ಪಡಿತರ ಅಕ್ಕಿ 360 ಚೀಲ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ – ಖಚಿತ ಮಾಹಿತಿ ಮೇರೆಗೆ ಅಕ್ಕಿ ವಶ.

ಕ್ಯಾಸನಕೆರೆ ಮಾ.13

ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಪಡಿತರದ 360 ಚೀಲ ಅಕ್ಕಿಯನ್ನು ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಮಂಗಳವಾರ ರಾತ್ರಿ ಪೊಲೀಸರು ಹಾಗೂ ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ.ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ.

ಎಂಬ ಖಚಿತ ಮಾಹಿತಿ ಮೇರೆಗೆ ಕೂಡ್ಲಿಗಿ ತಾಲ್ಲೂಕು ಕಚೇರಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಶಿರೆಸ್ತೇದಾರ್ ಕಮಲಾ ಗುಡ್ಡಪ್ಪನವರ್, ಆಹಾರ ನಿರೀಕ್ಷಕಿ ವಾಣಿಶ್ರೀ ಕಂದಾಯ ನಿರೀಕ್ಷಿಕ ತಳವಾರ ಪ್ರಭು ಮತ್ತು ಕೂಡ್ಲಿಗಿ ಠಾಣೆಯ ಎಎಸೈ ಬಸವರಾಜ ಶೆಟ್ಟಿ ಅವರಿದ್ದ ತಂಡ ಕ್ಯಾಸನಕೆರೆ ಬಳಿ ಲಾರಿ ಹಾಗೂ ಅದರಲ್ಲಿದ್ದ 4 ಲಕ್ಷಕ್ಕೂ ಅಧಿಕ ಬೆಲೆ ಬಾಳುವ 360 ಚೀಲ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ವಶ ಪಡಿಸಿಕೊಂಡ ಅಕ್ಕಿಯನ್ನು ಕೊಟ್ಟೂರು ಎಪಿಎಂಸಿಯಲ್ಲಿನ ಆಹಾರ ನಿಗಮದ ಗೋದಾಮಿನಲ್ಲಿ ಸಂಗ್ರಹಿಸಿದ್ದಾರೆ ಎಂದು ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button