ಪತ್ರಕರ್ತ ಬಸವರಾಜ ಕುಂಬಾರಗೆ – ರಾಜ್ಯ ಸದ್ಭಾವನಾ ಪ್ರಶಸ್ತಿ.
ಚವನಬಾವಿ ಮಾ.29

ಪತ್ರಿಕಾ ರಂಗದಲ್ಲಿ ನಿರಂತರವಾಗಿ ಜನಪರ ಧ್ವನಿಯಾಗಿ ಸೇವೆ ಸಲ್ಲಿಸುತಿರುವ, ಈ ಸಂಜೆ, ಪ್ರಜಾ ಪ್ರಗತಿ, ದಿನ ಪತ್ರಿಕೆಯ ತಾಲೂಕು ವರದಿಗಾರರಾದ ಬಸವರಾಜ ಈ, ಕುಂಬಾರ ಅವರಿಗೆ ಪ್ರತಿಷ್ಠಿತ ‘ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ನಗರದ ಎಸ್.ಎಸ್.ಬಿ.ವಿ ಸಂಘದ ಅಡಿಯಲ್ಲಿನ ಸ್ವಾಮಿ ವಿವೇಕಾನಂದ ಇಂಗ್ಲೀಷ್ ಮೀಡಿಯಾ0 ಸ್ಕೂಲ್ ಹಾಗೂ ಚಾಲೆಂಜ್ ನವೋದಯ ಕೋಚಿಂಗ್ ಕ್ಲಾಸಸ್ ವತಿಯಿಂದ ಇಂದು ಮಧ್ಯಾಹ್ನ 2:00 ಗಂಟೆಗೆ ತಂಗಡಗಿ ರಸ್ತೆಯ ಶಿವಾಚಾರ್ಯ ಪಿ.ಯು ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಈ ಪುರಸ್ಕಾರ ನೀಡಲಾಗಿರುತ್ತದೆ.
ಮುದ್ದೇಬಿಹಾಳ ತಾಲೂಕಿನ ಚವನಬಾವಿ ಗ್ರಾಮದವರಾದ ಬಸವರಾಜ ಈ ಕುಂಬಾರ ಅವರು, ಗ್ರಾಮೀಣ ಭಾಗದ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಮಾಜದ ಸ್ವಾಭಿಮಾನ, ಸಾಮರಸ್ಯ ಹಾಗೂ ಪತ್ರಿಕಾ ಕ್ಷೇತ್ರದ ಮೂಲಕ ಸಮಾಜ ನಿರ್ಮಾಣಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ರಾಜ್ ಮಟ್ಟದ ಪ್ರಶಸ್ತಿ ನೀಡಲಾಗಿದೆ, ಬಸವರಾಜ್ ಅವರಿಗೆ ಈ ಗೌರವ ಲಭಿಸಿರುವುದಕ್ಕೆ ಅವರ ಸ್ವಗ್ರಾಮವಾದ ಚವನಬಾವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ವೀರೇಶ್ ಜಿ, ಹವಾಲ್ದಾರ್ ಹಾಗೂ ವಿಜಯಲಕ್ಷ್ಮಿ ವಿ, ಹವಾಲ್ದಾರ್ ಅವರು ಸಾಧಕರನ್ನು ಸನ್ಮಾನಿಸಿ, ಮುಂದಿನ ವೃತ್ತಿ ಬದುಕು ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಪತ್ರಿಕಾ ಬಳಗ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಚವನಬಾವಿ ಗ್ರಾಮದ ಹಿರಿಯರು ಯುವಕರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶರಣ ಸೋಮನಾಳ ಶ,ಬ್ರ, ಶ್ರೀ ಶಿವಪುತ್ರ ಮಹಾ ಸ್ವಾಮೀಜಿ ವಹಿಸಲಿದ್ದಾರೆ. ಹಿರೇಮಠ ಕವಡಿಮಟ್ಟಿಯ ಬಸವ ಪ್ರಭು ಮಹಾಸ್ವಾಮಿ ಹಾಗೂ ದುರ್ಗಾದೇವಿ ಆಶ್ರಮದ ಲಾಲ್ ಅಲಿಂಗೇಶ್ವರ ಶರಣರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ,ಎಸ್, ಸಾವಳಗಿ ನೆರವೇರಿಸಲಿದ್ದು ಎಸ್.ಎಸ್ ಪಿಯು ಕಾಲೇಜಿನ ಅಧ್ಯಕ್ಷ ರವಿ,.ಎನ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಆರ್.ಬಿ ದಮ್ಮೂರ್ ಮಠ, ಡಾ, ಎಂ.ಎಂ ಬೆಳಗಲ್ ಎಸ್.ಬಿ ಚಲವಾದಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

