ರಾಮಾಯಣ ಮಹಾ ಮಾಲಾರತ್ನ ಶ್ರೀಆಂಜನೇಯಸ್ವಾಮಿ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಏ.04

ಶ್ರೀಮದ್ ರಾಮಾಯಣವೆಂಬ ಮಹಾಮಾಲೆಯ ಬೆಲೆ ಬಾಳುವ ರತ್ನ ಶ್ರೀಆಂಜನೇಯ ಸ್ವಾಮಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಹನುಮ ಜಯಂತಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಹನುಮಂತರು” ಮತ್ತು “ಶ್ರೀಮಾತೆ ಶಾರದಾದೇವಿಯವರ ಚಿಂತನ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.

ಹನುಮಂತನು ಶ್ರೀರಾಮನ ಮೇಲಿಟ್ಟಿದ್ದ ಭಕ್ತಿಯು ಅಸಾಧಾರಣವಾದದ್ದು.ಶ್ರೀರಾಮನ ನಿಷ್ಠಾವಂತ ದೂತನಾದ ಆಂಜನೇಯಸ್ವಾಮಿಯ ನಿತ್ಯ ಸ್ಮರಣೆಯಿಂದ ನಮಗೆ ಬುದ್ಧಿ,ಬಲ,ಯಶಸ್ಸು, ಧೈರ್ಯ, ನಿರ್ಭಯತೆ, ಆರೋಗ್ಯಪ್ರಾಪ್ತಿ, ಆಲಸ್ಯದಿಂದ ಮುಕ್ತಿ, ವಾಕ್ಚಾತುರ್ಯ ಸಿದ್ಧಿಸುತ್ತದೆ ಎಂದರು.
ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಆಂಜನೇಯರ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ಸತ್ಸಂಗ ಸಭೆಯಲ್ಲಿ ಶ್ರೀಮತಿ ಈಶ್ವರಮ್ಮ, ಎಂ ಗೀತಾ ನಾಗರಾಜ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ, ವನಜಾಕ್ಷಿ ಮೋಹನ್, ಸುಮನಾ, ಸಿ.ಎಸ್ ಭಾರತಿ, ಮಂಜುಳಾ ಉಮೇಶ್, ಅಂಬುಜಾ ಶಾಂತಕುಮಾರ್, ಗೀತಾ ವೆಂಕಟೇಶರೆಡ್ಡಿ, ಅನ್ವಿಕಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

