ಬೋಸೇದೇವರಹಟ್ಟಿ ವಿದ್ಯಾರ್ಥಿಗಳಿಗೆ – ಬ್ಲಾಟಿಂಗ್ ಮತ್ತು ಪೆನ್ ವಿತರಣೆ.
ಬೋಸೇದೇವರಹಟ್ಟಿ ಮಾ.24

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಬೋಸೇದೇವರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹದಿನೈದು ವಿದ್ಯಾರ್ಥಿಗಳಿಗೆ ದಾನಿಗಳಾದ ಶ್ರೀಮತಿ ಸುಧಾಮಣಿ ಅಮರನಾಥಗುಪ್ತ ಅವರ ಉದಾರ ಆರ್ಥಿಕ ನೆರವಿನಿಂದ ಬ್ಲಾಟಿಂಗ್ ಮತ್ತು ಪೆನ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶಮೂರ್ತಿ, ಗೌರಮ್ಮ ಬಿ.ಜಿ ಜಯಲಕ್ಷ್ಮೀ, ಎಸ್.ಎಚ್ ನಾಗರತ್ನ, ಲೋಕೇಶ್, ಬುಡೇನ್, ರಾಧಮ್ಮ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ಧಾಪುರ, ಚಳ್ಳಕೆರೆ

