ಶಾಸಕ ನಾಡಗೌಡರ ವಿರುದ್ಧ ನಡಹಳ್ಳಿ – ಧರ್ಮ ಯುದ್ಧದ ಘೋಷಣೆ.
ಮುದ್ದೇಬಿಹಾಳ ಮಾ.21

ಬೆದರಿಕೆ ರಾಜಕಾರಣ ಮಾಡುವ ಕಾಲ ಮುಗಿದಿದೆ ಮುದ್ದೇಬಿಹಾಳದ ಮಣ್ಣಿನಲ್ಲಿ ಹುಟ್ಟಿ ಕೊಂಡಿರುವ ಗುಲಾಮಗಿರಿ ಪದ್ಧತಿಯನ್ನು ಬೇರು ಸಹಿತ ಕಿತ್ತೆಸೆಯಲು ನಾನು ರಾಜಕೀಯಕ್ಕೆ ಬಂದಿದ್ದೇನೆ ಹೊರತು ಯಾರಿಗೂ ಹೆದರಲು ಅಲ್ಲ, ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ,ಎಸ್ ಪಾಟೀಲ್ ನಡಹಳ್ಳಿ ಅಬ್ಬರಿಸಿದ್ದಾರೆ.
ಪಟ್ಟಣದ ದಾಸೋಹ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅತ್ಯಂತ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಲಿ ಶಾಸಕ ಸಿ,ಎಸ್ ನಾಡಗೌಡರ ವಿರುದ್ಧ ಭ್ರಷ್ಟಾಚಾರ, ಬೇನಾಮಿ ಆಸ್ತಿ ಮತ್ತು ಸುಳ್ಳಿನ ರಾಜಕಾರಣದ ಸರಣಿ ಆರೋಪಗಳನ್ನು ಹೊರಿಸುವ ಮೂಲಕ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದರು.
ಸುಳ್ಳಿನ ಕಂತೆ ಬಿಚ್ಚಿಟ್ಟ ನಡಹಳ್ಳಿ ಸುದ್ದಿಗೋಷ್ಠಿಯ ಆರಂಭದಲೇ ತಾಳಿಕೋಟಿ ತಾಲೂಕ ಘೋಷಣೆಯ ವಿಷಯವಾಗಿ ಶಾಸಕರ ವಿರುದ್ಧ ಹರಿಹಾಯ್ದು ನಡಹಳ್ಳಿ ಇಂದಿನ ಬಿಜೆಪಿ ಆಡಳಿತ ಅವಧಿಯಲ್ಲಿ ಜಗದೀಶ್ ಶೆಟ್ಟರ್ ಅವರು ತಾಳಿಕೋಟಿಯನ್ನು ತಾಲೂಕಾಗಿ ಘೋಷಿಸಿದರು.
ಅಗತ್ಯ ಅನುದಾನ ಮತ್ತು ಆಡಳಿತಾತ್ಮಕ ಕೆಲಸಗಳನ್ನು ನಮ್ಮ ಅವಧಿಯಲ್ಲಿ ಆಗಿವೆ, ಆದರೆ ಈಗ ಶಾಸಕ ನಾಡಗೌಡರು ತಾವು ಮಾಡಿದ್ದೆ ಸಾಧನೆ ಎಂದು ಹೇಳಿ ಕೊಳ್ಳುತ್ತಿರುವುದು ಹಸಿ ಸುಳ್ಳು ಸುಳ್ಳು ಹೇಳುವುದರಲ್ಲಿ ನಾಡಗೌಡರು ‘ನಿಸ್ಸಿಮರು’ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದು ಲೇವಡಿ ಮಾಡಿದರೆ.
ನನ್ನ ರಾಜಕೀಯ ಸಂಕಲ್ಪ ನಾನು ಮುದ್ದೇಬಿಹಾಳಕ್ಕೆ ಬಂದಿರುವುದೇ ಕ್ಷೇತ್ರವನ್ನು ಗುಲಾಮಗಿರಿ ಯಿಂದ ಮುಕ್ತ ಗೊಳಿಸಲು. ಇಲ್ಲಿನ ಜನರನ್ನು ಹೆದರಿಸಿ, ಬೆದರಿಸಿ ತಮ್ಮ ಹತೋಟಿಯಲ್ಲಿಟ್ಟು ಕೊಳ್ಳುವ ಕಾಲ ಮಿಂಚಿದೆ. ನಾನು ಎಂದಿಗೂ ನಾಡಗೌಡರ ಮನೆ ಮೆಟ್ಟಿಲು ಹತ್ತಿಲ್ಲ, ನನ್ನ ಚಪ್ಪಲಿಯನ್ನು ಅಲ್ಲಿ ಬಿಟ್ಟಿಲ್ಲ. ರಾಜಕೀಯ ಜೀವನದಲ್ಲಿ ಜಿಲ್ಲೆ ಯಾವುದೇ ಕಾಂಗ್ರೆಸ್ ಅಥವಾ ಬಿಜೆಪಿ ನಾಯಕರ ಮನೆಗೆ ಹೋಗಿ ತಲೆಬಾಗಿಲ್ಲ, ಮದುವೆ ಪತ್ರ ನೀಡಲು ಹೋಗುವುದು ಸೌಜನ್ಯವಷ್ಟೇ. ಅದನ್ನು ಬಿಟ್ಟು ನಾನು ನಿಮ್ಮ ಮುಂದೆ ಬಾಗಿದ್ದೇನೆ ಎಂದು ಯಾರಾದರೂ ಸಾಕ್ಷಿ ನೀಡಿದರೆ, ನನ್ನ ತಲೆಯನ್ನೇ ನಾನೇ ತೆಗೆದು ಕೊಳ್ಳುತ್ತೇನೆ, ಎಂದು ಅತ್ಯಂತ ಭಾವೋದ್ವೇಗದಿಂದ ಸವಾಲು ಹಾಕಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ.ಮುದ್ದೇಬಿಹಾಳ

