ಸಾಣಿಕೆರೆ ವೇದ ಪಿ.ಯು ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ – ಕೆ.ಕಾರ್ತಿಕ್ ಶೇ. 90.50% ರಷ್ಟು ತಂದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾನೆ.
ತಾಯಕನಹಳ್ಳಿ ಏ.11

ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಶಿವ ಗಂಗಮ್ಮ ಪೋಸ್ಟ್ ಕೆಂಚ ಲಿಂಗಪ್ಪ ಇವರ ಪುತ್ರ 600 ಕ್ಕೆ 543 ಅಂಕಗಳನ್ನು ಪಡೆದು ಶೇ. 90.50% ರಷ್ಟು ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಚಳ್ಳಕೆರೆ ತಾಲೂಕಿನ ಸಾಣಿಕೆರೆ ವೇದ ಪಿಯು ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಕೆ.ಕಾರ್ತಿಕ್ ಶ್ರದ್ಧೆಯಿಂದ ಓದಿ ವಿಜ್ಞಾನ ದಂತಹ ಕಠಿಣ ವಿಭಾಗದಲ್ಲಿ ಯಶಸ್ವಿ ಗೊಳಿಸಿದ್ದಾರೆ.
ಕೆ.ಕಾರ್ತಿಕ್ ರವರ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು. ಸಹ ಶಿಕ್ಷಕರು, ತಾಯಕನಹಳ್ಳಿ ಗ್ರಾಮಸ್ಥರ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಅಭಿನಂದನೆ ಸಲ್ಲಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

