ವಿಜ್ಞಾನ ಶಿಕ್ಷಕರಾದ ಶ್ರೀ ಸಿದ್ದೇಶ.ಟಿ ಎಸ್ ಅವರು ಇಕೋ ಕ್ಲಬ್ ವಿಜ್ಞಾನ ಸಂಘ ದಿಂದ ಮಕ್ಕಳಿಗೆ – ಬಹುಮಾನ ವಿತರಿಸಿದರು.

ಗಂಗನಕಟ್ಟೆ ಮಾ.13

ದಿನಾಂಕ 13/3/2026 ರ ಶುಕ್ರವಾರ ದಂದು ಗಂಗನಕಟ್ಟೆಯ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ 2025/2026 ನೇ. ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಾಗೆಯೇ ಶಾರದಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಹಾಲಸ್ವಾಮಿ.ಎಂ ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹತ್ತನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಇದೇ ತಿಂಗಳ 18 ರಿಂದ ಪ್ರಾರಂಭವಾಗಲಿದ್ದು, ಸಮಯ ವ್ಯರ್ಥ ಮಾಡದೆ ಅಭ್ಯಾಸದಲ್ಲಿ ತೊಡಗುವಂತೆ ಕಿವಿಮಾತು ಹೇಳಿದರು.

ಪರೀಕ್ಷಾ ಕೊಠಡಿಯಲ್ಲಿ ಅತ್ಯಂತ ಜಾಗರೂಕತೆ ಯಿಂದ ಹಾಗೂ ಕೊಠಡಿ ಮೇಲ್ವಿಚಾರಕರ ಅನುಮಾನಕ್ಕೆ ಆಸ್ಪದ ನೀಡದಂತೆ ಪರೀಕ್ಷೆಯನ್ನು ಬರೆಯುವಂತೆ ತಿಳಿಸಿದರು.

ಪ್ರತಿ ಕೊಠಡಿಯಲ್ಲಿಯೂ ಸಿ.ಸಿ.ಟಿ.ವಿ ಇರುವುದರಿಂದ ಮತ್ತು ವೆಬ್ ಕಾಸ್ಟಿಂಗ್ ಆಗುವುದರಿಂದ ಅವೆಲ್ಲವನ್ನು ಗಮನದಲ್ಲಿಟ್ಟು ಕೊಂಡು ಪರೀಕ್ಷೆ ಬರೆಯುವಂತೆ ತಿಳಿಸಿದರು.

ವಿದ್ಯಾರ್ಥಿಗಳಾದ ಕುಮಾರಿ ಜ್ಯೋತಿ, ಅಮೃತ, ದೀಕ್ಷಿತ, ಪಲ್ಲವಿ ಮತ್ತು ಸಂಜಯ್ ಈ ವಿದ್ಯಾರ್ಥಿಗಳು ತಮ್ಮ ಮೂರು ವರ್ಷದ ಅನುಭವಗಳನ್ನು ಹಂಚಿಕೊಂಡರು.ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಪೆನ್ಸಿಲ್ ನೀಡುವುದರೊಂದಿಗೆ ಶುಭ ಹಾರೈಸಿದರು.

ಅದೇ ರೀತಿಯಲ್ಲಿ ಎಲ್ಲಾ ಶಿಕ್ಷಕ ವೃಂದದವರು ತಮ್ಮ ಅನುಭವಗಳನ್ನು ಹಂಚಿಕೊಂಡು ಉತ್ತಮ ಫಲಿತಾಂಶವನ್ನು ತಂದು ಕೊಡುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಹರಸಿದರು.ಕಾರ್ಯಕ್ರಮವನ್ನು 9 ನೇ. ತರಗತಿಯ ವಿದ್ಯಾರ್ಥಿಯಾದ ದೀಕ್ಷಿತ್.ಎನ್ ಆರ್ ಅವರು ಕಾರ್ಯಕ್ರಮ ನಡೆಸಿ ಕೊಟ್ಟರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button