ಆದರ್ಶಗಳ ಗಣಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ – ಮಾತಾಜೀ ತ್ಯಾಗಮಯೀ ಹೇಳಿಕೆ.

ಚಳ್ಳಕೆರೆ ಮಾ.29

ಆದರ್ಶಗಳ ಗಣಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ನಿತ್ಯನಾಮ ಸ್ಮರಣೆಯು ಕಲಿಯುಗದ ಆಧುನಿಕ ಬದುಕಿನ ಸಾರ್ಥಕತೆಗೆ ಅತ್ಯಂತ ಸೂಕ್ತ-ಸುಲಭ ಮಾರ್ಗವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ಶ್ರೀಮತಿ ಭಜಂತ್ರಿ ಅವರಿಂದ ಅದ್ಭುತ ರಾಮನ ಭಜನೆ

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀರಾಮ ನವಮಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು‌.

ಶ್ರೀವಿಷ್ಣು ಸಹಸ್ರನಾಮಕ್ಕೂ ಹೆಚ್ಚು ರಾಮ ನಾಮದ ಸ್ಮರಣೆಗೆ ಅದ್ಭುತ ಶಕ್ತಿಯಿದ್ದು ಇದು ಮನುಷ್ಯನ ಅನೇಕ ಕಾಯಿಲೆಗಳನ್ನು ಗುಣಪಡಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದೆ‌. ಬದುಕಿನ ಸಕಲ ಸಮಸ್ಯೆಗಳಿಗೂ ದಿವ್ಯೌಷಧಿ ಶ್ರೀರಾಮ ನಾಮ ಜಪ ಎಂದು ಅವರು ಹೇಳಿದರು.

ಶ್ರೀರಾಮ ನವಮಿಯ ಪ್ರಯುಕ್ತ ಶ್ರೀಬ್ರಹ್ಮ ಚೈತನ್ಯ ಭಕ್ತ ಮಂಡಳಿಯ ಶ್ರೀರವೀಂದ್ರನಾಥ,ಶ್ರೀಮತಿ ಸುಮಾ ಪ್ರಕಾಶ್, ಗುರುನಾಥ ಗುಪ್ತ,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಭಜಂತ್ರಿ ಅವರಿಂದ ವಿಶೇಷ ಶ್ರೀರಾಮನ ಭಜನೆಗಳು ಮತ್ತು ಸಾಮೂಹಿಕ ಶ್ರೀಹನುಮಾನ್ ಚಾಲೀಸಾ ಪಠಣ ನಡೆಯಿತು.

ವಿಶೇಷ ಭಜನಾ ಕಾರ್ಯಕ್ರಮದಲ್ಲಿ ರಾಧಮ್ಮ ವೆಂಕಟಸುಬ್ಬಣ್ಣ, ಗೀತಾ ಪ್ರಕಾಶ್, ಎಂ.ಗೀತಾ ನಾಗರಾಜ್, ವನಜಾಕ್ಷಿ, ಗೀತಾ ವೆಂಕಟೇಶ್ ರೆಡ್ಡಿ, ಸಿ.ಎಸ್ ಭಾರತಿ,ಸುಮನಾ ಕೋಟೇಶ್ವರ, ಯತೀಶ್ ಎಂ ಸಿದ್ದಾಪುರ, ಅನುಸೂಯ, ವಿಜಯಾಗುರು, ತಳುಕಿನ ತೊಯಜಾಕ್ಷಿ, ಗೀತಾ ಭಕ್ತವತ್ಸಲ, ಸರಸ್ವತಿ ಗೋವಿಂದರಾಜು, ಚೇತನ್, ಅಂಬುಜಾ, ವಿದ್ಯಾ, ಯಶಸ್ವಿ, ಚೆನ್ನಕೇಶವ, ಕಾವೇರಿ, ಜಯಾದಿತ್ಯ, ಗಂಗಾಧರಶೆಟ್ಟಿ, ಸುಮಂಗಲಾ, ಯಶೋಧಾ ದೇವರಾಜ್, ರಶ್ಮಿ, ಸಂಗೀತ, ಲತಾ, ವಾಸವಿ, ವಿಜಯಲಕ್ಷ್ಮೀ, ಭಾಗ್ಯಲಕ್ಷ್ಮೀ, ಕವಿತಾ, ಸರಸ್ವತಿ, ಮಂಜುಳಾ, ಸುಮಿತ್ರಮ್ಮ, ಅಭಿಷೇಕ್ , ಅನ್ವಿಕಾ, ಶೃಜನಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button