ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿ ಮೇಲೆ ಬಿದ್ದ ಪರಿಣಾಮ – ಲಾರಿ ಹರಿದು ಅಜ್ಜ, ಮೊಮ್ಮಗಳು ಸಾವು.
ಕ್ಯಾಸನಕೆರೆ ಮಾ.13

ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಬಳಿ ಲಾರಿ ಹರಿದು ಅಜ್ಜ ಮೊಮ್ಮಗಳು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಗುರುವಾರ ನಡೆದಿದೆ.
ಈಶ್ವರಪ್ಪ (55) ಹಾಗೂ ಅತನ ಮೊಮ್ಮಗಳು ಸೃಷ್ಟಿ (14) ಮೃತರು. ತಾಲ್ಲೂಕಿನ ಕೆಳಗಿನ ಕರ್ನಾರ್ ಹಟ್ಟಿ ಗ್ರಾಮದ ಸೃಷ್ಟಿ ಕೂಡ್ಲಿಗಿ ಪಟ್ಟಣದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8 ನೇ. ತರಗತಿ ಓದುತ್ತಿದ್ದು, ಗುರುವಾರ ವಾರ್ಷಿಕ ಪರೀಕ್ಷೆ ಮುಗಿದ ಕಾರಣ ಸೃಷ್ಟಿಯನ್ನು ಬೈಕಿನಲ್ಲಿ ಕರೆದು ಕೊಂಡು ತಮ್ಮ ಸ್ವಗ್ರಾಮಕ್ಕೆ ಹೋಗಲೆಂದು ಕ್ಯಾಸನಕೆರೆ ಬಳಿ ಬಂದಾಗ ಹೆದ್ದಾರಿಯಲ್ಲಿ ಹಾಕಿದ್ದ ರಾಗಿ ಮೇಲೆ ಬೈಕ್ ಹೋದಾಗ ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿಗೆ ಬಿದ್ದಿದ್ದಾರೆ.
ಇದೇ ವೇಳೆ ಹಿಂದೆ ಬಂದ ಲಾರಿ ಇಬ್ಬರ ಮೇಲೆ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಅಜ್ಜ ಮೊಮ್ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

