ಭಾರತಾಂಬೆಯ ಸೇವೆ ಸಲ್ಲಿಸಿ ತಾಯ್ನಾಡಿಗೆ – ಮರಳುತ್ತಿರುವ ಯೋಧ.
ದೇವಿಪುರ ಏ.03

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪುಟ್ಟ ಗ್ರಾಮ ದೇವಿಪುರದಲ್ಲಿ ಹುಟ್ಟಿದ ಶ್ರೀ ಮಲ್ಲಯ್ಯ ನಾಯಕ ಪೆದರೆಡ್ಡಿರವರು ಕಡು ಬಡತನದಲ್ಲಿ ಹುಟ್ಟಿ ಸ್ವ ಗ್ರಾಮದಲ್ಲಿ ವಿದ್ಯಾಭ್ಯಾಸ ಆರಂಭ ಮಾಡಿ ನಂತರದ ದಿನಗಳಲ್ಲಿ ಹೆಚ್ಚಿನ ಅಭ್ಯಾಸ ಮಾನ್ವಿ ತಾಲೂಕಿನ ಸರ್ಕಾರಿ ಶಾಲಾ ಕಾಲೇಜು ಗಳಲ್ಲಿ ಅಭ್ಯಾಸ ಮಾಡಿ 2004 ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಸೇರಿ ತರಬೇತಿ ಮುಗಿದ ನಂತರ ಭಾರತದ ಗುಜರಾತ್ ದಿಂದ ಹಿಡಿದು ಈಶಾನ್ಯ ರಾಜ್ಯಗಳಲ್ಲಿಯೂ ಕೂಡ ತಮ್ಮ ಸೇವೆ ಸಲ್ಲಿಸಿ ಈಗ ಸ್ವಯಂ ನಿವೃತ್ತಿ ಗೊಂಡು ಸ್ವ ಗ್ರಾಮಕ್ಕೆ ದಿನಾಂಕ 4/4/2026 ರಂದು ಶನಿವಾರ ಆಗಮಿಸುತ್ತಿದ್ದಾರೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿ ಕೊಳ್ಳುವವರಿದ್ದಾರೆ.
ಕಾರಣ ಮಾನ್ವಿ ತಾಲೂಕಿನ ಸಮಸ್ತ ದೇಶ ಭಕ್ತರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಯೋಧನಿಗೆ ಸ್ವಾಗತ ಕೋರಬೇಕೆಂದು ಅಧ್ಯಕ್ಷರು ಕೇಂದ್ರೀಯ ಶಸಸ್ತ್ರ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ಸಿರವಾರ ಮತ್ತು ಮಾನ್ವಿ ಹಾಗೂ ರಾಜ್ಯಾಧ್ಯಕ್ಷರು ಪಧಾಧಿಕಾರಿಗಳು ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ಹಾಗೂ ಮಾನ್ವಿ ತಾಲೂಕಿನ ಖಾಸಗಿ ಉಪನ್ಯಾಸಕರು ಸಮಸ್ತ ಯುವ ಬಳಗ ವಿನಂತಿಸಿ ಕೊಂಡಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

