🔥 ಉಡುಪಿ ಜಿಲ್ಲಾ PDO ಸಂಘಕ್ಕೆ ‘ಶಕ್ತಿ ತುಂಬಿದ’ ಸಾರಥಿಗಳು – ನೂತನ ಪದಾಧಿಕಾರಿಗಳ ಪದ ಗ್ರಹಣಕ್ಕೆ ಅಭಿನಂದನಾ ಮಹಾಪೂರ..!

ಉಡುಪಿ ಮಾ.22

ಜಿಲ್ಲೆಯ ಗ್ರಾಮೀಣಾಭಿವೃದ್ಧಿಯ ಬೆನ್ನೆಲಾಗಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಸಂಘಕ್ಕೆ ಈಗ ನೂತನ ಸಾರಥಿಗಳ ಬಲ ಬಂದಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘ (ರಿ), ಬೆಂಗಳೂರು ಇದರ ಜಿಲ್ಲಾ ಶಾಖೆ ಉಡುಪಿ ವತಿಯಿಂದ ಪದಾಧಿಕಾರಿಗಳಿಗೆ ಭವ್ಯ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಈ ಆಯ್ಕೆಯು ಜಿಲ್ಲೆಯ ನೌಕರರ ವಲಯದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

💥 ಸಂಘಟನೆಯ ಶಕ್ತಿ ಕೇಂದ್ರಗಳು

– ಪ್ರಮುಖ ನಾಯಕತ್ವ:-

ಹರೀಶ್ ಶೆಟ್ಟಿ:-

ರಾಜ್ಯ ಪರಿಷತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಉಡುಪಿ ಜಿಲ್ಲಾ ಸಂಘ.

ದಯಾನಂದ್ ಬೆಣ್ಣೂರು:-

ಜಿಲ್ಲಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಉಡುಪಿ ಜಿಲ್ಲಾ ಸಂಘ.

ಗುರುಮೂರ್ತಿ:-

ಜಿಲ್ಲಾ ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಉಡುಪಿ ಜಿಲ್ಲಾ ಸಂಘ.

💥 ಜವಾಬ್ದಾರಿ ಹೊತ್ತ ನೂತನ ಪದಾಧಿಕಾರಿಗಳ ವಿವರ:-

ಸಂಘಟನೆಯನ್ನು ತಳ ಮಟ್ಟದಿಂದ ಬಲಪಡಿಸಲು ಆಯ್ಕೆಯಾದ ಇತರ ಪದಾಧಿಕಾರಿಗಳ ಪಟ್ಟಿ ಇಂತಿದೆ.

📍 ಉಮಾಶಂಕರ್:-

ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾ ಸಂಘ.

📍 ಫರ್ಜಾನಾ:-

ಉಪಾಧ್ಯಕ್ಷರು (ಮಹಿಳೆ), ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾ ಸಂಘ.

📍 ಜಯರಾಮ್ ಶೆಟ್ಟಿ:-

ಸಂಘಟನಾ ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾ ಸಂಘ.

📍 ಅಂಕಿತಾ ನಾಯಕ್:-

ಸಂಘಟನಾ ಕಾರ್ಯದರ್ಶಿ (ಮಹಿಳೆ), ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾ ಸಂಘ.

📍 ರಿತೇಶ್ ಎಸ್. ಪುತ್ರನ್:-

ಕ್ರೀಡಾ ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾ ಸಂಘ.

📍 ಚಂದ್ರಕಲಾ:-

ಸಾಂಸ್ಕೃತಿಕ ಕಾರ್ಯದರ್ಶಿ (ಮಹಿಳೆ),

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾ ಸಂಘ ರಾಜ್ಯ ಮತ್ತು ಜಿಲ್ಲಾ ಮಟ್ಟದ ಘಟಾನುಘಟಿ ನಾಯಕರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲೆಯ PDO ಸಂಘವು ಈಗ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಈ ನೂತನ ತಂಡವು ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿ, ಆಡಳಿತಾತ್ಮಕವಾಗಿ ಜಿಲ್ಲೆಗೆ ಹೊಸ ಚೈತನ್ಯ ನೀಡಲಿ ಎಂದು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಶುಭ ಹಾರೈಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button