ಭಕ್ತಿ ಪ್ರಧಾನ ಚಲನ ಚಿತ್ರ ‘ಸಂಕೀರ್ತನ’ – ಏ.17 ಕ್ಕೆ ತೆರೆಗೆ.
ಬೆಂಗಳೂರು ಏ.11

ಕೆ.ಪದ್ಮಕಲಾ ಗುಂಡೂರಾವ್ ಅರ್ಪಿಸುವ ಸಾಫಲ್ಯ ಮೂವೀಸ್ ಅವರ ‘ಸಂಕೀರ್ತನ’ ಎಂಬ ಭಕ್ತಿ ಪ್ರಧಾನ ಚಲನ ಚಿತ್ರ ಇದೆ ಏ.17 ರಂದು ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ಡಿ.ಎಸ್ ಮಂಜುನಾಥ್ (ಕಲಾ ಗಂಗೋತ್ರಿ ಮಂಜು) ಹೇಳಿದರು.
ದಾಸ ಶ್ರೇಷ್ಠರ ಮಹಿಮೆಯ ಕೀರ್ತನೆಗಳ ಸಂಗಮವೇ ‘ಸಂಕೀರ್ತನ’ ಚಿತ್ರ. ಕರ್ನಾಟಕದ ಸುವರ್ಣ ಯುಗ ಎನ್ನಲಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಅವತರಿಸಿದ ಯತಿ ಶ್ರೇಷ್ಠರ, ಕವಿ ಶ್ರೇಷ್ಠರ ಪರಸ್ಪರ ಸಮಾಗಮ, ಮಹಿಮಾ ಪ್ರದರ್ಶನ, ಕೀರ್ತನ ಗಾಯನದ ಅದ್ಭುತ ಚರಿತ್ರೆಯ ಕೆಲವು ಭಾಗಗಳನ್ನು ಬೇಲೂರು ಕೇಶವ ದಾಸರ ‘ಭಕ್ತ ವಿಜಯ’ ಮತ್ತಿತರ ಗ್ರಂಥ ಹಾಗೂ ಐತಿಹ್ಯಗಳನ್ನು ಅನುಸರಿಸಿ ಈ ಚಿತ್ರವನ್ನು ಸಿದ್ಧ ಪಡಿಸಲಾಗಿದೆ.
ಬೆಳ್ಳಿ ತೆರೆಯ ಇತಿಹಾಸದಲ್ಲಿಯೇ ಇದೊಂದು ಅಭೂತ ಪೂರ್ವ ಸಾಧನೆ ಎನ್ನಬಹುದು. ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ವೈಕುಂಠ ದಾಸರು, ಪುರಂದರದಾಸರು, ಕನಕದಾಸರು ಮತ್ತು ಕುಮಾರವ್ಯಾಸ, ತಿಮ್ಮಣ್ಣ ಕವಿಯ ಈ ಯತಿ ಶ್ರೇಷ್ಠರ ಮಹಿಮೆ ಸಂಕೀರ್ತನಗಳ ಮಹಾ ಸಂಗಮವೇ ‘ಸಂಕೀರ್ತನ’ ಚಲನ ಚಿತ್ರ.
ಈ ಚಿತ್ರವನ್ನು ಎಲ್ಲ ಸಮಾಜ ಬಂಧುಗಳು ನೋಡಿ ಭಕ್ತಿ ಸಾಗರವನ್ನು ಉಳಿಸಿ ಬೆಳೆಸ ಬೇಕೆಂದು ನಿರ್ಮಾಪಕರಾದ ಕೆ.ಪದ್ಮಕಲಾ ಗುಂಡೂರಾವ್ ಹೇಳಿದರು.
ತಾರಾಗಣದಲ್ಲಿ ಶ್ರೀಪಾದರಾಜರ ಪಾತ್ರದಲ್ಲಿ ಚಿತ್ರ ರಂಗದ ಹಿರಿಯ ಕಲಾವಿದರಾದ ರಮೇಶ್ ಭಟ್, ವ್ಯಾಸರಾಯರ ಪಾತ್ರದಲ್ಲಿ ಡಾ, ಶ್ರೀಧರ್, ವಾದಿರಾಜರ ಪಾತ್ರದಲ್ಲಿ ನಟರಾಜ, ಪುರಂದರದಾಸರ ಪಾತ್ರದಲ್ಲಿ ವಿಜಯಾನಂದ ನಾಯಕ್, ವೈಕುಂಠ ದಾಸರ ಪಾತ್ರದಲ್ಲಿ ರಾಮಕೃಷ್ಣ , ಸೌಮ್ಯ ನಾಯಕಿ ಪಾತ್ರದಲ್ಲಿ ಶ್ರೀಮತಿ ಕೆ.ಪದ್ಮಕಲಾ ಗುಂಡೂರಾವ್, ಕನಕದಾಸರ ಪಾತ್ರದಲ್ಲಿ ನಂಜುಂಡ ಅಜಯರಾಜ, ರವಿಕುಮಾರ ವಿಷ್ಣು ತೀರ್ಥ ಜೋಷಿ, ಅಶೋಕ ಬಿ.ಎ ಶ್ರೀಹರಿ ಇತರ ಹಲವು ಕಲಾವಿದರು ನಟಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಎಂ.ಎಸ್ ಸಿದ್ಧರಾಜು, ಜೆ.ಎಂ ಪ್ರಹ್ಲಾದ ಕಥೆ- ಚಿತ್ರಕಥೆ ಬರೆದಿದ್ದು, ಪ್ರವೀಣ್ ಡಿ ರಾವ್ ಸಂಗೀತ ನಿರ್ದೇಶನ, ಸುರೇಶ್ ಅರಸ್ ಸಂಕಲನ, ವಿಎಫ್ ಎಕ್ಸ್ ಆರ್.ಅನಿಲಕುಮಾರ್, ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ್, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ನಿರ್ಮಾಣ ಮತ್ತು ನಿರ್ವಹಣೆ ವಿಜಯ್ ಭಾಸ್ಕರ್ ಹರಪನಹಳ್ಳಿ, ಚಿತ್ರದ ನಿರ್ಮಾಪಕರು ಕೆ.ಪದ್ಮಕಲಾ ಗುಂಡೂರಾವ್, ಜೆ.ಎಂ ಪ್ರಹ್ಲಾದ, ಡಿ.ಎಸ್ ಮಂಜುನಾಥ, ಹೆಚ್.ವಿಜಯ್ ಭಾಸ್ಕರ್ ಆಗಿದ್ದಾರೆ.
ಇದೀಗ ಚಿತ್ರತಂಡ ರಾಜ್ಯಾದ್ಯಂತ ತಂಡದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ್ದು ಚಿತ್ರವನ್ನು ಚಿತ್ರ ಮಂದಿರದಲ್ಲಿ ನೋಡಿ ಪ್ರೋತ್ಸಾಹಿಸ ಬೇಕೆಂದು ನಿರ್ದೇಶಕ ಕಲಾ ಗಂಗೋತ್ರಿ ಮಂಜು ತಿಳಿಸಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

