21 ವರ್ಷಗಳ ಅಮೋಘ ಸೇವೆಗೆ ‘ಇಂಡಿಯನ್ ಐಕಾನ್ ಅವಾರ್ಡ್’ – ಯುವರಾಜ್.ದೊಡ್ಡಮನಿ ಅವರಿಗೆ ಗೌರವ.

ಬಣವಿಕಲ್ಲು ಮಾ.13

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಶ್ರೀ ಏ.ಕೆ ಯುವರಾಜ್ ದೊಡ್ಡಮನಿ ಅವರಿಗೆ “ಇಂಡಿಯನ್ ಐಕಾನ್ ಅವಾರ್ಡ್” ಪ್ರಶಸ್ತಿ ಲಭಿಸಿರುವುದು ಪ್ರದೇಶದ ಜನತೆಗೆ ಸಂತಸದ ವಿಚಾರವಾಗಿದೆ.

ಪ್ರಸ್ತುತ ಅವರು ಸರ್ಕಾರಿ ಬಾಲಕರ ಪ್ರೌಢ ಶಾಲೆ ಚಿಕ್ಕಜೋಗಿಹಳ್ಳಿಯಲ್ಲಿ ಪ್ರಯೋಗಾಲಯ ಸಹಾಯಕರಾಗಿ (“D” ಗ್ರೂಪ್) ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಸುಮಾರು 21 ವರ್ಷಗಳಿಂದ ಅಮೋಘ ಸೇವೆ ಸಲ್ಲಿಸುತ್ತಿದ್ದಾರೆ. ಗುಡೆಕೋಟೆಯ ಕೆ.ಪಿ.ಎಸ್ ಪ್ರೌಢ ಶಾಲೆಯಲ್ಲಿ ಸಹ ಹಲವು ವರ್ಷಗಳ ಕಾಲ ಸೇವೆ ನಿರ್ವಹಿಸಿ ಶಾಲೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ಶಾಲೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲೆಡೆ ವಿದ್ಯಾರ್ಥಿಗಳ ಪ್ರಗತಿ, ಶಿಸ್ತಿನ ಅರಿವು ಮತ್ತು ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ಸೇವೆಯನ್ನು ಗುರುತಿಸಿ ಕರ್ನಾಟಕದ K.S.S. ಫೌಂಡೇಶನ್ ವತಿಯಿಂದ “ಇಂಡಿಯನ್ ಐಕಾನ್ ಅವಾರ್ಡ್” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದೇ ತಿಂಗಳ 15 ರಂದು ದಾವಣಗೆರೆಯಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಾಧನೆ ಹಿನ್ನೆಲೆಯಲ್ಲಿ ಕೆ.ಪಿ.ಎಸ್ ಶಾಲೆಯ ಮುಖ್ಯ ಗುರುಗಳು ಹಾಗೂ ಪಾಂಡುರಂಗ ಸರ್, ಸಿಬ್ಬಂದಿ ವರ್ಗದವರು, ಶಾಲಾ ಶಿಕ್ಷಣ ಇಲಾಖೆಯ ಬಳ್ಳಾರಿ ಉಪ ನಿರ್ದೇಶಕರ ಕಚೇರಿಯ ಅಧೀಕ್ಷಕರಾದ ಮಹಮ್ಮದ್ ರಫೀಕ್ ಸರ್ ಮತ್ತು ಶಿಕ್ಷಕರಾದ ಹಯಾದ್ ಭಾಷಾ ಸರ್ ಅವರು ಯುವರಾಜ್ ದೊಡ್ಡಮನಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಯುವರಾಜ್ ದೊಡ್ಡಮನಿ ಅವರು ಶಾಲಾ ಸಮುದಾಯದಷ್ಟೇ ಅಲ್ಲದೆ ಗ್ರಾಮೀಣ ಸಮಾಜದ ಅಭಿವೃದ್ಧಿಗೂ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಚ್ಛತಾ ಜಾಗೃತಿ, ಶಿಸ್ತಿನ ಅರಿವು ಮತ್ತು ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉತ್ತಮ ಮಾದರಿ ಯಾಗಿದ್ದಾರೆ.

ಬಡ ಕುಟುಂಬದಿಂದ ಬಂದಿರುವ ಯುವರಾಜ್ ಅವರ ತಂದೆ ಜೆ. ನಿಂಗಪ್ಪ ಅವರು ಸಹ ಅನೇಕ ವರ್ಷಗಳ ಕಾಲ ಗುಡೆಕೋಟೆಯ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.

ಇವರ ಅಣ್ಣ ಡಾ, ಲೋಕ ರಾಜ್ ದೊಡ್ಡಮನಿ ಅವರು ಮರಿಯಮ್ಮನಹಳ್ಳಿಯ ಡಿಗ್ರಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಸಹೋದರರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇದೇ ವೇಳೆ ಸರ್ಕಾರಿ ಬಾಲಕರ ಪ್ರೌಢ ಶಾಲೆ ಚಿಕ್ಕಜೋಗಿಹಳ್ಳಿಯ ಮುಖ್ಯ ಗುರುಗಳಾದ ಸಕಲೇಶ್ವರ ಪಿ.ಜಿ. ಸರ್ ಹಾಗೂ ಸಿಬ್ಬಂದಿಗಳಾದ ಅಂಬಿಕಾ ಆರ್.ವಿ ಮಾರಪ್ಪ, ಮುತ್ತುರಾಜ್ ಎಂ.ಎಸ್ ಭರತೇಶ್ ಕುಮಾರ್ ಬಿ.ಎಂ ತ್ರಿಶೂಲ್ ಕುಮಾರ್ ಡಿ.ಎಂ ಅಶ್ರೀಪಾ ಉನ್ನೀಸಾ, ಮೇಘ ಬಿ. ನಾಗರಾಜ್ ಪಿ. ಸರೋಜಮ್ಮ ಸೇರಿದಂತೆ ಬಣವಿಕಲ್ಲು ಗ್ರಾಮದ ಗ್ರಾಮಸ್ಥರು ಮತ್ತು ಸ್ನೇಹಿತರು ಯುವರಾಜ್ ದೊಡ್ಡಮನಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button