ಚಿನ್ಮೂಲದ್ರಿ ಸಾಹಿತ್ಯ ವೇದಿಕೆಗೆ ನೂತನ – ಪದಾಧಿಕಾರಿಗಳ ನೇಮಕ.
ಚಿತ್ರದುರ್ಗ ಏ.03

ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ವಿವಿಧ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ವೇದಿಕೆಯ ಅಧ್ಯಕ್ಷರಾಗಿ ಕಳೆದ ಹದಿನೆಂಟು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶಾರದಾ ಬಿ.ಜೈರಾಮ್, ಉಪಾಧ್ಯಕ್ಷರಾಗಿ ಡಾ, ಬಸವರಾಜ ಅರ್ತಿ,ಮೀರಾ ನಾಡಿಗ್,ಡಾ, ಚಾಂದಿನಿ ಖಲೀದ್,ಗೌರವ ಅಧ್ಯಕ್ಷರಾಗಿ ಬಿ.ಕೆ ರಹಮತ್ ಉಲ್ಲಾ,ಗೌರವ ಸಲಹೆಗಾರರಾಗಿ ಕೊರ್ಲಕುಂಟೆ ತಿಪ್ಪೇಸ್ವಾಮಿ, ಖಜಾಂಚಿಯಾಗಿ ಸುಮಾ ರಾಜಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎನ್.ಶಿವಾನಂದ ಬಂಡೇಹಳ್ಳಿ, ಸಹ ಕಾರ್ಯದರ್ಶಿಗಳಾಗಿ ಮಹಮ್ಮದ್ ಸಾಧತ್, ಹೆಚ್,ಸತೀಶ್ ಕುಮಾರ್, ಪ್ರವೀಣ್ ಬೆಳಗೆರೆಸಂಘಟನಾ ಕಾರ್ಯದರ್ಶಿಗಳಾಗಿ ವಿನಾಯಕ ಆರ್,ಜಿ ಶಿವರುದ್ರಪ್ಪ ಪಂಡ್ರಳ್ಳಿ, ಪತ್ರಿಕಾ ಕಾರ್ಯದರ್ಶಿಗಳಾಗಿ ಯತೀಶ್ ಎಂ ಸಿದ್ದಾಪುರ, ಟಿ.ಶಿವಮೂರ್ತಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಕೆ.ಎಸ್ ತಿಪ್ಪಮ್ಮ ನಾಗರಾಜ್, ರಾಗಿ ಗಿರೀಶ್ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ ಎಂದು ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ದಯಾವತಿ ಪುತ್ತೂರ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

