ಶ್ರೀಶಾರದಾಶ್ರಮದಿಂದ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ – ತಿಂಗಳ ಜೀವ ಶಿವ ಸೇವಾ ಕಾರ್ಯಕ್ರಮ.

ಚಳ್ಳಕೆರೆ ಏ.12

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಶ್ರೀಶಾರದಾಶ್ರಮದ ದೇವಸ್ಥಾನವನ್ನು ಕಟ್ಟಿದ ಕಾರ್ಮಿಕರು ಮತ್ತು ಇತರೆ ಕಾರ್ಮಿಕರು ಸೇರಿದಂತೆ ಹದಿನೈದು ಕಾರ್ಮಿಕ ಕುಟುಂಬಗಳಿಗೆ ಶ್ರೀಶಾರದಾಶ್ರಮದಿಂದ ಆಹಾರ ಧಾನ್ಯಗಳ ಕಿಟ್ ಗಳನ್ನು ಆಶ್ರಮದ ಸ್ವಯಂಸೇವಕರು ಎಲ್ಲಾ ಕಾರ್ಮಿಕರಿಗೆ ಪೂಜೆ ಮತ್ತು ಆರತಿ ನೆರವೇರಿಸಿ ವಿತರಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕಿಟ್ ಗಳನ್ನು ವಿತರಿಸಿ ಆಶೀರ್ವಚನ ನೀಡಿದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಆಶ್ರಮದಿಂದ ಪ್ರತಿ ತಿಂಗಳು ಸ್ವಾಮಿ ವಿವೇಕಾನಂದರ ಜೀವ ಶಿವ ಸೇವಾ ಕಾರ್ಯಕ್ರಮದ ಅಂಗವಾಗಿ ಬಡ-ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ.

ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಈ ಬಾರಿ ಶ್ರೀಶಾರದಾಶ್ರಮದ ದೇವಸ್ಥಾನವನ್ನು ಕಟ್ಟಿದ ಕಾರ್ಮಿಕರು ಮತ್ತು ಇತರೆ ಕಾರ್ಮಿಕರಿಗೆ ರಾಗಿ, ಗೋಧಿ, ಬೇಳೆ, ಬೆಲ್ಲ, ಎಣ್ಣೆ, ಸೋಪು ಸೇರಿದಂತೆ ದಿನ ಬಳಕೆಯ ವಸ್ತುಗಳು ಒಳಗೊಂಡ ಕಿಟ್ ಗಳನ್ನು ಆಶ್ರಮದ ಭಕ್ತರ ಉದಾರ ಆರ್ಥಿಕ ನೆರವಿನಿಂದ ನೀಡಲಾಗುತ್ತಿದೆ.

ಕಾರ್ಮಿಕರು ಈ ವಸ್ತುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಪ್ರಯುಕ್ತ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ, ಧ್ಯಾನಾಭ್ಯಾಸ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಸಂನ್ಯಾಸಿ ಗೀತೆಯ ಗಾಯನ ನಡೆಯಿತು.

ದಿನಸಿ ಕಿಟ್ ವಿತರಣಾ ಸಮಾರಂಭದಲ್ಲಿ ಸದ್ಭಕ್ತರಾದ ಎಚ್ ಲಕ್ಷ್ಮೀದೇವಮ್ಮ , ನೇತಾಜಿ ಪ್ರಸನ್ನ, ರಮೇಶ್, ಎಂ ಗೀತಾ ನಾಗರಾಜ್, ಡಾ, ಸಿ‌.ಟಿ ಬಸವರಾಜಪ್ಪ, ಡಾ, ಲಾವಣ್ಯ,‌ ಪಿ.ಎಸ್ ಮಾಣಿಕ್ಯ, ವನಜಾಕ್ಷಿ, ಬೊಮ್ಮಕ್ಕ, ಪೂಜಾ, ನಾಗರತ್ನಮ್ಮ, ರಾಘವೇಂದ್ರ, ಮಂಜುಳಾ, ದ್ರಾಕ್ಷಾಯಣಿ, ಡಿ‌.ಕಾವೇರಿ, ಸಿ.ಎಸ್.ಭಾರತಿ, ಕವಿತಾ, ಯತೀಶ್ ಎಂ ಸಿದ್ದಾಪುರ, ಸಂತೋಷ್, ಡಾ, ಭೂಮಿಕ, ಚೇತನ್, ಮಾನ್ಯ, ಚೆನ್ನಕೇಶವ, ಲೋಹಿತ್, ಪ್ರಕಾಶ್, ಜಯಾದಿತ್ಯ, ದರ್ಶನ್ ಕಾಂಟ್ರಾಕ್ಟರ್ ವೀರಭದ್ರಪ್ಪ ಸೇರಿದಂತೆ ಕಾರ್ಮಿಕರು, ಸದ್ಭಕ್ತರು ಹಾಗೂ ಬಾಪೂಜಿ ಆರ್ಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button