ಅಲೆಮಾರಿಗಳಿಗೆ ಆಸರೆಯಾದ ಶಾಸಕ ಯಶವಂತರಾಯಗೌಡ ಪಾಟೀಲ – ಪ್ರೀತು ದಶವಂತ ಹೇಳಿಕೆ.

ಹೊರ್ತಿ ಮಾ.17

ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರು ಅಲೆಮಾರಿ ಸಮುದಾಯದ ಜನರಿಗೆ ಆಸರೆಯಾಗಿದ್ದಾರೆ ಎಂದು ಬಬಲಾದ ಗ್ರಾಮದ ಅಲೆಮಾರಿ ಸಮುದಾಯದ ಮುಖಂಡ ಪ್ರೀತು ದಶವಂತ ಹೇಳಿದರು.

ಸಮೀಪದ ಬಬಲಾದ (ನಿಂಬೆ ನಾಡಿನ) ಗ್ರಾಮದ ಅಲೆಮಾರಿ ಚನ್ನನದಾಸರ ಕಾಲೋನಿಯಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಸೋಮವಾರ ರೂ. 50 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಈ ದಿಶೇಯಲ್ಲಿ ಮಹಾತ್ಮಾ ಗಾಂಧೀಜಿ ಕನಸು ನನಸಾಗಲೂ ಗ್ರಾಮದ ಪ್ರತಿಯೊಬ್ಬರು ಗ್ರಾಮದ ಸ್ವಚ್ಛತೆ ಮತ್ತು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಮುಖ್ಯವಾಗಿದೆ.

ಬಬಲಾದ ಗ್ರಾಮದ ಅಲೆಮಾರಿ ಸಮುದಾಯದ ಕಟ್ಟ ಕಡೆಯ ಅಲಕ್ಷ್ಯೀತ ಸಮುದಾಯವಾದ ಅಲೆಮಾರಿ ಚೆನ್ನದಾಸರ ಸಮುದಾಯವು ಅತ್ಶಂತ ಹಿಂದುಳಿದ ಸಮುದಾಯವಾಗಿದ್ದು, ವಿಜಯಪುರ ಜಿಲ್ಲೆಯಾದ್ಶಂತ ಅಲೆಮಾರಿ ಸಮುದಾಯಗಳು ಸಮಾಜದ ಮುಖ್ಶವಾಹಿನಿಗೆ ಬರಬೇಕು.

ಇಂಡಿ ವಿಧಾನ ಸಭೆ ಮತಕ್ಷೇತ್ರದಲ್ಲಿ ಧ್ವನಿ ಇಲ್ಲದ ಅಲೆಮಾರಿ ಸಮುದಾಯಗಳನ್ನು ಸಮಾಜದ ಮುಖ್ಶವಾಹಿನಿಗೆ ತರಲು ಶ್ರಮಿಸುತ್ತಿದ್ದೇನೆ.

ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು ಅಲೆಮಾರಿ ಸಮುದಾಯಗಳಲ್ಲಿ ಜನಸಂಖ್ಶೆ ಹೊಂದಿರುವ ಚೆನ್ನದಾಸರ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲ ರಂಗಗಳಲ್ಲೂ ಹಿಂದುಳಿದ ಸಮುದಾಯವನ್ನು ಎಲ್ಲಾ ರೀತಿಯ ಸಹಕಾರ ನೀಡಿ ಮುಖ್ಯವಾಹಿನಿಗೆ ತರಲು ಶಾಸಕ ಯಶವಂತರಾಯಗೌಡ ಅವರು ಉದ್ದೇಶ ಹೊಂದಿದ್ದಾರೆ ಎಂದರು.

ಈ ಎಲ್ಲಾ ಕಾರ್ಯಗಳಿಗೆ ಸ್ವತಂತ್ರ ಪೂರ್ವದಿಂದಲೂ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವ ನಮ್ಮ ಅಲೆಮಾರಿಗಳಿಗೆ ಸ್ವತಂತ್ರ ದೊರೆಕಿಸಿ ಕೊಟ್ಟಂತಹ ಶಾಸಕ ಯಶವಂತರಾಯಗೌಡ ಅವರಿಗೆ ಪ್ರೀತು ದಶವಂತ ಅವರು ಈ ವೇಳೆ ಕೃಜ್ಞತೆಗಳನ್ನು ಹೇಳಿದರು.

ಈ ವೇಳೆ, ಬಬಲಾದ ಗ್ರಾಮ ಆಡಳಿತಾಧಿಕಾರಿ ಭೀಮಾಶಂಕರ ಕನ್ನೂರ, ಎಇಇ ಶಿವಾಜಿ ಬನಸೋಡೆˌ, ಸಹಾಯಕ ಎಂಜಿನಿಯರ ಸಂಜೀವಕುಮಾರ ಡಿ, ಪಿಡಿಓ ಎಸ್ ಡಿ. ಬಿರಾದಾರ, ಗುತ್ತಿಗೆದಾರ ಶೇಖರ ನಾಯಕ, ಗ್ರಾಮ ಪಂಚಾಯಿತಿ ಅಧ್ಶಕ್ಷ ಸಿದರಾಯಗೌಡ ಬಿರಾದಾರ, ದುಂಡಪ್ಪ ಸುತಾರ, ನೀಲಕಂಠ ರೂಗಿˌ ದೇವರಾಜ ದಶವಂತ,ˌ ಸತ್ತೆಪ್ಪ ದಶವಂತ, ರಮೇಶ ಸುತಾರ, ಸಂಜು ಪಾಟೀಲ ಚಿದಾನಂದ ಜೇವೂರ ಅರುಣ ದಶವಂತ ಶಿವಾಜಿ ನಾಯಕ ಅಪ್ಪಾಶ ಪೂಜಾರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button