“ನೆನಪಿನ ಗೆಳತಿ ಆತ್ಮದ ಒಡತಿ”…..

ನಿತ್ಯ ಬಾಳ ಪಯಣದ ನಗುವು ನೀ
ಶುಭ ಮಂಗಳ ಕ್ಷಣಗಳ ಹರುಷ ನೀ
ಊಟ ಪ್ರಸಾದ ಸೇವನೆಯ ಸ್ವಾದ ನೀ
ತನು ಮನದ ಚೈತನ್ಯದ ಚಿಲುಮೆ ನೀ
ಕಂಗಳ ಪನ್ನಿರ ಹನಿ ನೀ
ತುಟಿಗಳ ತಲಾಟವು ನೀ
ತೃಷೆಯ ತಣಿಸುವ ಖುಷಿಯು ನೀ
ನಿತ್ಯ ನಿಷ್ಠೆ ಕಾಯಕದ ಶ್ರೇಯಸ್ಸು ನೀ
ಕೋಪ ತಾಪ ತಣಿಸುವ ತಂಪು ನೀ
ಉದ್ವೇಘದಲಿ ಸೌಮ್ಯತೆ ಭಾವ ನೀ
ಬೆರಳುಗಳ ಸರಿಗಮಪದನಿಸ ಸ್ವರದ
ನಾದವು ನೀ
ನುಡಿವ ಮಾತುಗಳ ಮಧುರತೆಯ
ಜೇನ ರುಚಿ ನೀ
ಸಾಧನೆಯ ಹಾದಿಯಲಿ ಗೆಲವಿಗೆ
ಒಲವು ನೀ
ಪುರಸ್ಕಾರದ ಹೆಮ್ಮೆಯ ಗೌರವ ನೀ
ನೀ ಅಂದರೆ ಮರೆಯದ ಗೆಳತಿ
ಆತ್ಮದ ಜೋತೆ ನಲಿವ ಒಲವ ಜ್ಯೋತಿ
ನೆನಪಿನ ಗೆಳತಿ ಆತ್ಮದ ಒಡತಿ
ದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ/ಅಮೀನಗಡ

