ಶಾರದಾಮಾತೆಯವರಿಂದ ಮೊದಲ ಮಂತ್ರ ದೀಕ್ಷೆ ಪಡೆದವರು ಸ್ವಾಮಿ ಯೋಗಾನಂದರು – ಶ್ರೀಮತಿ ಎಚ್. ಲಕ್ಷ್ಮೀದೇವಮ್ಮ.
ಚಳ್ಳಕೆರೆ ಮಾ.12

ಶ್ರೀಮಾತೆ ಶಾರದಾದೇವಿಯವರಿಂದ ಮೊದಲ ಮಂತ್ರ ದೀಕ್ಷೆ ಪಡೆದವರು ಸ್ವಾಮಿ ಯೋಗಾನಂದರು ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ಸುವರ್ಣ ನಾಗರಾಜ್ ಅವರ ಮಾತೃಶ್ರೀ ನಿವಾಸದಲ್ಲಿ “ಸ್ವಾಮಿ ಯೋಗಾನಂದ” ರ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಸ್ವಾಮಿ ಯೋಗಾನಂದರ ಜೀವನ ಮತ್ತು ವ್ಯಕ್ತಿತ್ವ”ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಜಯಂತೋತ್ಸವದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರಿಮತಿ ಸುನೀತಾ ಗೋಪಾಲಕೃಷ್ಣ, ಮಾಕಂಸ್ ಲಕ್ಷ್ಮೀ ಬಾಲಾಜೀ, ರತ್ನಮ್ಮ ಜಯಚಂದ್ರ, ಗೀತಾ ಪ್ರಕಾಶ್ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಸುವರ್ಣ ನಾಗರಾಜ್, ಅನ್ನಪೂರ್ಣ, ಮಂಜುಳಾ, ಪುಷ್ಪಾ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ ರಾಜು, ಸರಸ್ವತಿ ನಾಗರಾಜ್, ಅನುಸೂಯ ರಾಘವೇಂದ್ರ, ಸರ್ವಮಂಗಳ ಶಿವಣ್ಣ, ಗೀತಾ ಸುಂದರೇಶ್ ದೀಕ್ಷಿತ್, ಪ್ರಮೀಳಾ ಜಗದೀಶ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

