🚨 STATE LEVEL EXCLUSIVE BREAKING, ಬಿಲ್ಲಾಡಿ ‘ಬ್ಲಾಸ್ಟಿಂಗ್’ ನರಕ! 🚨📢 ನಂದಗೋಕುಲದ ಅಟ್ಟಹಾಸಕ್ಕೆ ನಲುಗಿದ ಬಿಲ್ಲಾಡಿ, ‘ಮೂವರು ಅರಸರ’ ಗಣಿ ದಂಧೆಗೆ ಜನರ ನಿದ್ದೆ ಹರಾಜು – ಜಿಲ್ಲಾಡಳಿತಕ್ಕಿದು ಕೇಳಿಸುತ್ತಿಲ್ಲವೇ.?!
ಬ್ರಹ್ಮಾವರ/ಬಿಲ್ಲಾಡಿ ಮಾ.24

ಶಾಂತವಾಗಿದ್ದ ಬಿಲ್ಲಾಡಿ ಗ್ರಾಮವೀಗ ಅಕ್ಷರಶಃ ಯುದ್ಧ ಭೂಮಿಯಂತಾಗಿದೆ! ಬಿಲ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ನಂದಗೋಕುಲ ಟ್ರೇಡರ್ಸ್’ ಹೆಸರಿನಲ್ಲಿ ನಡೆಯುತ್ತಿರುವ ಕಲ್ಲು ಕೋರೆ ದಂಧೆ ಜನರ ಬದುಕನ್ನು ನರಕಕ್ಕಿಂತ ಕಡೆಯಾಗಿಸಿದೆ. ಸುಭಾಷ್ ಶೆಟ್ಟಿ, ಭಾರ್ಗವ ಹೆಗ್ಡೆ ಮತ್ತು ಗೋಪಾಲ್ ಶೆಟ್ಟಿ ಎಂಬ ಈ ‘ಮೂವರು ಅರಸರ’ ಹಣದ ಹಪಾಹಪಿಗೆ ಇಡೀ ಗ್ರಾಮವೇ ಬಲಿಯಾಗುತ್ತಿದ್ದು, ಬಡವರ ಕೂಗು ಆಳುವವರಿಗೆ ಕೇಳದಂತಾಗಿದೆ. ಹಗಲು-ರಾತ್ರಿ ಎನ್ನದೆ ಭೂಮಿ ತತ್ತರಿಸುವಂತೆ ನಡೆಸುವ ಭೀಕರ ಸ್ಫೋಟಗಳು ಜನರ ಎದೆ ಯೊಡೆಯುತ್ತಿವೆ!
🏚️ ಬಿರುಕು ಬಿಟ್ಟ ಬಡವರ ಸೂರು:-
‘ಸಾವಿನ ಮನೆ’ ಯಲ್ಲಿ ಜನರ ವಾಸ!”ನಮಗೊಂದು ನೆಮ್ಮದಿಯ ನಿದ್ದೆಯಿಲ್ಲ, ಮಕ್ಕಳಿಗೊಂದು ನೆಮ್ಮದಿಯ ಓದಿಲ್ಲ” ಎನ್ನುವುದು ಬಿಲ್ಲಾಡಿ ಜನರ ಇಂದಿನ ರೋದನೆ. ಈ ಅಕ್ರಮ ಗಣಿಗಾರಿಕೆಯ ಅಟ್ಟಹಾಸಕ್ಕೆ ಸುಮಾರು 20 ರಿಂದ 25 ಮನೆಗಳ ಗೋಡೆಗಳು ಆಳವಾದ ಬಿರುಕು ಬಿಟ್ಟಿವೆ. ಯಾವ ಕ್ಷಣದಲ್ಲಿ ಈ ಮನೆಗಳು ಮಣ್ಣು ಪಾಲಾಗುತ್ತವೆಯೋ ಎಂಬ ಭೀತಿಯಲ್ಲಿ ಜನ ಬದುಕುತ್ತಿದ್ದಾರೆ. ವಸತಿ ಪ್ರದೇಶದ ಮೂಗಿನ ಕೆಳಗೆ, ನಿಯಮಗಳನ್ನು ಗಾಳಿಗೆ ತೂರಿ ಬ್ಲಾಸ್ಟಿಂಗ್ ನಡೆಯುತ್ತಿದ್ದರೂ, ದಂಧೆ ಕೋರರಿಗೆ ಮಾತ್ರ ಜನರ ಜೀವ ಕಿಮ್ಮತ್ತಿಲ್ಲದಂತಾಗಿದೆ!
🚜 ಕೃಷಿ ನಾಶ, ರಸ್ತೆಯ ತುಂಬಾ ಕೆಸರು ರಾಡಿ:-
ದಂಧೆಕೋರರ ಉದ್ಧಟತನಕ್ಕೆ ಮಿತಿಯಿಲ್ಲವೇ?ಕೃಷಿಕರ ಬದುಕು ಈಗ ಬೀದಿಗೆ ಬಂದಿದೆ. ಹಸಿರಾಗಿದ್ದ ತೆಂಗು, ಅಡಿಕೆ ತೋಟಗಳ ಮೇಲೆ ದಟ್ಟವಾದ ಧೂಳು ಆವರಿಸುತ್ತಿದ್ದು, ಕೃಷಿ ನಾಶವಾಗುತ್ತಿದೆ. ಇನ್ನು ನಂದಗೋಕುಲ ಟ್ರೇಡರ್ಸ್‌ನವರ ಉದ್ಧಟತನ ಎಷ್ಟಿದೆಯೆಂದರೆ, ಕೋರೆಯಲ್ಲಿ ನಿಂತ ಗಲೀಜು ನೀರನ್ನು ಮೋಟಾರ್ ಹಚ್ಚಿ ನೇರವಾಗಿ ಸಾರ್ವಜನಿಕ ರಸ್ತೆ ಮತ್ತು ಚರಂಡಿಗೆ ಬಿಡುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಆ ಕೆಸರು ರಾಡಿಯಲ್ಲೇ ಬಿದ್ದು ಎದ್ದು ಓಡಾಡುವಂತಾಗಿದೆ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯೇ..?
🛑 “ದಂಧೆಕೋರರ ಜೇಬು ತುಂಬುತ್ತಿದೆ, ಬಡವರ ಆರೋಗ್ಯ ಕೆಡುತ್ತಿದೆ..!”
ಧೂಳಿನಿಂದಾಗಿ ಶಾಲಾ ಮಕ್ಕಳು ಮತ್ತು ಹಿರಿಯರು ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ, ಅಧಿಕಾರಿಗಳು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
⚖️ ಅಧಿಕಾರಿಗಳ ‘ಕೈ’ ಬೆಚ್ಚಗೆ? ಲೋಕಾಯುಕ್ತಕ್ಕೆ ಬಿಲ್ಲಾಡಿ ಜನರ ದೂರು..!
ಗಣಿ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ದಂಧೆಕೋರರ ಜೊತೆ ‘ಕೈ ಕುಲುಕಿದ್ದಾರೆ’ ಎಂಬ ಬಲವಾದ ಅನುಮಾನ ಗ್ರಾಮಸ್ಥರಲ್ಲಿದೆ. ನಿಯಮಗಳನ್ನು ಗಾಳಿಗೆ ತೂರಿ ಪರವಾನಗಿ ಕೊಟ್ಟಿದ್ದು ಹೇಗೆ? ಸುರಕ್ಷತಾ ಕ್ರಮಗಳಿಲ್ಲದೆ ಸ್ಫೋಟ ನಡೆಸುತ್ತಿರುವುದು ಅಧಿಕಾರಿಗಳಿಗೆ ಕಾಣುತ್ತಿಲ್ಲವೇ? ಈ ವ್ಯವಸ್ಥಿತ ಭ್ರಷ್ಟಾಚಾರದ ವಿರುದ್ಧ ಗ್ರಾಮಸ್ಥರು ಈಗ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲು ಟೊoಕ ಕಟ್ಟಿ ನಿಂತಿದ್ದಾರೆ.
⚠️ ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ:-
“ಈಗಲೇ ನಿಲ್ಲಿಸಿ, ಇಲ್ಲದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ!” ಬಿಲ್ಲಾಡಿ ಗ್ರಾಮಸ್ಥರು ಈಗ ಕೆರಳಿ ಕೆಂಡವಾಗಿದ್ದಾರೆ. ಕೂಡಲೇ ಈ ಅಕ್ರಮ ಕಲ್ಲು ಕೋರೆಯನ್ನು ಬಂದ್ ಮಾಡಲೇಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
ತಕ್ಷಣವೇ ಈ ಕಲ್ಲು ಕೋರೆಯನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು.
ಅತಿ ವೇಗವಾಗಿ ಚಲಿಸುವ ಕಲ್ಲು ಹೊತ್ತ ಲಾರಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕು.
ಬಡವರ ಮನೆಗಳಿಗೆ ಆದ ಹಾನಿಗೆ ದಂಧೆ ಕೋರರಿಂದಲೇ ಪರಿಹಾರ ಕೊಡಿಸಬೇಕು.
ಒಂದು ವೇಳೆ ಜಿಲ್ಲಾಡಳಿತ ಮತ್ತು ಸರ್ಕಾರ ಈ ಕೂಡಲೇ ಎಚ್ಚೆತ್ತು ಕೊಳ್ಳದಿದ್ದರೆ, ಇಡೀ ಬಿಲ್ಲಾಡಿ ಗ್ರಾಮವೇ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಲಿದೆ. ಇದು ಕೇವಲ ವರದಿಯಲ್ಲ, ನೊಂದ ಜನರ ಆಕ್ರೋಶದ ಎಚ್ಚರಿಕೆ..!
ವರದಿ:ಆರತಿ.ಗಿಳಿಯಾರು.ಉಡುಪಿ

