ಪಿ.ಯು.ಸಿಯಲ್ಲಿ ಸಾಧನೆಗೈದ – ವಿದ್ಯಾಪೋಷಕದ ಪ್ರತಿಭೆಗಳು.
ಧಾರವಾಡ ಏ.12

ವಿದ್ಯಾಪೋಷಕ ಸಂಸ್ಥೆ ೨೦೨೫-೨೬ ನೇ. ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಅಭ್ಯಾಸ ಮಾಡುತ್ತಿರುವ ಧಾರವಾಡ ಮತ್ತು ಗದಗ ಜಿಲ್ಲೆಯ ಕೃಷಿ ಕಾರ್ಮಿಕರು / ಮನೆಗೆಲಸ / ಕ್ಷೌರಿಕ / ಕಟ್ಟಡ ಕೆಲಸ ಮಾಡುವವರು / ಬಡಿಗತನ /ಕಮ್ಮಾರಿಕೆ / ಟೈಲರಿಂಗ್ ಮುಂತಾದ ಕೆಲಸಗಳಲ್ಲಿ ತೊಡಗಿರುವ ಕುಟುಂಬದಿಂದ ಬಂದ ಅನೇಕ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಧನಸಹಾಯ, ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಲಾಗಿತ್ತು.
ಈ ವಿದ್ಯಾರ್ಥಿಗಳ ಪೈಕಿ ಪ್ರತಿಭಾನ್ವಿತ ೧೯ವಿದ್ಯಾರ್ಥಿಗಳು ೨೦೨೫-೨೬ ನೇ ಶೈಕ್ಷಣಿಕ ಸಾಲಿನಲ್ಲಿ ದ್ವೀತಿಯ ಪಿ.ಯು.ಸಿಯಲ್ಲಿ ಗಣನೀಯ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆಗೈದಿದ್ದಾರೆ.
ಅನು ಜಾಧವ್–೯೬.೫% (ವಾಣಿಜ್ಯ), ಶಾರದ ನೆಣಕ್ಕಿ–೯೫.೮೩% (ವಾಣಿಜ್ಯ), ಭವಾನಿ ರಡ್ಡರ್–೯೫.೧೬% (ವಿಜ್ಞಾನ), ದೀಕ್ಷಿತಾ ಅಂಚಟಗೆರಿ–೯೫.೧೬% (ವಾಣಿಜ್ಯ), ಸಾಕ್ಷಿ ಬಡಿಗನ್ನವರ–೯೫.೧೬% (ವಾಣಿಜ್ಯ), ಸುಮಾ ಗರಗ–೯೫.೩% (ವಿಜ್ಞಾನ), ಚಂದನಾ ಪಾಟೀಲ್–೯೪.೬% (ವಿಜ್ಞಾನ),ಮೇಘಾ ಚಿಕ್ಕನಗೌಡ್ರ–೯೪.೩% (ವಿಜ್ಞಾನ), ಆಕಾಶ ಜುಲ್ಪಿ–೯೩.೮% (ವಾಣಿಜ್ಯ), ಚನ್ನಮ್ಮ ಸಂದಿಮನಿ–೯೩.೩%, (ವಾಣಿಜ್ಯ),ಪ್ರಣೀತ್ ಕಲಘಟಗಿ–೯೨.೧೬% (ವಿಜ್ಞಾನ), ಸೌಜನ್ಯ ತುರುಮರಿ–೯೦.೬% (ವಿಜ್ಞಾನ), ರುಚಿತಾ ಶಿಲಾರೆ–೯೦%(ವಿಜ್ಞಾನ), ಅದಿತಿ ದೇಶಪಾಂಡೆ–೯೧.೫% (ವಿಜ್ಞಾನ), ಪಲ್ಲವಿ ಕುಂಬಾರ್–೯೦.೧೬% (ವಿಜ್ಞಾನ), ಭಾವನಾ ಬಡಗರು–೯೨.೧೬% (ವಿಜ್ಞಾನ), ಅಮೋಘಾ ಹಿರೇಮಠ–೯೦.೬% (ವಿಜ್ಞಾನ), ಸೌಮ್ಯ ಪಾಟೀಲ್–೯೪.೫% (ವಾಣಿಜ್ಯ), ಬಸವಣ್ಣೆವ್ವ ಉಪ್ಪಾರ್–೯೨.೬% (ವಾಣಿಜ್ಯ) ದಲ್ಲಿ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ಸಂಸ್ಥೆ ಶುಭ ಹಾರೈಸಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

