವೆಂಕಟೇಶರೆಡ್ಡಿ, ನಾಗರಾಜ್, ರಶ್ಮಿ ವಸಂತ, ಯಶಸ್ವಿ, ಪುಷ್ಪಲತಾ, ಅಖಿಲ್, ರಾಧಾ ಶ್ರೀಪಾದ್, ಸಿ.ಎಸ್ ಭಾರತಿ, ಮಂಜುಳಾ ಉಮೇಶ್, ಸುಧಾಮಣಿ, ವನಜಾಕ್ಷಿ ಮೋಹನ್, ಸುಮನಾ, ಯತೀಶ್.ಎಂ ಸಿದ್ದಾಪುರ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.

