ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ – ಬೆಂಗಳೂರಿಗೆ ಚೆಲೋ.

ಮುದ್ದೇಬಿಹಾಳ ಮಾ.12

ಮುದ್ದೇಬಿಹಾಳ ತಾಲೂಕಿನ ವಿವಿಧ ಗ್ರಾಮಗಳಿಂದ ಮಾದಿಗ ಸಮುದಾಯದ ಪ್ರಮುಖ ಮುಖಂಡರು, ಯುವಕರು ಮಾದಿಗ ಒಳ ಮೀಸಲಾತಿಗೆ ಆಗ್ರಹಿಸಿ “ಮಾಡು ಇಲ್ಲವೇ ಮಡಿ” ‘ಬೆಂಗಳೂರಿಗೆ ಚೆಲೋ’ ಒಳ ಮೀಸಲಾತಿಯನ್ನು ಯಥಾವತ್ತಾಗಿ ಜಾರಿ ಗೊಳಿಸಬೇಕು ಎಂದು ಆಗ್ರಹಿಸಿ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾದಿಗ ಸಮುದಾಯದ ಒಕ್ಕೂಟದ ಸಂಘಟನೆ ವತಿಯಿಂದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ಮುದ್ದೇಬಿಹಾಳ ತಾಲೂಕಿನಿಂದ ಮಾದಿಗ ಸಮುದಾಯದ ಯುವಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ರಾಜ್ಯದಲ್ಲಿ ಪರ್ಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದು ಅದನ್ನು ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಈ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ಮುದ್ದೇಬಿಹಾಳ ತಾಲೂಕಿನ ವಿವಿಧ ಗ್ರಾಮಗಳಿಂದ ಯುವಕರು, ಸಮಾಜದ ಮುಖಂಡರು, ಹಾಗೂ ಕಾರ್ಯಕರ್ತರು ಸೇರಿಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತೆರಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡರು, “ಪರಿಶಿಷ್ಟ ಜಾತಿಗೆ ಗೋಳಗಿನ ಹಿಂದುಳಿದ ಸಮುದಾಯಗಳಿಗೆ ನ್ಯಾಯ ದೊರೆಯ ಬೇಕಾದರೆ ಒಳ ಮೀಸಲಾತಿ ಜಾರಿ ಯಾಗಬೇಕು. ಸರ್ಕಾರ ಈಗಾಗಲೇ ಈ ಕುರಿತು ಕ್ರಮ ಕೈಗೊಂಡಿದ್ದರೂ ಅದನ್ನು ಯಥಾವತ್ತಾಗಿ ಜಾರಿಗೆ ತರುವಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದಲೇ ಮಾದಿಗ ಸಮುದಾಯದ ಸಂಘಟನೆಗಳು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುತ್ತಿವೆ” ಎಂದು ಹೇಳಿದರು. ಹೋರಾಟದಲ್ಲಿ ಭಾಗವಹಿಸಲು ತೆರಳಿದ ಯುವಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಮನವರಿಕೆ ಮಾಡಿ ಕೊಡುವ ಸಂಕಲ್ಪ ವ್ಯಕ್ತಪಡಿಸಿದರು.

ಈ ಸಂದರ್ಭ ದಲ್ಲಿ ಮುದ್ದೇಬಿಹಾಳ ತಾಲೂಕಿನ ವಿವಿಧ ಗ್ರಾಮಗಳ ಮಾದಿಗ ಸಮುದಾಯದ ಯುವಕರು ಹಾಗೂ ಮುಖಂಡರಾದ, ತಿಪ್ಪಣ್ಣ ದೊಡ್ಮನಿ, ರವಿ ಬಸರಕೋಡ್, ದೇವೇಂದ್ ಹೊಸಮನಿ, ಬಸವರಾಜ ನಾಗರಬೆಟ್ಟ, ರಾಮು ತಂಬೂರಿ, ಭೀಮಣ್ಣ ಲೋಟಗೇರಿ, ದಂಡೆಪ್ಪ ನಾಗರಬೆಟ್ಟ, ಮರಿಯಪ್ಪ ವಾಳದವರ, ರಮೇಶ್ ಕವಡಿಮಟ್ಟಿ, ಹನುಮಂತ ಕಡಿಮಟ್ಟಿ, ರಾಹುಲ್ ಪಿರಂಗಿ, ಮಂಜುನಾಥ್ ತಂಗಡಗಿ, ಮಹಾಂತೇಶ್ ಸೋಮನಾಳ, ಬಾಬು ತಂಗಡಗಿ, ಪ್ರಭು ಗೋನಾಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button