ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ – ಹೊರಗಿನ ಬೆಂಬಲ ಘೋಷಣೆ.

ಬಾಗಲಕೋಟೆ ಏ.06

ಇದೇ ಏಪ್ರಿಲ್ 9 ರಂದು ಜರುಗುವ ಸದರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಇವರನ್ನು ಬೆಂಬಲಿಸುವಂತೆ ಮತದಾರರನ್ನು ಈ ಪತ್ರಿಕಾ ಗೋಷ್ಟಿಯ/ಮಾಧ್ಯಮಗಳ ಮೂಲಕ ಕೋರುತ್ತೇವೆ.

ದಿll ಎಚ್.ವಾಯ್ ಮೇಟಿ ಯವರು ಬಾಗಲಕೋಟೆ ಕ್ಷೇತ್ರದಲ್ಲಿ ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆಯನ್ನು ತೋರಿದ್ದು ಅವರ ಜನಪರ ಕಾರ್ಯಗಳನ್ನು ಮುಂದುವರೆಸಲು ಬದ್ದತೆಯಿಂದ ಚುನಾವಣಾ ಕಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೇಟಿ ಅವರ ಮಗ ಉಮೇಶ್ ಮೇಟಿ ರವರನ್ನು ಗೆಲ್ಲಿಸುವ ಮೂಲಕ ಬಾಗಲಕೋಟೆಯ ಮತದಾರರು, ಬಾಗಲಕೋಟೆಯ ಸಮಗ್ರ ಅಭಿವೃದ್ಧಿಗೆ ಬುನಾದಿ ಹಾಕಬೇಕೆಂದು ಈ ಮೂಲಕ ಕೋರುತ್ತೇವೆ.

ಕಳೆದ ಮೂರು ವರ್ಷಗಳಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದ ಎಲ್ಲಾ ಜಾತಿಗಳ ಎಲ್ಲಾ ಧರ್ಮಗಳ ಜನತೆಯ ಬದುಕನ್ನು ಉತ್ತಮ ಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಿರುವುದು ಮತದಾರರಿಗೆ ಮನವರಿಕೆ ಯಾಗಿರುತ್ತದೆ. ಈ 5 ಗ್ಯಾರಂಟಿ ಕಾರ್ಯಕ್ರಮಗಳೆಂದರೆ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ, ಯುವನಿಧಿ.ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಯಾವುದೇ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿಲ್ಲವಾಗಿ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು ಈ ಸರ್ಕಾರವು ಜನತೆ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ.

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷದ ಮಾನ್ಯ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಯವರು ತಾವು ಅಧಿಕಾರದಲ್ಲಿ ಇದ್ದಾಗ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಾಯ್ದೆಯನ್ನು ಜಾರಿ ಗೊಳಿಸಲಿಲ್ಲ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜಂಟಿ ಹೋರಾಟಕ್ಕೆ ಮಣಿದು ಬಸವರಾಜ್ ಬೊಮ್ಮಾಯಿ ರವರು ಒಟ್ಟಾರೆ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು 18% ನಿಂದ 24% ಗೆ ಏರಿಕೆ ಮಾಡಿ ಸರ್ಕಾರಿ ಆದೇಶ ಹೊರಡಿಸಿದಾಗ ನಾವೆಲ್ಲಾ ಹೋರಾಟಗಾರರು ಜಾತಿ ಆಧಾರಿತ ಮೀಸಲಾತಿ ಪ್ರಮಾಣವು ಸುಪ್ರೀಂ ಕೋರ್ಟ್ ತೀರ್ಪುನ 50% ಮೀತಿಯನ್ನು 56% ಗೆ ಏರಿಕೆಯಾಗುವುದರಿಂದ ಈ ಕ್ರಮವನ್ನು ಸಂವಿಧಾನದ 9 ನೇ ಷೆಡ್ಯೂಲ್ ಗೆ ಸೇರಿಸಲು ಬಿಜೆಪಿ ಪಕ್ಷದ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಯವರಿಗೆ ಆಗ್ರಹ ಪಡಿಸಬೇಕೆಂದು ಹೋರಾಟ ಮಾಡಿದರೂ ಸಹಿತ ಬಸವರಾಜ್ ಬೊಮ್ಮಾಯಿ ರವರು ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಇದೀಗ ಸದರಿ ಮೀಸಲಾತಿ ಏರಿಕೆಗೆ ನ್ಯಾಯಾಲಯಗಳಲ್ಲಿ ಕೆಲವರು ತಡೆಯಾಜ್ಞೆಯನ್ನು ತಂದಿದ್ದು ಅನಿವಾರ್ಯವಾಗಿ ಪ್ರಸ್ತುತ ಜಾತಿ ಆಧಾರಿತ ಮೀಸಲಾತಿ ಪ್ರಮಾಣವನ್ನು 50% ಗೆ ಇಳಿಕೆ ಮಾಡಬೇಕಾಯಿತು. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಪರಿಶಿಷ್ಟರ ಸಮಸ್ಯೆಗಳನ್ನು ಬಗೆ ಹರಿಸದೇ ತಾವು ದಲಿತ ವಿರೋಧಿಗಳೆಂದು ನಿರೂಪಿಸಿದರು.

ಈ ಪತ್ರಿಕಾ ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಗಳ & ದಲಿತ ಸಂಘಟನೆಗಳ ಒಕ್ಕೂಟದ ಸಂಸ್ಥಾಪಕದ ರಾಜ್ಯಾಧ್ಯಕ್ಷರು ಶ್ರೀ ಧರ ಕಲಿವೀರ ಬೆಂಗಳೂರು. ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ. ಇನ್ನೊರ್ವ ರಾಜ್ಯ ಸಂಘಟನಾ ಸಂಚಾಲಕರು ಹನುಮಂತಪ್ಪ ಕಾಕರಗಲ್ ರಾಯಚೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೀಗಾ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉಪ ಚುನಾವಣೆ ಮುಗಿದ ನಂತರ ರೋಸ್ಟ‌ರ್ ಬಿಂದುಗಳಲ್ಲಿರುವ ದೋಷಗಳನ್ನು ಸರಿಪಡಿಸಿ ಪರಿಶಿಷ್ಟರ ಒಳ ಮೀಸಲಾತಿ ಕಾನೂನನ್ನು ಜಾರಿ ಗೊಳಿಸಲು ಕಾಂಗ್ರೆಸ್ ಸರ್ಕಾರವು ಬದ್ದ ವಾಗಿರುವುದಾಗಿ ಈಗಾಗಲೇ ಘೋಷಣೆಯನ್ನು ಮಾಡಿದ್ದು ಈ ಭರವಸೆಯನ್ನು ಈಡೇರಿಸ ಬೇಕೆಂಬ ಷರತ್ತುಗಳನ್ನು ಹಾಕಿ ಸದರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊರಗಿನ ಬೆಂಬಲವನ್ನು ನಾವೆಲ್ಲಾ ದಲಿತ ಸಂಘಟನೆಗಳು ಈ ಮೂಲಕ ಬೆಂಬಲಿಸುತ್ತೇವೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button