ಹಂಡೆ ವಜೀರ್ ಸಮಾಜದ – ಅಧ್ಯಕ್ಷ & ಉಪಾಧ್ಯಕ್ಷರ ಆಯ್ಕೆ.
ವಂದಾಲ ಮಾ.22

ನಿಡುಗುಂದಿ ತಾಲೂಕಿನ ಹಂಡೆ ವಜೀರ್ ಸಮಾಜದ ತಾಲೂಕ ನೂತನ ಅಧ್ಯಕ್ಷರಾಗಿ ಬಸವರಾಜ ವಂದಾಲ (ಹಾಲಿಹಾಳ) ಉಪಾಧ್ಯಕ್ಷರಾಗಿ ಸಿದ್ದನಗೌಡ ಬಿರಾದಾರ್ (ಜಿರಲಭಾವಿ) ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲನಗೌಡ ವಡವಡಗಿ, ಖಜಾoಚಿಯಾಗಿ ಮಹಾದೇವ ಗೌಡ ಗುಡದಿನ್ನಿ (ಕೊಡಗಾನೂರ), ಆಯ್ಕೆಯಾದರು.
ನಿಡಗುಂದಿಯ ರಾಯಲ್ ಕಿಡ್ಸ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಯ್ಕೆ ಯಾದರು. ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ, ಎಸ್,ಎಸ್ ಪಾಟೀಲ್, ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್ ಮ್ಯಾಗೇರಿ, ಸಮಾಜದ ಬೆಳವಣಿಗೆಗೆ ಕುರಿತು ಮಾತನಾಡಿದರು.
ಮುದ್ದೇಬಿಹಾಳ ತಾಲೂಕ ಅಧ್ಯಕ್ಷ ಶಂಕರಗೌಡ ಶಿವಣಗಿ, ಆರ್,ಎಸ್ ಪಾಟೀಲ್, ಶೇಖನಗೌಡ ಬಿರಾದಾರ, ಸಂಗನಗೌಡ ಯಂಕಂಚಿ, ಅವ್ವನ ಗೌಡ ಗ್ವಾತಗಿ, ಸಕ್ರಪ್ಪ ಅಪರಾದಿ, ಪ್ರಭು ಬೆಳ್ಳಿ ಮತ್ತಿತರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

