🚨 ರಾಜ್ಯಮಟ್ಟದ ಮಹಾ ಸುದ್ದಿ, ಕರಾವಳಿಯ ಆಶಾಕಿ🚨💥ದಕ್ಷಿಣ ಕನ್ನಡದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ರಾಜ್ಯ ಬಜೆಟ್ – ಶಾಸಕ ಡಾ, ಮಂಜುನಾಥ ಭಂಡಾರಿ ಅವರ ದಶಕಗಳ ಹೋರಾಟಕ್ಕೆ ಸಂದ ಜಯ!💥
ಬೆಂಗಳೂರು/ಮಂಗಳೂರು

ಕರ್ನಾಟಕದ ರಾಜಕೀಯ ಭೂ ಪಟದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಶಿಕ್ಷಣ ತಜ್ಞ, ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ, ಮಂಜುನಾಥ ಭಂಡಾರಿ ಅವರು ರಾಜ್ಯದ ಸಮಗ್ರ ಅಭಿವೃದ್ಧಿ, ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಯ ಕುರಿತು ಅತ್ಯಂತ ಹರ್ಷ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ರಾಜ್ಯ ಬಜೆಟ್ ಅನ್ನು “ದಕ್ಷಿಣ ಕನ್ನಡದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಬಜೆಟ್” ಎಂದು ಶ್ಲಾಘಿಸಿರುವ ಅವರು, ಇದು ಕರಾವಳಿಯ ಜನ ಸಾಮಾನ್ಯರ ಬದುಕಿನಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
💥 ಸೂಪರ್ ಬ್ರೇಕಿಂಗ್:-
ಬಜೆಟ್‌ನ ಐತಿಹಾಸಿಕ ಘೋಷಣೆಗಳು
🔴 ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಭಾಗ್ಯ:-
ದಕ್ಷಿಣ ಕನ್ನಡದ ಜನರ ದಶಕಗಳ ಬೇಡಿಕೆಯಾಗಿದ್ದ ಪುತ್ತೂರಿಗೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಘೋಷಿಸಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಎಂದು ಭಂಡಾರಿಯವರು ಬಣ್ಣಿಸಿದ್ದಾರೆ. ಇದು ಕೇವಲ ಕಟ್ಟಡವಲ್ಲ, ಬಡವರ ಆರೋಗ್ಯ ಹಕ್ಕಿನ ಜಯ ಎಂದಿದ್ದಾರೆ.
🔴 ಕರಾವಳಿ ಅಭಿವೃದ್ಧಿ ಮಂಡಳಿಗೆ ಆನೆಬಲ:-
ಕರಾವಳಿ ಅಭಿವೃದ್ಧಿ ಮಂಡಳಿಯನ್ನು (CDB) ಬಲಪಡಿಸಲು ಮತ್ತು ಹೆಚ್ಚಿನ ಅನುದಾನ ನೀಡಲು ಸರ್ಕಾರ ಮುಂದಾಗಿರುವುದನ್ನು ಸ್ವಾಗತಿಸಿರುವ ಅವರು, ಇದರಿಂದ ಮೂಲಭೂತ ಸೌಕರ್ಯಗಳಿಗೆ ಹೊಸ ವೇಗ ಸಿಗಲಿದೆ ಎಂದಿದ್ದಾರೆ.
🔴 ಗ್ರಾಮೀಣ ಆರೋಗ್ಯ ಸೇವೆಗಳ ವಿಸ್ತರಣೆ:-
ಗ್ರಾಮೀಣ ಭಾಗಗಳಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವ ಯೋಜನೆ ಮತ್ತು ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದಂತಹ ನಿರ್ಧಾರಗಳು ಸಾಮಾಜಿಕ ಭದ್ರತೆಗೆ ಹಿಡಿದ ಕೈಗನ್ನಡಿ ಎಂದು ಕೊಂಡಾಡಿದ್ದಾರೆ.
🌟 ರಾಜಕೀಯ ಧ್ರುವತಾರೆ:-
ಡಾ, ಮಂಜುನಾಥ ಭಂಡಾರಿ ಜೀವನ ಪಥ
ವಿದ್ಯಾರ್ಥಿ ನಾಯಕನಾಗಿ ಆರಂಭ:-
ತಮ್ಮ ರಾಜಕೀಯ ಜೀವನವನ್ನು ವಿದ್ಯಾರ್ಥಿ ದೆಸೆಯಲ್ಲಿ NSUI ಮೂಲಕ ಆರಂಭಿಸಿದ ಇವರು, ಕಿರಿಯ ವಯಸ್ಸಿನಲ್ಲೇ ಕಾರ್ಕಳ ಮತ್ತು ಶಿವಮೊಗ್ಗ ಭಾಗಗಳಲ್ಲಿ ಸಕ್ರಿಯರಾಗಿ ನಾಯಕತ್ವ ಬೆಳೆಸಿ ಕೊಂಡವರು.
ಪಕ್ಷದ ವಿವಿಧ ಜವಾಬ್ದಾರಿಗಳು:-
ಭಾರತೀಯ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಕಾರ್ಯಾಧ್ಯಕ್ಷರಾಗಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ.
ಚುನಾವಣಾ ಸಮರ:-
2014 ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸಿ ಧೀಮಂತ ನಾಯಕ ಎನಿಸಿ ಕೊಂಡಿದ್ದರು. 2022 ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದಿಂದ ವಿಧಾನ ಪರಿಷತ್ತಿಗೆ (MLC) ಆಯ್ಕೆ ಯಾದರು.
ಅಂತರಾಷ್ಟ್ರೀಯ ಮಾನ್ಯತೆ:-
ಇವರು ಪ್ರತಿಷ್ಠಿತ ‘ಐಸೆನ್‌ಹೋವರ್ ಫೆಲೋಶಿಪ್’ (Eisenhower Fellowship) ಪಡೆದ ಭಾರತದ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರು ಎಂಬುದು ಹೆಮ್ಮೆಯ ವಿಷಯ.
🤝 ಜನ ಸೇವೆಯೇ ಜನಾರ್ಧನ ಸೇವೆ:-
ಸಾರ್ವಜನಿಕ ಸಹಕಾರ ಮತ್ತು ಕೊಡುಗೆ ಡಾ, ಮಂಜುನಾಥ ಭಂಡಾರಿಯವರು ಕೇವಲ ರಾಜಕಾರಣಿಯಾಗಿ ಮಾತ್ರವಲ್ಲದೆ, ಸಾರ್ವಜನಿಕರಿಗೆ ಅನೇಕ ಜನಪದ ಯೋಜನೆಗಳ ಮೂಲಕ ನೆರವಾಗಿದ್ದಾರೆ:
ಶೈಕ್ಷಣಿಕ ಕ್ರಾಂತಿ (ಸಹ್ಯಾದ್ರಿ ಸಂಸ್ಥೆ):-
ಮಂಗಳೂರಿನಲ್ಲಿ ಅವರು ಸ್ಥಾಪಿಸಿದ ‘ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್’ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಅನಾಥ ಮಕ್ಕಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಇಲ್ಲಿ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ.
ಸಿ.ಎಸ್.ಸಿ (CSC) ಪಿತಾಮಹ:-
ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗ ನೀಡುವ ಸಲುವಾಗಿ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ‘ರಾಜೀವ್ ವಿಕಾಸ್ ಕೇಂದ್ರ’ ಯೋಜನೆಯೇ ಇಂದು ದೇಶಾದ್ಯಂತ ಇರುವ ‘ಕಾಮನ್ ಸರ್ವಿಸ್ ಸೆಂಟರ್’ (CSC) ಗಳಾಗಿ ಮಾರ್ಪಾಡಾಗಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದೆ.
ಇಂದಿರಾ ಜ್ಯೋತಿ ಯೋಜನೆ:-
ಬಡ ಕುಟುಂಬಗಳಿಗೆ ಅಡುಗೆ ಅನಿಲ (LPG) ಸಂಪರ್ಕ ಒದಗಿಸುವ ‘ಇಂದಿರಾ ಜ್ಯೋತಿ’ ಯೋಜನೆಯ ನೀಲನಕ್ಷೆ ಸಿದ್ಧಪಡಿಸುವಲ್ಲಿ ಇವರ ಪಾತ್ರ ಮುಖ್ಯವಾಗಿತ್ತು.
ಆರೋಗ್ಯ ಜಾಗೃತಿ:-
ದೇಶದ ಯುವ ಜನರಲ್ಲಿ ಏಡ್ಸ್ (HIV/AIDS) ಜಾಗೃತಿ ಮೂಡಿಸಲು ಇವರು ಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಭಾಗವಹಿಸಿ ಸಮಾಜದ ಆರೋಗ್ಯ ಕಾಪಾಡಿದ್ದಾರೆ.
📢 “ಶಿಕ್ಷಣ ಮತ್ತು ಸಾಮಾಜಿಕ ಕಳಕಳಿಯೇ:-
ದೇಶದ ಅಭಿವೃದ್ಧಿಗೆ ಮೂಲಮಂತ್ರ. ನಮ್ಮ ಸರ್ಕಾರವು ಜನರ ಆಶೋತ್ತರಗಳಿಗೆ ಸ್ಪಂದಿಸುವ ಬಜೆಟ್ ಮಂಡಿಸಿದ್ದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಪ್ರಗತಿಗೆ ವೇಗ ನೀಡಲಿದೆ.”
ವರದಿ:ಆರತಿ.ಗಿಳಿಯಾರು.ಉಡುಪಿ

