ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ – ಸೂಲಗಿತ್ತಿ ತಿಮ್ಮಕ್ಕಗೆ ಸನ್ಮಾನ.
ಚಳ್ಳಕೆರೆ ಮಾ.11

ನಗರದ ವೀರಶೈವ ಮಹಿಳಾ ಸಂಘದ ವತಿಯಿಂದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ಯ ಪ್ರಯುಕ್ತ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕಗೆ ಸನ್ಮಾನಿಸಿ ಗೌರವಧನ ನೀಡಿ ಗೌರವಿಸಲಾಯಿತು.
“ಸಂಸ್ಕೃತಿ ಮತ್ತು ಸಂಪ್ರಾದಯಗಳ ಉಳುವಿನಲ್ಲಿ ಮಹಿಳೆಯ ಪಾತ್ರ”ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ನಿರ್ದೇಶಕಿ ಶ್ರೀಮತಿ ಗೀತಾ ಪ್ರಕಾಶ್ ಅವರು ಭಾರತೀಯ ಸನಾತನ ಪರಂಪರೆಯ ಸಂಸ್ಕೃತಿ ಮತ್ತು ವಿಶಿಷ್ಟ ಸಂಪ್ರದಾಯಗಳನ್ನು ಮಹಿಳೆಯರು ಪ್ರತಿನಿತ್ಯ ತಮ್ಮ ದೈನಂದಿನ ಜೀವನದಲ್ಲಿ ಆಚರಣೆಗೆ ತರುವ ಮೂಲಕ ಅವುಗಳನ್ನು ಉಳಿಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು.

ಇದರ ಭಾಗವಾಗಿ ಮಕ್ಕಳಲ್ಲಿ ಉತ್ತಮ ಸಾಂಸ್ಕೃತಿಕ ಮೌಲ್ಯಗಳನ್ನು ತುಂಬಿ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿ ಅವರನ್ನು ಸಾಂಸ್ಕೃತಿಕ ರಾಯಭಾರಿಗಳಾಗಿ ಮಾಡಬೇಕು ಕಿವಿಮಾತು ಹೇಳಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ವೀರಶೈವ ಮಹಿಳೆಯರಿಂದ ಭಾರತದ ವಿವಿಧ ರಾಜ್ಯಗಳ ಉಡುಗೆ-ತೊಡಿಗೆಗಳ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ವೀರಶೈವ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಪದ್ಮ ನಾಗರಾಜ್, ಕಾರ್ಯದರ್ಶಿ ಮಂಜುಳಾ ನಾಗರಾಜ್, ನಿರ್ದೇಶಕರಾದ ಗೀತಾ ಪ್ರಕಾಶ್, ಸುನೀತಾ, ಸುಮಾ, ಮಮತಾ, ವನಜಾ, ಸೌಮ್ಯಲತಾ, ಮಂಗಳಾ, ಕವಿತಾ, ಕಾಲುವೆಹಳ್ಳಿ ಪಾಲಕ್ಕ, ಕರೀಕೆರೆ ಮಂಜುಳಾ, ಪ್ರಮೀಳಾ, ತಳುಕಿನ ತೊಯಜಾಕ್ಷಿ, ಜಗದಂಬಾ, ಶಾಂತಮ್ಮ, ರತ್ನಮ್ಮ, ಪುಷ್ಪಲತಾ, ಗೀತಾ ನಾಗರಾಜ್, ಅನಿತಾ, ಜಾನಕಿ, ಶೈಲಜಾ, ವಿಶಾಲಾಕ್ಷಿ, ಯಶೋಧಾ, ಶಾರದಾ, ತಿಪ್ಪಮ್ಮ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವೀರಶೈವ ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

