ಆತ್ಮಕ್ಕೆ ದೇಶ-ಕಾಲ-ನಾಮ-ರೂಪಗಳಿಲ್ಲ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಮಾ.28

ಶ್ರೀಮಾತೆ ಶಾರದಾದೇವಿಯವರಿಗೆ ಅಂದದ ಅಲಂಕಾರ 🌺💐
ಪ್ರತಿಯೊಬ್ಬರಲ್ಲಿಯೂ ಇರುವ ಆತ್ಮ ಸ್ವರೂಪಕ್ಕೆ ದೇಶ-ಕಾಲ-ನಾಮ-ರೂಪಗಳಿಲ್ಲ, ಅಂತಹ ಆತ್ಮವನ್ನು ನಮ್ಮಲ್ಲೇ ಕಂಡು ಕೊಳ್ಳುವುದು ಮಾನವ ಜನ್ಮದ ಮುಖ್ಯ ಉದ್ದೇಶ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ದಿವ್ಯತ್ರಯರ ಇಂದಿನ ವಿಶೇಷ ಅಲಂಕಾರ 🪷🪻
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಆತ್ಮತತ್ತ್ವ”ದ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಅಜ್ಞಾನದಿಂದ ತಾನು ದೇಹ ಮಾತ್ರ ಎಂದು ಭಾವಿಸುವ ಮನುಷ್ಯನ ಒಳಗೆ ಆತ್ಮಚೈತನ್ಯವಿದೆ. ಅದನ್ನು ತಿಳಿದುಕೊಂಡರೆ ಬದುಕಿನ ಸಕಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.ಸದಾ ಆತ್ಮತತ್ತ್ವದ ಚಿಂತನೆ ಮಾಡುತ್ತಿರಬೇಕು ಎಂದು ಅವರು ಸಲಹೆ ನೀಡಿದರು.

ಸತ್ಸಂಗದ ಆರಂಭದಲ್ಲಿ ವಿಶೇಷ ಭಜನೆಯನ್ನು ಶ್ರೀಶಾರದಾಶ್ರಮದ ಸದ್ಭಕ್ತರು ನಡೆಸಿಕೊಟ್ಟರೆ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗದಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ವನಜಾಕ್ಷಿ ಮೋಹನ್, ಯತೀಶ್ ಎಂ ಸಿದ್ಧಾಪುರ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಚೇತನ್, ಸುಧಾಮಣಿ, ಕವಿತಾ ಗುರುಮೂರ್ತಿ, ರಶ್ಮಿ ಪಂಡಿತಾರಾಧ್ಯ, ಪುಷ್ಪಲತಾ, ಸುಮನಾ, ಕಾವೇರಿ ಸುರೇಶ್, ಗೀತಾ ವೆಂಕಟೇಶರೆಡ್ಡಿ, ಶೃಜನಿ, ಸಿ.ಎಸ್ ಭಾರತಿ ಚಂದ್ರಶೇಖರ್, ಜಿ ಯಶೋಧಾ ಪ್ರಕಾಶ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ಧಾಪುರ, ಚಳ್ಳಕೆರೆ.

