ತ್ಯಾಗ ಮೂರ್ತಿ ಶ್ರೀಮಾತೆ ಶಾರದಾದೇವಿ – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಏ.11

ಶ್ರೀಮಾತೆ ಶಾರದಾದೇವಿಯವರು ಕಾಮ-ಕಾಂಚನಾಸಕ್ತಿ ಮತ್ತು ಅಹಂಕಾರವನ್ನು ಪರಿಪೂರ್ಣವಾಗಿ ತ್ಯಾಗ ಮಾಡಿದ ತ್ಯಾಗ ಮೂರ್ತಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಮೋಕ್ಷ” ಮತ್ತು “ಶ್ರೀಶಾರದಾದೇವಿ ಚಿಂತನ” ಎಂಬ ವಿಷಯವಾಗಿ ಪ್ರವಚನ ನೀಡುತ್ತ ಮಾತನಾಡುತ್ತಿದ್ದರು‌.

ಪುರುಷಾರ್ಥಗಳಲ್ಲಿ ನಾಲ್ಕನೇ ಪುರುಷಾರ್ಥವಾದ ಮೋಕ್ಷ ಸಾಧನೆಯೇ ಮನುಷ್ಯ ಜೀವನದ ಮುಖ್ಯ ಉದ್ದೇಶ ಎಂದು ಎಲ್ಲಾ ಶಾಸ್ತ್ರಗ್ರಂಥಗಳು ಪ್ರತಿಪಾದಿಸುತ್ತೇವೆ. ಮೋಕ್ಷ ಎಂದರೆ ಬಿಡುಗಡೆ, ಮುಕ್ತಿಯಾಗಿದ್ದು ಇಂದ್ರೀಯಗಳು ಮತ್ತು ಮನಸ್ಸಿನ ಚಟುವಟಿಕೆಗಳನ್ನು ಸದಾ ಆತ್ಮ ಚಿಂತನೆಯ ಮೂಲಕ ನಿಗ್ರಹಿಸಿ ಭವ ಬಂಧನ ದಿಂದ ಬಿಡುಗಡೆ ಹೊಂದಬಹುದು ಎಂದರು.

ಸತ್ಸಂಗದ ಆರಂಭದಲ್ಲಿ ಭಜನೆಯನ್ನು ಶ್ರೀಶಾರದಾಶ್ರಮದ ಸದ್ಭಕ್ತರು ನಡೆಸಿಕೊಟ್ಟರೆ ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ದ್ರಾಕ್ಷಾಯಣಿ, ನಂದಪ್ಪ, ವನಜಾಕ್ಷಿ ಮೋಹನ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಗಂಗಾಧರಶೆಟ್ಟಿ, ಕವಿತಾ, ಮಂಜುಳಾ, ಸುಧಾಮಣಿ, ಗೀತಾ ವೆಂಕಟೇಶ್ ರೆಡ್ಡಿ, ಅನ್ವಿಕಾ, ಶ್ರೀಜನಿ, ಯತೀಶ್ ಎಂ ಸಿದ್ದಾಪುರ, ಚೆನ್ನಕೇಶವ, ದೇವೇಂದ್ರಪ್ಪ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button