ಭಾಷಾಭಿಮಾನ ಬೆಳೆಸಿ ಕೊಳ್ಳಿ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ – ಡಾ, ಕೆ.ಎಮ್ ವೀರೇಶ್.

ಕೆ.ಹೊಸಹಳ್ಳಿ ಮಾ.16

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ ಕಲೆ ನಾಡು ನುಡಿ, ಜಲ, ನೆಲ, ಭಾಷೆಯ ಅಭಿಮಾನಿರ ಬೇಕು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಬೇಕು. ಉನ್ನತ ಹುದ್ದೆಗಳಿಗೆ ತಲುಪಬೇಕು. ಮತ್ತು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕೆಲಸ ನಾವು ನೀವೆಲ್ಲರೂ ಮಾಡಬೇಕಾಗಿದೆ. ಎಂದು ರಾಜ್ಯ ಉಪಾಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಬಾಪೂಜಿ ಸಮೂಹ ಸಂಸ್ಥೆ ಕಾರ್ಯದರ್ಶಿ ಡಾ, ಕೆ.ಎಮ್ ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಲ್ಲಿನ ಕಾನಾ ಹೊಸಹಳ್ಳಿ ಸೋಫಿಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹೊಸಹಳ್ಳಿ ಇವರ ವತಿಯಿಂದ ದಿ/ ಅಕ್ಕ ಸಾಲಿ ಹೂಲೆಮ್ಮ ಮತ್ತು ನೀಲಕಂಠಚಾರ್ಯ ಸ್ಮರಣೆ ಹಾಗೂ ದತ್ತಿ ಉಪನ್ಯಾಸ ಮತ್ತು ಶ್ರೀ ಕಾಮ ಶೆಟ್ಟಿ ಕೆ ಕಮಲಮ್ಮ ಮತ್ತು ಕೆ ತಿಪ್ಪೇಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್.ಎಂ ರವಿಕುಮಾರ್ ದತ್ತಿ ಉಪನ್ಯಾಸ ಮಾತನಾಡಿ ಕೂಡ್ಲಿಗಿ ತಾಲೂಕಿನಲ್ಲಿ ವಿದ್ವಾಂಸರೆಂದರೆ ಬಿ.ಎಮ್ ಗುರು ಸಿದ್ದಯ್ಯನವರು, ಕೋ ಚನ್ನಬಸಪ್ಪ, ಹಿಮ ನಾಗಯ್ಯ, ವೃಷಭೇಂದ್ರ ಸ್ವಾಮಿ, ಸೋ.ಮ ಚಂದ್ರಶೇಖರಯ್ಯ ಸೇರಿದಂತೆ ಅನೇಕ ವಿದ್ವಾಂಸರು ಈ ನಾಡಿಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು.

ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಕುರಿತು ಕನ್ನಡ ಸಾಹಿತ್ಯಕ್ಕೆ ಮತ್ತು ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಕುರಿತು ಸ್ವವಿವರ ಉಪನ್ಯಾಸ ನೀಡಿದರು.

ಶ್ರೀ ಸಿದ್ದರಾಮೇಶ್ವರ ಜೀವನ ಚರಿತ್ರೆ ಕುರಿತು ಟಿ ಕೆ ಸಿದ್ದರಾಮೇಶ್ವರ ಮಾತನಾಡಿ “ಕಪಿಲಸಿದ್ಧ ಮಲ್ಲಿಕಾರ್ಜುನ” ಎಂಬ ಅಂಕಿತವನ್ನು ಹೊಂದಿದ್ದರು. ಸಿದ್ದರಾಮೇಶ್ವರರು ಶಿವಶರಣರ ಶ್ರಮದಾನ ಮತ್ತು ಸ್ವಯಂ ಸೇವೆಯನ್ನು ಕಾರ್ಯ ರೂಪಕ್ಕೆ ತಂದಿದ್ದರು ಮತ್ತು ಆ ಕಾಲಘಟ್ಟದ ‘ಕಾಯಕ ಪ್ರತಿನಿಧಿ’ ಯಾಗಿ ನಿಲ್ಲುತ್ತಾರೆ.

ಕೆರೆ ಕಟ್ಟೆಗಳ ನಿರ್ಮಾಣ ಸಿದ್ದರಾಮೇಶ್ವರರು ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ನೀರಾವರಿ ಕ್ರಾಂತಿಗೆ ನಾಂದಿ ಹಾಡಿದರು. ಸಾಮಾಜಿಕ ಸೇವೆ ಅವರು ಶಾಂತಿ, ಸಹಬಾಳ್ವೆ ಮತ್ತು ಸಹಕಾರದಿಂದ ಬದುಕುವ ಮೌಲ್ಯಗಳನ್ನು ಪ್ರಚಾರ ಮಾಡಿದರು. ಸಿದ್ದರಾಮೇಶ್ವರರು 1162 ವಚನಗಳನ್ನು ರಚಿಸಿದ್ದಾರೆ, ಅವು ವೈಯುಕ್ತಿಕ ಬದುಕಿನ ಸಂಗತಿಗಳು, ಧರ್ಮತತ್ವ, ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡಿವೆ. ಸಿದ್ದರಾಮೇಶ್ವರರ ಜೀವನ ಮತ್ತು ಸಾಧನೆಗಳು ಸಮಾಜಕ್ಕೆ ಪ್ರೇರಣೆಯಾಗಿವೆ ಮತ್ತು ಅವರ ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸಿದ್ದರು. ಎಂದು ಟಿ.ಕೆ ಸಿದ್ದರಾಮೇಶ್ವರ ನುಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಶ್ರೀ ಐಮಡಿ ಶರಣಾರ್ಯರು ಧರ್ಮಧಿಕಾರಿಗಳು ದಾಸೋಹ ಮಠ ಕಾನಮಡುಗು, ಅಧ್ಯಕ್ಷತೆಯನ್ನು ಡಾ. ವೃಷಭೇಂದ್ರ ಚಾರ್ ,ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಈ ಜಗನ್ನಾಥ್, ವೆಂಕಟೇಶ್ವರರಾವ್, ಕೆ ಸುಭಾಷ್ ಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಎಸ್ ತಿಪ್ಪೇಸ್ವಾಮಿ,ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕ ಕೆ.ಎಸ್ ವೀರೇಶ್, ಸೀತರಾಮ ರೆಡ್ಡಿ, ಸಿದ್ದಪ್ಪ, ಜಲಜಾಕ್ಷಿ, ಚಂದ್ರಶೇಖರ, ಮಾಧವಿ, ಸಿರಿ, ಶರಣಗೌಡ,ಕರಿ ಬಸಣ್ಣ, ಸಫಾರಿ ಶಾಮ ಸುಂದರ, ರಾಮಕೃಷ್ಣ, ಕರಿಬಸಣ್ಣ, ಸೇರಿದಂತೆ.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸೋಪಿಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ ಹಾಗೂ ಸೋಪಿಯಾ ಹಿ. ಪ್ರಾ. ಶಾಲೆ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

‌ ‌ ‌

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button