ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರಧಾನ,ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಬೆಳೆಸುತ್ತಿರುವುದು ಸಾಹಸದ ಕಾರ್ಯ – ಧಮ್ಮೂರಮಠ.
ಮುದ್ದೇಬಿಹಾಳ ಮಾ.16

ನಗರ ಪ್ರದೇಶಗಳಲ್ಲಾದರೆ ಸಂಸ್ಥೆಗಳು ಕೇಳಿದಷ್ಟು ಶುಲ್ಕ ಕೊಡಲು ಪಾಲಕರು ಸಿದ್ಧರಿರುತ್ತಾರೆ. ಅಲ್ಲಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವುದು ದೊಡ್ಡ ಮಾತಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ ಅಲ್ಲಿ ಮಕ್ಕಳಿಗೆ ಶಿಕ್ಷಣವೇ ಪ್ರಧಾನವಾಗಿ ಕೊಡುವ ಸಂಸ್ಥೆಗಳನ್ನು ಬೆಳೆಸುವುದು ಸಾಹಸದ ಕಾರ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ ಧಮ್ಮೂರಮಠ ಹೇಳಿದರು.
ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಚೆನ್ನಬಸವ ಶ್ರೀ ಎಜ್ಯುಕೇಷನ್ ರೂರಲ್ ಕಲ್ಚರಲ್ ಸೊಸೈಟಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಚೆನ್ನಬಸವ ಶ್ರೀ ಸ್ಕಾಲರ್‌ಶಿಪ್ ಎಕ್ಸಾಮ್‌ನಲ್ಲಿ ವಿಜೇತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಳ ಮಟ್ಟದಲ್ಲಿ ಬೆಳೆದು ಬಂದಿರುವ ಮಂಜುನಾಥ ಕೊಪ್ಪ ಅವರು ಇಂದು ಹಳ್ಳಿಗಾಡಿನಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ 500 ಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ ಕೊಡುತ್ತಿರುವುದು ಸಾಧನೆಯ ಮೈಲುಗಲ್ಲು. ಕಷ್ಟ ಪಟ್ಟರೆ ಎಂತಹ ಕೆಲಸವನ್ನು ಸಾಧಿಸಬಹುದು ಎಂಬುದಕ್ಕೆ ಕೊಪ್ಪ ಅವರೇ ನಿದರ್ಶನ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎ ಬೆಳಗಲ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹೆದರ ಬಾರದು.ವಿದ್ಯಾರ್ಥಿಗಳು ಹೇಗೆ ಓದಬೇಕು ಎಂದರೆ ಪರೀಕ್ಷೆಯ ಫಲಿತಾಂಶ ಬಂದಾಗ ವಿದ್ಯಾರ್ಥಿಗಳ ಹೆಸರನ್ನು ರಾಜ್ಯವೇ ಎಲ್ಲಾ ಕಡೆ ಓದುವಂತಾಗ ಬೇಕು. ಅಂತಹ ಸಾಧನೆ ತೋರಬೇಕು ಎಂದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ ನಾಟೀಕಾರ, ಬಡವರ ಮಕ್ಕಳಿಗೆ ಅವರು ಕೊಟ್ಟಷ್ಟೇ ಶುಲ್ಕ ಪಡೆದು ಕೊಂಡು ಶಿಕ್ಷಣದ ಸೌಲಭ್ಯ ಒದಗಿಸುತ್ತಿರುವ ಇಂತಹ ಶಿಕ್ಷಣ ಸಂಸ್ಥೆಗಳು ಹುಟ್ಟಿ ಕೊಂಡಿರುವುದು ಹೆಮ್ಮೆಯ ಸಂಗತಿ.ಲಕ್ಷಾಂತರ ರೂಪಾಯಿ ಶುಲ್ಕ ಕೊಟ್ಟು ತಮ್ಮ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಕಳಿಸಲು ಆಗದ ಪಾಲಕರಿಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಕೊಡುತ್ತಿರುವ ಶಾಲೆಗಳು ವರದಾನವಾಗಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಪ್ರಭುಗಳು, ನಿವೃತ್ತ ಧೈಹಿಕ ಶಿಕ್ಷಣಾಧಿಕಾರಿ ಎಸ್.ಬಿ ಚಲವಾದಿ, ಸಂಸ್ಥೆಯ ಅಧ್ಯಕ್ಷ ಮಂಜುನಾಥ ಎಸ್.ಕೊಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್ ತುರಡಗಿ ಮಾತನಾಡಿದರು.
ಮೈಲೇಶ್ವರ ಬ್ರಿಲಿಯಂಟ್ ಶಾಲೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಮುದ್ನೂರ, ಶಿಕ್ಷಕಿ ಸುಮಂಗಲಾ ಕೋಳೂರ, ತಾಳಿಕೋಟಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ ವಜ್ಜಲ, ನ್ಯಾಶನಲ್ ಎಸ್.ಎನ್.ಡಿ ಪಬ್ಲಿಕ್ ಶಾಲಾ ಮುಖ್ಯ ಗುರುಮಾತೆ ರೇಖಾ ಎಂ.ಎಸ್ ಇದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಎಂ.ಎಸ್ ಕೊಪ್ಪ ಸ್ವಾಗತಿಸಿದರು.ಜಿ.ಎಚ್ ಗೌರೋಜಿ, ಎಚ್.ಆರ್ ಬಾಗಲಕೋಟ ನಿರೂಪಿಸಿದರು.
ರಾಜ್ಯ ಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರಧಾನ:-
ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ಪತ್ರಕರ್ತರಾದ ಗುಲಾಮಮೊಹ್ಮದ ದಫೇದಾರ, ಸಾಗರಕುಮಾರ ಉಕ್ಕಲಿ, ಹೋರಾಟಗಾರರಾದ ಕುಮಾರಸ್ವಾಮಿ ಹಿರೇಮಠ, ಹರೀಶ ನಾಟೀಕಾರ ಹಾಗೂ ಶೈಕ್ಷಣಿಕ ಕ್ಷೇತ್ರದಿಂದ ಎಸ್.ಎಂ ಜೋಗಿನ (ಅಡವಿ ಸೋಮನಾಳ), ಎಸ್.ಪಿ ಢವಳಗಿ (ಆಲೂರ), ರೇಷ್ಮಾ ಶೇಖ (ಸಾಲೋಡಗಿ), ವೀರೇಶ ಹುಲಮನಿ (ಬಳಬಟ್ಟಿ), ಕಾಶೀನಾಥ ಸೂಳಿಭಾವಿ (ಬಸರಕೋಡ), ವಿಜಯಲಕ್ಷ್ಮಿ ನಿಡಗುಂದಿ (ಢವಳಗಿ), ಎ.ಕೆ ಪೂಜಾರಿ (ಹಡಲಗೇರಿ), ಜಯಶ್ರೀ ಕರಡ್ಡಿ (ಇಂಗಳಗೇರಿ), ಎಸ್.ಜಿನೀರಲಗಿ (ಕೊಣ್ಣೂರ), ಸಂಗಣ್ಣ ಹೊಸಮನಿ (ಮಡಿಕೇಶ್ವರ), ಜ್ಯೋತಿ ಬಿರಾದಾರ (ಮಿಣಜಗಿ), ಎಸ್.ಎಸ್ ಪಾಟೀಲ (ಮುದ್ದೇಬಿಹಾಳ), ಬಸಮ್ಮ ಅಮಾತೆಗೌಡರ (ನಾಲತವಾಡ), ವಿಜಯಲಕ್ಷ್ಮಿ ಭೋವಿ (ರಕ್ಕಸಗಿ), ಎಸ್.ಐ ಪತ್ತಾರ (ತಾಳಿಕೋಟಿ), ವಿ.ಎಸ್ ತೆಗ್ಗಿ (ತಂಗಡಗಿ), ಜಿ.ಬಿ ಬಿರಾದಾರ (ತುಂಬಗಿ), ಭೀಮಪ್ಪ ಮಾದರ (ಹುಲ್ಲೂರ), ಎಂ.ಬಿ ಪಾಟೀಲ (ಹಿರೇಮುರಾಳ), ಆರ್.ಎಂ ಲಮಾಣಿ (ಯರಝರಿ), ಬಿ.ಎ ಉಡಚಣಕರ (ಹುಲ್ಲೂರ ಉರ್ದು), ವಾಯ್.ಎಸ್. ಖಾದ್ರಿ (ಬಿದರಕುಂದಿ ಉರ್ದು), ಎಚ್.ಎಂ ಮಕಾನದಾರ (ಕೊಣ್ಣೂರ ಉರ್ದು), ಯಮನಪ್ಪ ಬಾಗೇವಾಡಿ(ಹುಲ್ಲೂರ), ಎಂ.ಬಿ ಗುಡಗುಂಟಿ (ಹಡಲಗೇರಿ), ನಿಂಗಪ್ಪ ದೊಡಮನಿ (ಹಡಲಗೇರಿ), ಅಬ್ದುಲರಶೀದ ಜಮಾದಾರ (ಮುದ್ದೇಬಿಹಾಳ ಉರ್ದು), ಚಿದಾನಂದ ಗುಡ್ಡದ (ಕೊಡಗಾನೂರ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

