ಪಿತೃವಾಕ್ಯ ಪರಿಪಾಲಕ ಆದರ್ಶ ಪುರುಷ ಶ್ರೀರಾಮ – ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ ಅಭಿಮತ.
ಚಳ್ಳಕೆರೆ ಏ.02

ಪಿತೃವಾಕ್ಯ ಪರಿಪಾಲಕ ಆದರ್ಶಗಳ ಗಣಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ ತಿಳಿಸಿದರು.
ಗಾಂಧಿ ನಗರದ ಸದ್ಭಕ್ತರಾದ ಶ್ರೀಮತಿ ಸರಸ್ವತಿ ರಾಜು ಅವರ ನಿವಾಸದಲ್ಲಿ “ಶ್ರೀರಾಮ ನವಮಿ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀರಾಮನ ಜೀವನ ಮತ್ತು ವ್ಯಕ್ತಿತ್ವ”ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಶ್ರೀರಾಮ ನಾಮವು ತಾರಕ ಮಂತ್ರವಾಗಿದ್ದು ಇದರ ನಿತ್ಯನಾಮ ಸ್ಮರಣೆಯಿಂದ ಮಾನವ ಜೀವನದ ಮುಖ್ಯ ಉದ್ದೇಶವಾದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದ ಅವರು ಶ್ರೀಮದ್ ರಾಮಾಯಣದ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.
ವಿಶೇಷ ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ,ಶ್ರೀಲತಾ ಗೋವಿಂದರಾಜು ನೇತೃತ್ವದ ಬಿಂದು ಮತ್ತು ಸಂಗಡಿಗರಿಂದ ಶ್ರೀಹನುಮಾನ್ ಚಾಲೀಸಾ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಮತಿ ಮೀನಾಕ್ಷಮ್ಮ, ಎಂ ಗೀತಾ ನಾಗರಾಜ್, ಗೀತಾ ಪ್ರಕಾಶ್, ಅಂಬಿಕಾ ಪರಮೇಶ್ವರ್, ಶ್ರೀರಾಧಾ ಮಾಧವ ಭಜನಾ ಮಂಡಳಿಯ ಶ್ರೀಮತಿ ಪರಿಮಳಾ ನಾಗರಾಜ್, ತಿಪ್ಪಮ್ಮ, ಮೋಹಿನಿ, ಮಾಕಂಸ್ ಲಕ್ಷ್ಮೀ ಬಾಲಾಜೀ, ನಾಗರತ್ನಮ್ಮ ಅವರಿಂದ ವಿಶೇಷ ಶ್ರೀರಾಮನ ಭಜನೆಗಳು, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಸರಸ್ವತಿ ರಾಜು, ಗುಣಶೇಖರ್, ಚೇತನ್ ಕುಮಾರ್, ಕವಿತಾ, ಸಂಗೀತ,ಸಂಜನಾ, ಗಾಯತ್ರಿ, ಮಹಾಲಕ್ಷ್ಮೀ, ಹಂಸ, ದ್ರಾಕ್ಷಾಯಣಿ, ಅನ್ನಪೂರ್ಣ , ದೀಪಿಕಾ, ಸೌಮ್ಯ ಪ್ರಸಾದ್, ವಿಶಾಲಮ್ಮ, ಕೀರ್ತನಾ, ಪವಿತ್ರ,ಚಂದ್ರಕಲಾ,ಲಕ್ಷ್ಮೀ, ವೈಷ್ಣವಿ,ರೂಪ, ಶ್ರೀದೇವಿ, ಸುಬ್ರಹ್ಮಣ್ಯ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

