🚨BREAKING NEWS: ಲೋಕಾಯುಕ್ತದ ‘ಅಧಿಕಾರ ಡಕಾಯಿತಿ’ ವಿರುದ್ಧ ಪತ್ರಕರ್ತರ ರಣ ಕಹಳೆ!🚨 💥”ಸತ್ಯ ಬರೆದರೆ ಸುಳ್ಳು ಕೇಸ್, ಪ್ರಶ್ನಿಸಿದರೆ ಕಿರುಕುಳ”, ಪತ್ರಿಕಾ ಸ್ವಾತಂತ್ರ್ಯ ಕಸಿಯುತ್ತಿರುವ ‘ಡಕಾಯಿತ’ ಅಧಿಕಾರಿಗಳ ಅಟ್ಟಹಾಸ – ಪತ್ರಕರ್ತರ ಎದೆ ಗುಂದದ ಸವಾಲ್..!💥

ಬೆಂಗಳೂರು/ಉಡುಪಿ ಏ.04

ರಾಜ್ಯದ ಭ್ರಷ್ಟಾಚಾರದ ವಿರುದ್ಧದ ಕಾವಲು ಪಡೆ ಎನಿಸಿ ಕೊಂಡಿರುವ ಲೋಕಾಯುಕ್ತ ಸಂಸ್ಥೆಯ ಕೆಲವು ಅಧಿಕಾರಿಗಳು ಇಂದು **”ಡಕಾಯಿತರ”*ಂತೆ ವರ್ತಿಸುತ್ತಿರುವುದು ಇಡೀ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಭ್ರಷ್ಟರ ಬಣ್ಣ ಬಯಲು ಮಾಡುವ ಪತ್ರಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಆದರೆ, ಸತ್ಯವನ್ನೇ ಉಸಿರಾಗಿಸಿ ಕೊಂಡ ಪತ್ರಕರ್ತರಿಗೆ ಇಂತಹ ಬೆದರಿಕೆಗಳು ಹೊಸದಲ್ಲ.

🔥 ಪತ್ರಿಕಾ ಸ್ವಾತಂತ್ರ್ಯದ ಮೇಲೆ ಲೋಕಾಯುಕ್ತ ‘ಡಕಾಯಿತರ’ ಸವಾರಿ!

ಲೋಕಾಯುಕ್ತ ಸಂಸ್ಥೆಯ ಒಳಗಿನ ಕರಾಳ ಮುಖವನ್ನು ಅನಾವರಣ ಗೊಳಿಸಿದರೆ, ಆ ಪತ್ರಕರ್ತರನ್ನೇ ಗುರಿ ಮಾಡಿ ದಮನಕಾರಿ ನೀತಿ ಅನುಸರಿಸಲಾಗುತ್ತಿದೆ.

ಸುಳ್ಳು ಕೇಸುಗಳ ದರ್ಬಾರ್:-

ಲೋಕಾಯುಕ್ತದ ಅಕ್ರಮಗಳನ್ನು ಪ್ರಶ್ನಿಸುವ ಪತ್ರಕರ್ತರ ಮೇಲೆ ಸುಳ್ಳು ಎಫ್‌.ಐ.ಆರ್‌ ಗಳನ್ನು ದಾಖಲಿಸುವ ಮೂಲಕ ಅವರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಲಾಗುತ್ತಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿ.

ಕಿರುಕುಳದ ಅಸ್ತ್ರ:-

ಸತ್ಯವನ್ನು ಸಮಾಜದ ಮುಂದೆ ಇಟ್ಟರೆ, ಅಂತಹ ಪತ್ರಕರ್ತರನ್ನೇ ಆರೋಪಿಗಳನ್ನಾಗಿ ಮಾಡಿ ಜೈಲಿಗೆ ಅಟ್ಟುವ ಹುನ್ನಾರ ನಡೆಯುತ್ತಿದೆ. ಭ್ರಷ್ಟರನ್ನು ಬಿಟ್ಟು, ಭ್ರಷ್ಟಾಚಾರ ಬಯಲು ಮಾಡುವ ಪತ್ರಕರ್ತರನ್ನೇ ಬೇಟೆಯಾಡುತ್ತಿರುವ ಈ ಅಧಿಕಾರಿಗಳು ಅಕ್ಷರಶಃ “ಅಧಿಕಾರದ ಡಕಾಯಿತರು”.

📍 ಉಡುಪಿ ಹಗರಣ:-

ನಕಲಿ ಟ್ರಾಪ್ ಮತ್ತು ಸಾರ್ವಜನಿಕ ಆಕ್ರೋಶ! ಉಡುಪಿ ಲೋಕಾಯುಕ್ತ ಘಟಕದ ಕಾರ್ಯ ವೈಖರಿ ಈಗ ಸಂಶಯದ ಸುಳಿಯಲ್ಲಿದೆ.

ನಕಲಿ ಟ್ರಾಪ್ ದಂಧೆ:-

ಉಡುಪಿಯಲ್ಲಿ ಅಧಿಕಾರಿಗಳು ಹಣದ ಆಸೆಗಾಗಿ ಅಥವಾ ರಾಜಕೀಯ ಪ್ರೇರಿತವಾಗಿ ‘ನಕಲಿ ಟ್ರಾಪ್’ ಹೂಡಿ ಅಮಾಯಕರನ್ನು ಸಿಲುಕಿಸುತ್ತಿದ್ದಾರೆ. ಈ ಹಗರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಲೋಕಾಯುಕ್ತ ಪೊಲೀಸರ ನೈತಿಕತೆ ಪ್ರಶ್ನಾರ್ಹವಾಗಿದೆ.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?:-

ಉಡುಪಿಯ ಅಧಿಕಾರಿಗಳು ನಡೆಸುತ್ತಿರುವ ಈ ಕಾನೂನು ಬಾಹಿರ ಕೃತ್ಯಗಳನ್ನು ಕೇಳುವವರೇ ಇಲ್ಲದಂತಾಗಿದೆ. ಸಾರ್ವಜನಿಕರು ಈಗ ಈ “ನಕಲಿ ಶೂರರ” ವಿರುದ್ಧ ಬೀದಿಗೆ ಇಳಿಯುವ ಕಾಲ ಬಂದಿದೆ.

⚠️ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅಂದೇ ಎಚ್ಚರಿಸಿದ್ದ ಸತ್ಯ..!

ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅವರು ಲೋಕಾಯುಕ್ತ ಸಂಸ್ಥೆಯು ದಾರಿ ತಪ್ಪುತ್ತಿರುವುದನ್ನು ಮೊದಲೇ ಅರಿತಿದ್ದರು.ಅವರು ಹೇಳಿದಂತೆ, “ಯಾವಾಗ ರಕ್ಷಕನೇ ಭಕ್ಷಕನಾಗುತ್ತಾನೋ, ಆಗ ವ್ಯವಸ್ಥೆ ಕುಸಿಯುತ್ತದೆ.” ಲೋಕಾಯುಕ್ತ ಸಂಸ್ಥೆಯು ಭ್ರಷ್ಟರ ಪರವಾಗಿ ಕೆಲಸ ಮಾಡುತ್ತಿದೆ ಮತ್ತು ಸತ್ಯವಂತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿದೆ ಎಂಬ ಅವರ ಮಾತುಗಳು ಇಂದು ಉಡುಪಿ ಮತ್ತು ಇಡೀ ರಾಜ್ಯದ ಪ್ರಕರಣಗಳಲ್ಲಿ ನಿಜವಾಗುತ್ತಿವೆ.

🔍 ಆಸ್ತಿ ವಿವರದ ಗೋಲ್ಮಾಲ್:-

ತನಿಖೆ ಮಾಡುವವರು ಯಾರು..? ಲೋಕಾಯುಕ್ತ ಅಧಿಕಾರಿಗಳು ಮತ್ತು ಲೋಕಾಯುಕ್ತರೇನು ಸಾಚಾಗಳಲ್ಲ ಅಥವಾ ಸಹಚರರಲ್ಲ.

ತಮ್ಮ ಆಸ್ತಿ ವಿವರಗಳನ್ನು ಗೌಪ್ಯವಾಗಿಟ್ಟು ಕೊಂಡು, ಇತರರ ಆಸ್ತಿಯ ಮೇಲೆ ಕಣ್ಣಿಡುವ ಇವರ ನೈತಿಕತೆ ಎಷ್ಟು ಸಮಂಜಸ..? ಇವರ ಅಕ್ರಮ ಆಸ್ತಿಯನ್ನು ತನಿಖೆ ಮಾಡಲು ರಾಜ್ಯದಲ್ಲಿ ಸ್ವತಂತ್ರ ವ್ಯವಸ್ಥೆಯಿಲ್ಲದಿರುವುದು ಭ್ರಷ್ಟರಿಗೆ ವರ ದಾನವಾಗಿದೆ.

ಲೋಕಾಯುಕ್ತ ಇಲಾಖೆಯ ಒಳಗಿನ ಹಗರಣಗಳನ್ನು ಬಯಲಿಗೆಳೆಯುವ ಪತ್ರಕರ್ತರನ್ನು ಕಿರುಕುಳಕ್ಕೆ ಒಳ ಪಡಿಸುವ ಮೂಲಕ ಇವರು ತಮ್ಮ ಆಸ್ತಿ ಮತ್ತು ಅಕ್ರಮಗಳನ್ನು ಮುಚ್ಚಿಡುತ್ತಿದ್ದಾರೆ.

⚔️ ಪತ್ರಕರ್ತರ ಸವಾಲ್:-

ಹಿಂಜರಿಯುವ ಪ್ರಶ್ನೆಯೇ ಇಲ್ಲ! ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಜಗತ್ತಿನ ಮುಂದೆ ಇಡುವ ಪತ್ರಕರ್ತರಿಗೆ ಇಂತಹ ಬೆದರಿಕೆಗಳು ಹೊಸತಲ್ಲ.

ಬೆದರಿಕೆಗೆ ಮಣಿಯಲ್ಲ:-

“ಎಷ್ಟೇ ಸುಳ್ಳು ಕೇಸು ಹಾಕಿದರೂ, ಎಷ್ಟೇ ಕಿರುಕುಳ ನೀಡಿದರೂ ಲೋಕಾಯುಕ್ತ ದೊಳಗಿನ ಡಕಾಯಿತರ ಬಣ್ಣ ಬಯಲು ಮಾಡದೆ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ” ಎಂದು ಪತ್ರಕರ್ತರು ಖಡಕ್ ಸವಾಲ್ ಎಸೆದಿದ್ದಾರೆ.

ಪತ್ರಿಕಾ ಧರ್ಮವೇ ಶಕ್ತಿ:-

ಸಮಾಜದ ಸತ್ಯವನ್ನು ಬರೆಯುವುದೇ ಪತ್ರಕರ್ತರ ಪತ್ರಿಕಾ ಧರ್ಮ. ಯಾವ ರೀತಿಯ ಬೆದರಿಕೆ ಒಡ್ಡಿದರೂ ಸಮಾಜದ ಮುಂದೆ ಸತ್ಯವನ್ನು ಇಡುವ ಕೆಲಸ ನಿಲ್ಲದು.

ಕಾನೂನು ಹೋರಾಟ ಶತಸಿದ್ಧ:-

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನು ಕಸಿಯುವ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲು ಪತ್ರಕರ್ತರ ಪಡೆ ಸಜ್ಜಾಗಿದೆ.

ಸಂಪಾದಕೀಯ ಟಿಪ್ಪಣಿ:-

ಯಾವ ಅಧಿಕಾರಿಯೂ ಕಾನೂನಿಗಿಂತ ದೊಡ್ಡವನಲ್ಲ. ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಪತ್ರಕರ್ತರಿಗೆ ಬೆದರಿಕೆ ಒಡ್ಡುವುದು ಹೇಡಿತನದ ಲಕ್ಷಣ. ಸತ್ಯವನ್ನು ಬರೆಯುವ ಕಾಲಂ ಇಂದಿಗೂ ಹರಿತವಾಗಿದೆ. ಲೋಕಾಯುಕ್ತ ದೊಳಗಿನ ಈ ‘ಡಕಾಯಿತಿ’ ವ್ಯವಸ್ಥೆಯನ್ನು ಪತ್ರಕರ್ತರು ನ್ಯಾಯಾಲಯದ ಕಟ್ಟೆಯಲ್ಲಿ ಮತ್ತು ಸಾರ್ವಜನಿಕರ ಮುಂದೆ ಬೆತ್ತಲೆ ಮಾಡುವುದು ಖಚಿತ.ಸತ್ಯವನ್ನೇ ಬರೆಯುತ್ತೇವೆ! ಧರ್ಮಯುದ್ಧ ಮುಂದುವರಿಯುತ್ತದೆ..!

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button