🚨STATE MEGA EXPOSE, ವಡ್ಡರ್ಸೆ ದೇವಸ್ಥಾನದಲ್ಲಿ ಕೋಟ್ಯಂತರ ರೂ. ಲೂಟಿ – ಬಯಲಾಯ್ತು ಮುಖವಾಡ!🚨🔥 ಕೆ.ಉದಯ್ ಕುಮಾರ್ ಶೆಟ್ಟಿ, ಚಂದ್ರ, ಬಾಲಕೃಷ್ಣ ಶೆಟ್ಟಿ, ಸುಮತಿ ಕುಂದರ್, ವೇಣುಗೋಪಾಲ್ ಶೆಟ್ಟಿ & ಟೀಂ ನಿಂದ ಭಕ್ತರಿಗೆ ಮಹಾ ದ್ರೋಹ..?🔥
ಬೆಂಗಳೂರು/ಉಡುಪಿ ಏ.02

ರಾಜ್ಯದ ಧಾರ್ಮಿಕ ಇತಿಹಾಸದಲ್ಲೇ ಅತ್ಯಂತ ಕರಾಳ ಹಗರಣವೊಂದು ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ! ಸುಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿಗಳ ನಿಧಿ ದುರುಪಯೋಗ ಮತ್ತು ಅಧಿಕಾರ ದುರ್ಬಳಕೆ ನಡೆದಿದೆ ಎಂಬ ಸ್ಫೋಟಕ ಮಾಹಿತಿಯ ಬೆನ್ನಲ್ಲೇ, ಮುಜರಾಯಿ ಇಲಾಖೆಯು ಇಡೀ ತಂಡಕ್ಕೆ ‘ಸರ್ಜಿಕಲ್ ಸ್ಟ್ರೈಕ್’ ಮಾದರಿಯ ನೋಟಿಸ್ ಜಾರಿ ಮಾಡಿದೆ.
📍 ಹೆಡ್ ಲೈನ್‌ನಲ್ಲಿರುವ ಈ ಐವರು ‘ಮಹಾಶಯರು’ ಯಾರು..?
ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿರುವ ಅಕ್ರಮದ ಪ್ರಮುಖ ಪದಾಧಿಕಾರಿಗಳು ಇವರೇ
ಕೆ.ಉದಯ್ ಕುಮಾರ್ ಶೆಟ್ಟಿ (ಕೊತ್ತಾಡಿ):-
ಹಗರಣದ ಮುಖ್ಯ ಸೂತ್ರಧಾರ ಎಂಬ ಗಂಭೀರ ಆರೋಪ. ಚಂದ್ರ:-
(ಬೆನ್ ಗಜಾನ ಎಮ್ ಕಾಲೋನಿ).
ಬಾಲಕೃಷ್ಣ ಶೆಟ್ಟಿ:-
(ವಿ ಬಿನಾ ಬನ್ನಾಡಿ). ಸುಮತಿ ಕುಂದರ್:-
(ನಿತ್ಯಾನಂದ ಆಚಾರಿ ಪತ್ನಿ).
ಬಿ.ವೇಣುಗೋಪಾಲ್ ಶೆಟ್ಟಿ:-
(ಚಿನಾ ಮೂಡುಬೆಳ್ಳೆ ಕಟ್ಟು).
💣 ವಡ್ಡರ್ಸೆಯಲ್ಲಿ ನಡೆದ ‘ಮಹಾ ಲೂಟಿ’ ಯ ಸ್ಫೋಟಕ ಸತ್ಯಗಳು:-
💸 ಕೋಟಿ ಕೋಟಿ ಗೋಲ್ ಮಾಲ್:-

ಭಕ್ತರು ರಕ್ತ ಬೆವರಿಳಿಸಿ ದೇವರಿಗೆ ಅರ್ಪಿಸಿದ ಕಾಣಿಕೆ ಮತ್ತು ರಥ ನಿರ್ಮಾಣದ ನಿಧಿಯನ್ನು ವೈಯಕ್ತಿಕ ಐಷಾರಾಮಿ ಜೀವನಕ್ಕೆ ಬಳಸಿ ಕೊಂಡಿದ್ದಾರೆ ಎಂಬ ದೂರು ಸಲ್ಲಿಕೆ ಯಾಗಿದೆ. ದೇವಸ್ಥಾನದ ನಿಧಿಯನ್ನು ಸರಿಯಾದ ಮಾರ್ಗದಲ್ಲಿ ಬಳಸದೆ ಅಕ್ರಮ ಚಟುವಟಿಕೆಗಳಿಗೆ ಹರಿಸಲಾಗಿದೆ.
⚖️ ಕಾನೂನು ರಕ್ಷಕರಿಗೆ ಶಿಕ್ಷೆ ಎಂದು..?:-
ಈ ಹಗರಣದಲ್ಲಿ ಕೆಲವು ವಕೀಲರು ಭಾಗಿಯಾಗಿರುವುದು ಭಕ್ತರ ಕೆಂಡಾಮಂಡಲಕ್ಕೆ ಕಾರಣವಾಗಿದೆ. “ಕಾನೂನು ತಿಳಿದವರೇ ಅಧರ್ಮಕ್ಕೆ ಸಾಥ್ ನೀಡಿದ್ದು ಅಕ್ಷಮ್ಯ” ಎಂದು ಗ್ರಾಮಸ್ಥರು ಕಿಡಿಕಾರಿದ್ದು, ಅಂತಹ ವಕೀಲರನ್ನು ತಕ್ಷಣವೇ ಬಾರ್ ಕೌನ್ಸಿಲ್‌ನಿಂದ ವಜಾಗೊಳಿಸಬೇಕು ಎಂದು ಸರ್ಕಾರಕ್ಕೆ ಕಠಿಣ ಒತ್ತಾಯ ಮಾಡಿದ್ದಾರೆ.
🚫 ಮುಗಿಯದ ಅಧಿಕಾರ ದಾಹ:-
ಸಮಿತಿಯ ಅವಧಿ ಮುಗಿದು ವರ್ಷ ಕಳೆದರೂ, ಕುರ್ಚಿಗೆ ಅಂಟಿಕೊಂಡಿದ್ದ ಈ ತಂಡ ಬರೋಬ್ಬರಿ 12 ತಿಂಗಳುಗಳ ಕಾಲ ಕಾನೂನು ಬಾಹಿರವಾಗಿ ಆಡಳಿತ ನಡೆಸಿದೆ. ಇವರ ಅಧಿಕಾರದ ಹಪಹಪಿಗೆ ವಡ್ಡರ್ಸೆಯ ಗ್ರಾಮಸ್ಥರು ಈಗ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದಾರೆ.
⚡ ಮುಜರಾಯಿ ಇಲಾಖೆಯ 7 ದಿನಗಳ ಅಂತಿಮ ಗಡುವು..!

ಸಾರ್ವಜನಿಕರ ಸುನಾಮಿಯಂತಹ ದೂರುಗಳಿಗೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಈ ಐವರಿಗೂ ನೋಟಿಸ್ ತಲುಪಿದ 7 ದಿನಗಳ ಒಳಗೆ ಖುದ್ದಾಗಿ ಹಾಜರಾಗಿ ಕೋಟ್ಯಂತರ ರೂಪಾಯಿಗಳ ಲೆಕ್ಕ ನೀಡುವಂತೆ ಆದೇಶಿಸಿದ್ದಾರೆ. ಇಲ್ಲದಿದ್ದರೆ ಇವರ ಆಸ್ತಿ ಮುಟ್ಟುಗೋಲು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಾಗುವುದು ಗ್ಯಾರಂಟಿ!
ಗ್ರಾಮಸ್ಥರ ಸಿಡಿಗುಂಡಿನಂತಹ ಪ್ರಶ್ನೆ:-

ದೇವಸ್ಥಾನದ ಕಾಣಿಕೆ ಹಣ ಅಂದರೆ ನಿಮ್ಮ ಅಪ್ಪನ ಆಸ್ತಿ ಎಂದು ತಿಳಿದಿದ್ದೀರಾ..? ಭಕ್ತರ ನಂಬಿಕೆಗೆ ದ್ರೋಹ ಬಗೆದ ಈ ಕಿರಾತಕರಿಗೆ ಕತ್ತಲ ಕೋಣೆಯೇ ಅಂತಿಮ ದರ್ಶನ ವಾಗಬೇಕು..!
ಈ ಮಹಾ ಹಗರಣದ ವರದಿ ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವಿಧಾನ ಸೌಧದ ವರೆಗೂ ಈ ಬಿಸಿ ತಲುಪಿದೆ. ಪವಿತ್ರ ಕ್ಷೇತ್ರವನ್ನು ಲೂಟಿ ಮಾಡಿದ ಈ ತಂಡಕ್ಕೆ ನ್ಯಾಯ ದೇವತೆ ಶಿಕ್ಷೆ ನೀಡುತ್ತಾಳಾ ಎಂದು ಇಡೀ ಕರ್ನಾಟಕದ ಜನ ಕಾದು ನೋಡುತ್ತಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ

