ಬಂಜಾರ ವಿಶ್ವಕೋಶ ರಚನೆಗಾಗಿ ಅನುದಾನ ನೀಡಿದ – ಸರ್ಕಾರಕ್ಕೆ ಬಂಜಾರ ಸಮುದಾಯದಿಂದ ಅಭಿನಂದನೆಗಳು.
ದಾವಣಗೆರೆ ಮಾ.12

2026/27 ನೇ. ಸಾಲಿನ ವಾರ್ಷಿಕ ಬಡ್ಜೆಟ್ ನಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದಂತಹ ಸಿದ್ದರಾಮಯ್ಯನವರು ಬಂಜಾರ ಸಾಂಸ್ಕೃತಿಕ ವಿಶ್ವಕೋಶ ರಚನೆಗೆ ಅನುದಾನ ಘೋಷಿಸಿರುವುದು ಸ್ವಾಗತ ಬೆಳವಣಿಗೆ ಬಂಜಾರ ಸಮುದಾಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ಒಳಗೊಂಡ 5 ಸಂಪುಟಗಳ ಈ ಕಾರ್ಯಕ್ಕೆ ಘನ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತೋಷದ ವಿಷಯವಾಗಿದೆ ಹಾಗಾಗಿ ಕರ್ನಾಟಕದ ಸಮಸ್ತ ಬಂಜಾರ ಸಮುದಾಯದ ಪರವಾಗಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯರಾದ ಡಾ, ಉತ್ತಮ.ಕೆ ಹೆಚ್ ಅವರು ಕರ್ನಾಟಕ ಸರ್ಕಾರ ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳಾದಂತಹ ಸಿದ್ದರಾಮಯ್ಯನವರು ಹಾಗೂ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದಂತಹ ಡಿ.ಕೆ ಶಿವಕುಮಾರ್ ಅವರಿಗೆ ಎಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

