ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 15 ರಂದು – ಪ್ರಶಸ್ತಿ ಪ್ರಧಾನ ಸಮಾರಂಭ ಜರುಗುವುದು.

ಹುಲ್ಲೂರು ಮಾ.13

ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರಿನ ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಚನ್ನ ಬಸವ ಶ್ರೀ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ.

ಮಾರ್ಚ 15 ರಂದು ಸಾಯಂಕಾಲ 3 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಒಟ್ಟು 32 ಜನ ಸಾಧಕರನ್ನು ಆಯ್ಕೆ ಗೊಳಿಸಲಾಗಿದೆ.

ಹೊರಾಟದಲ್ಲಿ ಶ್ರೀ ಹರಿಶ ನಾಟಿಕಾರ. ಸಮಾಜ ಸೆವೆಯಲ್ಲಿ ಶ್ರೀ ಕುಮಾರ ಹೀರೆಮಠ ಪತ್ರಿಕಾ ಕ್ಷೇತ್ರದಲ್ಲಿ ಸಾಗರ ಉಕ್ಕಲಿ ಮಾದ್ಯಮ ಕ್ಷೇತ್ರದಲ್ಲಿ ಜಿ.ವಾಯ್ ದಪೆದಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಒಟ್ಟು 25 ಜನ ಶಿಕ್ಷಕರನ್ನು ಆಯ್ಕೆ ಗೊಳಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಮ್.ಎಸ್ ಕೊಪ್ಪ ಅವರು ಪ್ರಕಟಣೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯರಝರಿಯ ಯಲ್ಲಾಲಿಂಗ ಮಾಹಾಸ್ವಾಮಿಗಳು ವಹಿಸುವರು ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟಿಸುವರು ನೇತೃತ್ವವನ್ನು ಶಿ.ಸಂ ಅದ್ಯಕ್ಷರಾದ ಶ್ರೀ ಬಿ ಎಚ್ ಮುದ್ನುರ ವಹಿಸುವರು ಉಪಸ್ಥಿತಿ ಆರ್.ಬಿ ದಂಬುರಮಠ, ಮುಖ್ಯ ಅಥಿತಿಗಳಾಗಿ ಶ್ರೀ ಎಮ್.ಎಮ್ ಬೆಳಗಲ್, ಶ್ರೀ ಅರವಿಂದ ಹೂಗಾರ, ಶ್ರೀ ಎನ್.ಎಸ್ ತುರಡಗಿ ವಹಿಸುವರೆಂದು ಶಾಲಾ ಮುಖ್ಯ ಗುರು ಮಾತೆಯರಾದ ಶ್ರೀಮತಿ ರೇಖಾ ರವರು ತಿಳಿಸಿದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button