ಇಂದಿನಿಂದ ಪವಾಡ ಬಸವೇಶ್ವರ ಜಾತ್ರಾ – ಮಹೋತ್ಸವವು ಜರುಗುವುದು.

ಬಸರಕೋಡ ಏ.02

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ, ಏ, 03-4-2026 ರಿಂದ 09-4-2026 ರ ವರೆಗೆ ಅತಿ ವೈಭವದಿಂದ ಜರುಗುವುದು. ಏ, 3 ರಂದು ಬೆಳಿಗ್ಗೆ 06:00 ಗಂಟೆಗೆ ಶ್ರೀ ಪವಾಡ ಬಸವೇಶ್ವರ ಮೂರ್ತಿಗೆ ಅಭಿಷೇಕ ನಂತರ ಗುಡಿಯ ಕಳಸೋಸ್ತವ ಮತ್ತು ಪಲ್ಲಕ್ಕಿ ಉತ್ಸವದೊಂದಿಗೆ ಕುಂಭಮೇಳ ಜರಗುವುದು, ನಂತರ ಸೂತ್ರ ಶಿವ ಭಜನೆ ಇರುವುದು ಅಂದೇ ರಾತ್ರಿ 10:00 ಗಂಟೆಗೆ ಸುಪ್ರಸಿದ್ಧ ಡೊಳ್ಳಿನ ಪದಗಳು ಜರುಗುವುದು.

ಏ, 4 ರಂದು ಮುಂಜಾನೆ 8:00 ಗಂಟೆಗೆ ಭಾರವಾದ ಚೀಲ ಎತ್ತುವುದು, ಮಧ್ಯಾಹ್ನ 4 ಗಂಟೆಗೆ ರೂಡಿಗಿ ಗ್ರಾಮಸ್ಥರಿಂದ ತೇರಿನ ಮನಿ ಮೆರವಣಿಗೆ ಮೂಲಕ ಜರಗುವುದು.

ನಂತರ ಮಹಾ ರಥೋತ್ಸವ ನಡೆಯುವುದು, ಅಂದೇ ರಾತ್ರಿ 09:00 ಗೆ ವಿಶ್ವ ಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯ ಸಂಘ ಜೇವರ್ಗಿ ಇವರಿಂದ ಮುತ್ತಿನಂತ ಅತ್ತಿಗೆ ಎಂಬ ಸಾಮಾಜಿಕ ನಾಟಕ ಇರುವುದು. ಏ 5 ರಂದು ಮುಂಜಾನೆ 11:00 ಗಂಟೆಗೆ ಭಾರವಾದ ಕಲ್ಲು ಜಗ್ಗುಸುವುದು ಸ್ಪರ್ಧೆ ಇರುವುದು. ಏ 6 ರಂದು ಮುಂಜಾನೆ 10:00 ಗಂಟೆಗೆ ಎತ್ತಿನಗಾಡಿ ರೇಸ್ ನಡೆಯುವುದು.

ಮತ್ತು ಅಂದೆ ರಾತ್ರಿ 08:00 ಗಂಟೆಗೆ ಕಲಾ ಸಿಂಚನ ಮೆಲೋಡಿಸ್ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವುದು, ಏ, 7 ಮತ್ತು 8 ರಂದು ಮುಂಜಾನೆ 10:00 ಗಂಟೆಗೆ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಚರಂಡಿ ಸ್ಪರ್ಧೆ ನಡೆಯುವುದು, ಒಟ್ಟು 20 ಬಹುಮಾನಗಳು ಇವೆ.

ಇದರಲ್ಲಿ ಪ್ರಥಮ, ದ್ವಿತೀಯ, ಮತ್ತು ತೃತೀಯ ಸ್ಥಾನಕ್ಕೆ ದ್ವಿಚಕ್ರ ವಾಹನಗಳು ಇವೆ, ಉಳಿದ 17 ಬಹುಮಾನಕ್ಕೆ ಉತ್ತಮವಾದ ನಗದು ಬಹುಮಾನಗಳು ಇರುತ್ತವೆ. ಅಂದೇ ರಾತ್ರಿ 10:00 ಗಂಟೆಗೆ ಸುಪಾರಿ ಸರೋಜಾ ಎಂಬ ಸುಂದರ ಸಾಮಾಜಿಕ ನಾಟಕ ಇರುತ್ತದೆ.

ಏ, 9 ರಂದು ಮುಂಜಾನೆ 9:00ಗೆ ನಾಲ್ಕು ಡಬ್ಬಿ ಟ್ಯಾಕ್ಟರ್ ಟೈಲರ್ ಜಗ್ಗು ಸ್ಪರ್ಧೆ ಇರುತ್ತದೆ. ಮತ್ತು ಪ್ರತಿ ದಿನ ಅನ್ನದಾಸೋಹ ಜರುಗುವುದು ಎಂದು ಜಾತ್ರಾ ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button