ಯುವ ಕವಿ ತರುಣ್.ಎಂ ಆಂತರ್ಯ ಅವರ ಕೃತಿಗೆ – ರಾಜ್ಯ ಮಟ್ಟದ ಗೌರವ.
ಟಿ.ನಾಗೇನಹಳ್ಳಿ ಮಾ.07

ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಸಹಾಯಧನಕ್ಕೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಟಿ.ನಾಗೇನಹಳ್ಳಿ ಗ್ರಾಮದ ಯುವ ಕವಿ “ತರುಣ್.ಎಂ ಆಂತರ್ಯ” ಅವರ “ಬಿಗಿ ಹಿಡಿದ ಮುಷ್ಟಿಯಲಿ” ಕವನ ಸಂಕಲನ ಆಯ್ಕೆ ಯಾಗಿದ್ದು, ಮಾರ್ಚ್ 10 ರಂದು ಬೆಂಗಳೂರಿನ ಕನ್ನಡ ಭವನದ, ನಯನ ರಂಗ ಮಂದಿರದಲ್ಲಿ, ಹೆಸರಾಂತ ಲೇಖಕರು ಹಾಗೂ ಚಲನ ಚಿತ್ರ ನಿರ್ದೇಶಕರಾದ ಡಾ, ನಾಗತಿಹಳ್ಳಿ ಚಂದ್ರಶೇಖರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

