ಭಗವಂತ ಬೇಕೆಂಬ ವ್ಯಾಕುಲತೆಯಂತೆ ಮಕ್ಕಳು ಓದಿನಲ್ಲಿ ಆಸಕ್ತಿಯನ್ನು ಬೆಳೆಸಿ ಕೊಳ್ಳಬೇಕು – ಚೇತನ್ ಕುಮಾರ್ ಅಭಿಪ್ರಾಯ.
ಚಳ್ಳಕೆರೆ ಏ.09

ಭಗವಂತ ಬೇಕೆಂಬ ವ್ಯಾಕುಲತೆಯಂತೆ ಮಕ್ಕಳು ಸಹ ಅದೇ ರೀತಿಯಲ್ಲಿ ಓದಿನಲ್ಲಿ ಆಸಕ್ತಿಯನ್ನು ಬೆಳೆಸಿ ಕೊಂಡರೆ ಖಂಡಿತ ವಾಗಿಯೂ ಯಶಸ್ವಿ ಯಾಗಬಹುದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಚೇತನ್ ಕುಮಾರ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ‘ವ್ಯಾಕುಲತೆಗೆ ಸಂಬಂಧಿಸಿದ ಕಥೆ’ ಯನ್ನು ಹೇಳುತ್ತ ಮಾತನಾಡುತ್ತಿದ್ದರು.

ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳು, ಅಮ್ಮಾ ಶಾರದಾಮಾತೆ ಪಠಣ ನಡೆದರೆ ಯತೀಶ್ ಎಂ ಸಿದ್ದಾಪುರ ಅವರು ‘ಆತ್ಮಾರಾಮ ಆನಂದರಮಣ’ ಎಂಬ ಭಜನೆಯನ್ನು ಹಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ವಿವಿಧ ಆಟಗಳನ್ನು ಸಂತೋಷ್ ಕುಮಾರ್ ಅವರು ಆಡಿಸಿದರು.
ತರಗತಿಯಲ್ಲಿ ಡಾ.ಭೂಮಿಕಾ, ಹರ್ಷಿತಾ,ವಿವಿಕ್ತ, ವಶಿಷ್ಠಾ, ಜಶ್ವಿತಾ, ವರ್ಷ,ನಿಶೀಕಾ, ಲಕ್ಷ್ಮೀ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

