ಗವಿಮಠ ಪ್ರತಿಷ್ಠಾನದ ವೃತ್ತಿ ಪ್ರವೃತ್ತಿ ಪ್ರಶಸ್ತಿಗೆ ಹಿರೇಮಾಗಿಯ ಶಿಕ್ಷಕ – ಶ್ರೀ ಮುತ್ತು ವಡ್ಡರ ಆಯ್ಕೆ.

ಹಿರೇಮಾಗಿ ಏ.11

ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ, ಗವಿಮಠ ಪ್ರತಿಷ್ಠಾನ ಮಧುರಖಂಡಿ, ಕನ್ನಡ ಸಾಹಿತ್ಯ ಪರಿಷತ್ತು ಜಮಖಂಡಿ ಹಾಗೂ ಹುನಗುಂದ- ಇಲಕಲ್ ಇವರ ಸಹಯೋಗದಲ್ಲಿ ದಿನಾಂಕ 12-04-2026 ರವಿವಾರ ಜಮಖಂಡಿಯಲ್ಲಿ ನಡೆಯಲಿರುವ ಶಿಕ್ಷಕ ಶಿಕ್ಷಕಿಯರಿಗೆ ಗೌರವ ಪ್ರಶಸ್ತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಗಣಿತ ಶಿಕ್ಷಕರಾಗಿರುವ ಶ್ರೀ ಮುತ್ತು ವಡ್ಡರ ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ ವೃತ್ತಿ ಪ್ರವೃತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀ ಮುತ್ತು ವಡ್ಡರ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದು ಹಾಗೂ ಅತಿ ಸರಳ ಗಣಿತ, ಎಲೆ ಮರೆ ಕಾಯಿಗಳು, ಸನ್ಮಾರ್ಗದ ದುಂಬಿ ಮತ್ತು ಬಿಡುಗಡೆಗೆ ಸಜ್ಜಾಗಿರುವ ಬದಲಾಗು ನೀ ಬೆಳಕಾಗು ನೀ ಎಂಬ ಸ್ಫೂರ್ತಿದಾಯಕ ಕೃತಿಗಳನ್ನು ರಚಿಸಿದ್ದಾರೆ.

ಜೊತೆ ಜೊತೆಗೆ ನಾಡಿನ ಹಲವಾರು ಪತ್ರಿಕೆಗಳಿಗೆ ಕಥೆ, ನ್ಯಾನೋ ಕಥೆಗಳು, ಲೇಖನ ಹಾಗೂ ಕವನಗಳನ್ನು ಬರೆದು ಪ್ರಕಟಿಸಿದ್ದಾರೆ,

ಇವರು ಪ್ರತಿನಿತ್ಯ ವ್ಯಾಟ್ಸಪ್ ಬಳಗದಲ್ಲಿ ಸುಮಾರು 6,000 ಜನರಿರುವ ಜ್ಞಾನ ಜ್ಯೋತಿ ದಿನಂಪ್ರತಿ ಎಂಬ ಬಳಗದಲ್ಲಿ ಪ್ರತಿನಿತ್ಯ ರಸ ಪ್ರಶ್ನೆ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ 2026 ರ ಗವಿಮಠ ಪ್ರತಿಷ್ಠಾನದ ವೃತ್ತಿ ಪ್ರವೃತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಶಿಕ್ಷಕ ಮುತ್ತು ವಡ್ಡರ ಅವರಿಗೆ ಹಾಗೂ ಶಿಕ್ಷಕ ಬಳಗಕ್ಕೆ ಮತ್ತು ಊರಿನ ಗುರು ಹಿರಿಯರಿಗೆ ಸಂತಸವಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button