“ಭಾವದ ಭಾಗ್ಯದಂತೆ”…..

ಮೂಡಣದ ಉದಯರವಿಯ ಬೆಳಕಂತೆ
ಹೊಂಗಿರಣ ಸಮಯದ ಹರುಷದಂತೆ
ಪ್ರಕೃತಿಯ ವನ ಸಿರಿಯ ಚಂದದಂತೆ
ಆನಂದೋತ್ಸವವು
ದಿನದ ಪಯಣ ಶುಭ ಶಕುನದಂತೆ
ತಂದೆ ತಾಯಿ ಹಿರಿಯರ ಆಶೀರ್ವಾದದ
ಉತ್ತಮತದ ಫಲದಂತೆ
ನಡೆವ ದಾರಿ ನುಡಿಯುವ ಮಾತು
ಮುತ್ತು ರತ್ನಗಳಂತೆ
ವಯೋವೃದ್ಧರ ಅನುಭವದ ಹಿತದಂತೆಯು
ಮಕ್ಕಳ ಆಟಪಾಠಗಳ ನಲಿಯುವ
ಖುಷಿಯಂತೆ
ನಿತ್ಯ ಮಾಡುವ ಕಾಯಕವು
ಸಂತೃಪ್ತಿ ಭಾವದ ಭಾಗ್ಯದಂತೆ
ನಿಜ ಕಾಣೋಣ ಪ್ರತಿದಿನ ಹೊಸ
ಕನಸುಗಳನ್ನು
ನೆನಸು ಮಾಡುತ್ತಾ ಭಾವ ಭಕ್ತಿಯು
ಸುಕೃತ ಫಲವ ನಮ್ಮದಾಗಲಿ
ಪ್ರತಿ ಕ್ಷಣ ದಿನದಿವೂ ಕೈಗೂಡಲಿ
ಕಂಡ ಕನಸು
ಮನವು ಸೊಗಾಸಾಗಲಿ
ಬಾಳ ದಾರಿಯಲಿ ಮುತ್ತು ರತ್ನಗಳ
ಸುರಿಯಲಿ ಅನವರತವು
ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ/ಅಮೀನಗಡ

