ರೋಹನ್ ಸೂಳಿಭಾವಿ ಕಾಲೇಜಿಗೆ ಪ್ರಥಮ ರಾಜಕ್ಕೆ 9 ನೇ. ರ‍್ಯಾಂಕ್ – ಆಕ್ಸಪರ್ಡ್ ಪಾಟೀಲ್ ಪಿಯು ಸೈನ್ಸ್ ಕಾಲೇಜ್.
ರೂಡಗಿ ಏ.10

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ರೋಹನ್, ಕುಮಾರ್ ಸುಳಿಭಾವಿ 600 ಅಂಕಗಳಿಗೆ 558 ಅಂಕ ಪಡೆದು ಪ್ರಥಮ ಸ್ಥಾನವನ್ನು ಮತ್ತು ರಾಜ್ಯಕ್ಕೆ 9 ನೇ. ಸ್ಥಾನ ಪಡೆದು ಕೊಂಡಿದ್ದಾನೆ.
ಗಣಿತ ಮತ್ತು ಜೀವಶಾಸ್ತ್ರ ಎರಡು ವಿಷಯದಲ್ಲಿ 100 ಕ್ಕೆ 100 ಅಂಕ, ಕನ್ನಡದಲ್ಲಿ 98, ಇಂಗ್ಲಿಷ್ ನಲ್ಲಿ 96, ಭೌತಶಾಸ್ತ್ರದಲ್ಲಿ 99, ರಾಸಾಯನ ಶಾಸ್ತ್ರದಲ್ಲಿ 95, ಅಂಕವನ್ನು ತೆಗೆದು ಕೊಂಡಿದ್ದಾನೆ.
ಎಂದು ಕುಮಾರ ಸೂಳಿಭಾವಿ ನಮ್ಮ ಪತ್ರಿಕೆಗೆ ಮಾಹಿತಿಯನ್ನು ನೀಡಿದರು,. ರೋಹನ್ ಕುಮಾರ್ ಸೂಳೀಭಾವಿ ಸಾಧನೆಗೆ ಕುಟುಂಬಸ್ಥರು, ಹಾಗೂ ಶಾಲೆಯ ಶಿಕ್ಷಕರು ಸಂಸ್ಥೆಯ ಆಡಳಿತಾಧಿಕಾರಿ ಸಂತೋಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿ ಸನ್ಮಾನಿಸಿ ಗೌರವಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

