ಕುಸ್ತಿ ಪಂದ್ಯದಲ್ಲಿ ರಿಯಾಜಗೆ ಪ್ರಥಮ ಬಹುಮಾನ ಹಾಗೂ – ಗದೆ ನೀಡಿ ಗೌರವಿಸಿದರು.
ಬಳಬಟ್ಟಿ ಏ.09

ಮುದ್ದೇಬಿಹಾಳ ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ಶ್ರೀ ನಾಗಲಿಂಗೇಶ್ವರ ಮಾರುತ್ತೇಶ್ವರ ಹಾಗೂ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ನಿಮಿತ್ಯ ದಿನಾಂಕ 7-4-2026 ರಂದು ಸಾಯಂಕಾಲ ಜಂಗೀ ನಿಕಾಲಿ ಕುಸ್ತಿಗಳು ವಿಜೃಂಭಣೆಯಿಂದ ಜರುಗಿದವು.
ಒಟ್ಟು 30 ಜೋಡಿ ಕುಸ್ತಿ ಪಟುಗಳು ರಾಜ್ಯದ ವಿವಿಧ ಕಡೆಯಿಂದ ಬಂದಿದ್ದರು. ಕುಸ್ತಿ ಆಡುವುದು ನೋಡಿದರೆ ಎಲ್ಲಾ ಪ್ರೇಕ್ಷಕರು ಎಷ್ಟಿದ್ದರೇನಂತೆ ಊರಿಗೊಂದು ಇಂತಹ ಮಕ್ಕಳನ್ನು ಬೇಳಿಸಬೇಕು ಎಂದು ಮಾತನಾಡಿ ಕೊಳ್ಳುತಿದ್ದರು.
ಹಾಗೇ ಜಿಲ್ಲೆಯ ವಿವಿಧ ತಾಲೂಕಿನಿಂದ ಮಾಜಿ ಕುಸ್ತಿ ಪೈಲವಾನರ ಸಂಗಮ ನೇರವೇರಿತು. ಬಳಬಟ್ಟಿ ಗ್ರಾಮದ ಮಾಜಿ ಕುಸ್ತಿ ಪಟುವಾದ ಶ್ರೀ ಕರಿಯಪ್ಪ ಆಸಂಗಿ ಹಾಗೂ ಯಮನಪ್ಪ ಮಾಳಗೊಂಡ ಇದರ ನೇತೃತ್ವದಲ್ಲಿ ಭರ್ಜರಿಯಾಗಿ ಆಟ ನಡೆದವು.
ಕೊನೆಯದಾಗಿ ಒನ್ ನಂಬರ ಕುಸ್ತಿ ಒಂದು ಗಂಟೆಗಳ ಕಾಲ ಪ್ರಕಾಶ ಇಂಗಳಗಿ (ಮೇಲಮಟ್ಟಿ ತಾಲಿಮ) ರಿಯಾಜ ಮುಳಕೋಟ (ಪುಣೆ ತಾಲಿಮ) ಇವರ ಮಧ್ಯೆ ನಡೆದು ರಿಯಾಜ ಮೆಳಕೋಟೆ ರವರು ಬಹುಮಾನವನ್ನು ತಮ್ಮ ಮುಡಿಗೇರಿಸಿದರು.
ಇವರಿಗೆ ₹25000 ಸಾವಿರ ನಗದು ಹಾಗೂ ಬೆಳ್ಳಿ ಗದೆ ನೀಡಿ ಗ್ರಾಮದವರು ಸನ್ಮಾನಿಸಿದರು. ಕೆಳಗಡೆ ಬಿದ್ದಂತಹ ವರಿಗೂ ಕೂಡಾ ₹20000 ನಗದು ಕೊಟ್ಟು ಪುರಸ್ಕರಸಲಾಯಿತು. ಒಟ್ಟು ₹2 ಲಕ್ಷದ ಬಹುಮಾನವನ್ನು ಕುಸ್ತಿ ಪಟುಗಳಿಗೆ ವಿತರಿಸಲಾಯಿತು.
ಗ್ರಾಮದ ಹಿರಿಯರಾದ ಶ್ರೀ ಭಿಮಣ್ಣ ದಡ್ಟಿ, ಹಣಮಂತ ಹುಗ್ಗಿ, ಹುಲ್ಲೂರಿನ ಎನ್ ಎನ್ ಡಿ ಅದ್ಯಕ್ಷರಾದ ಶ್ರೀ ಎಮ್ ಎಸ್ ಕೊಪ್ಪ, ಮುತ್ತಪ್ಪ ಇಟ್ಟಗಿ, ಹಣಮಂತ ಕಲಾದಗಿ ವಾಯ್ ಎಲ್ ಗಣಿ, ಆರ್ ಎಸ್ ಪಾಟೀಲ, ಎಸ್ ಬಿ ಕುಮಟಗಿ, ಎನ್ ಎಸ್ ಇಟ್ಟಗಿ, ಸುರೇಶ ಹುಗ್ಗಿ , ಹನಮಂತ ಚಿಮ್ಮಲಗಿ, ನಿಂಗಪ್ಪ ಗಣಿ, ಇತರರು ಇದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

