ಥ್ರಿಲ್ಲರ್, ಹಾರರ್, ದೈವ ಭಕ್ತಿಯ – ‘ಕೊಹಿನೂರು’ ಚಿತ್ರೀಕರಣ ಆರಂಭ.

ಬೆಂಗಳೂರು ಏ.02

ಎಸ್.ಪಿ.ಜಿ ಸಿನಿಮಾಸ್ ಅವರ ‘ಕೊಹಿನೂರು’ ಚಿತ್ರದ ಅಡಿ ಬರಹ ದ ‘ಮಿರಾಕಲ್ ಡೈಮಂಡ್’ ಎಂಬ ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭವು ಹಾರೋಹಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಥ್ರಿಲ್ಲರ್, ಹಾರರ್, ದೈವ ಭಕ್ತಿ ಮತ್ತು ಶಕ್ತಿಯನ್ನು ಒಳ ಗೊಂಡಿರುವ ಚಿತ್ರಕ್ಕೆ ಪ್ರಿಯದರ್ಶನ, ಸಂತೋಷ್ ಕ್ಯಾಮರಾಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರೆ, ಶ್ರೀಮತಿ ಭಾನುಮತಿ ಗಜೇಂದ್ರ ಕ್ಲಾಪ್ ಮಾಡಿದರು. ಮುಹೂರ್ತಕ್ಕೆ ಆಗಮಿಸಿದ ಗಣ್ಯರು ಚಿತ್ರ ತಂಡಕ್ಕೆ ಶುಭ ಕೋರಿದರು.

ಚಿತ್ರದಲ್ಲಿ ಒಟ್ಟು ಐದು ಹಾಡುಗಳು, ನಾಲ್ಕು ಸಾಹಸ ದೃಶ್ಯಾವಳಿಗಳಿವೆ. ಈಗ ಸತತ ಚಿತ್ರೀಕರಣ ನಡೆಸುತ್ತಿದ್ದು ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮುಗಿಸುವ ಯೋಜನೆಯನ್ನು ಹಾಕಿದ್ದೇವೆ.

ಈ ಕಥೆಯನ್ನು ಚಿತ್ರಮಂದಿರದಲ್ಲೇ ಪ್ರೇಕ್ಷಕರು ನೋಡಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಅದರ ಸಾರ ಹೇಳುತ್ತಿಲ್ಲ ಸಧ್ಯ ಹಾರೋಹಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದು ನಿರ್ದೇಶಕರಾದ ಕೆ.ಸುರೇಶ್ ಗೋಸ್ವಾಮಿ ಹೇಳಿದರು.

ತಾರಾಗಣದಲ್ಲಿ ಭಾವನ, ರುದ್ರಾಕ್ಷ, ಜೀವನ್, ಹಿಮ, ನವೀನ್, ತನು, ಪ್ರಸಾದ್, ಸುನಿಲ್ ಕುಮಾರ್, ಶ್ರೀಕಾಂತ್, ವಿನಯ್, ಇ.ಎಸ್ ರವಿ, ಮಾದೇಗೌಡ, ತ್ಯಾಗ ಮೊದಲಾದವರು ಅಭಿನಯಿಸುತ್ತಿದ್ದು, ಕ್ಯಾಮೆರಾ ರಾಜ ಶಿವಶಂಕರ್, ಈ ಚಿತ್ರದ ಚಿತ್ರದ ಕಥೆ ಬರೆಯುವದರೊಂದಿಗೆ ರಾಜಂ ಅರ್. ಇ ಗಜೇಂದ್ರ ಅವರು ನಿರ್ಮಾಪಕರೂ ಆಗಿದ್ದಾರೆ.

ಸಾಹಸ ನಿರ್ದೇಶನ ಸುಪ್ರೀಂ ಸುಬ್ಬು, ಸಂಗೀತ ದಿವಾಕರ್, ಸಂಕಲನ ದುರ್ಗಾ ಪ್ರಸಾದ್, ಪತ್ರಿಕಾ ಸಂಪರ್ಕ ಕಾರ್ತಿಕ ಸುಧನ್, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಸುರೇಶ, ಧೀರನ್, ಆನಂದ್, ಹರಿಹರನ್ ಬಿ.ಪಿ ಸಹ ನಿರ್ದೇಶಕರಾಗಿದ್ದು, ಸಹ ನಿರ್ಮಾಪಕರಾಗಿ ಪ್ರಿಯಾ ದರ್ಶನ ರವರು ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button