ಮುಸ್ಲಿಂ ಕುಟುಂಬದ ಹಜೀರಾ ಮಾದಿಹಳ್ಳಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣ ವೇಷ ಧರಿಸಿ ಹಿಂದೂ ಧರ್ಮದ ಹಬ್ಬದಲ್ಲಿ – ಭಾವೈಕ್ಯತೆಯಲ್ಲಿ ಏಕತೆ ಮೆರೆದ ಪುಟಾಣಿ ಬಾಲಕಿ.
ಕೂಡ್ಲಿಗಿ ಸೆ.04


ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಮುಜಾಹಿದ್ ನಗರದಲ್ಲಿ ಬರುವ ಮಾದಳ್ಳಿ ಹಜೀರಾ ಮಾದಿಹಳ್ಳಿ ಎಂಬ 4 ವರ್ಷದ ಪುಟಾಣಿ ಬಾಲಕಿಯನ್ನು ತನ್ನ ತಂದೆ ಅಬ್ದುಲ್ ಮಾದಿಹಳ್ಳಿ ಹಾಗೂ ತಾಯಿ ಶೀರಿನ್ ಭಾನು ರವರು ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುಸ್ಲಿಂ ಕುಟುಂಬವೊಂದು ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಶ್ರದ್ದೆ ಮತ್ತು ಸಂಭ್ರಮದಿಂದ ಆಚರಿಸುವ ಮೂಲಕ ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಮಾದರಿ ಯಾಗಿದೆ.

ಈ ಪುಟಾಣಿಯ ತನ್ನ ಕುಟುಂಬದ ಅಜ್ಜ ಗುಲ್ ಮಾದಹಳ್ಳಿ ಹಾಗೂ ಅಜ್ಜಿ ಕುಟುಂಬದ ಎಲ್ಲಾ ಸದಸ್ಯರು ಬಾಲಕೃಷ್ಣ ವೇಷವನ್ನು ಧರಿಸಿದ ಪುಟಾಣಿ ಕೃಷ್ಣ ಜನ್ಮಾಷ್ಟಮಿಯ ಸಾಂಸ್ಕೃತಿಕ ವೇಷ ಭೂಷಣ ತೋಡಿಸುವ ಮೂಲಕ ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಗೌರವಿಸುವ ಸಂದೇಶವನ್ನು ಈ ಆಚರಣೆ ನೀಡುತ್ತದೆ.

ಈ ರೀತಿಯ ಆಚರಣೆಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಗೌರವ ಮತ್ತು ಸಹೋದರತ್ವವನ್ನು ಎಲ್ಲರ ಮದ್ಯೆ ಮಾನವೀಯತೆ ಗುಣಗಳು ಬೆಳೆಸಲು ನೇರವಾಗುತ್ತವೆ.

ಮುಸ್ಲಿಂ ಸಮುದಾಯದವರು ಸಹ ಭಾರತದ ಹಿಂದೂ ಧರ್ಮದ ಕೆಲವು ಹಬ್ಬ ಆಚರಣೆಗಳು ಮಾಡುತ್ತಿರುವುದು ಕೆಲವು ಸುದ್ದಿಗಳು ಸಹ ಪತ್ರಿಕೆಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಹ ನೋಡುತ್ತಿದ್ದೇವೆ.

ಈ ಸಂದರ್ಭದಲ್ಲಿ ಅಬ್ದುಲ್ ಮಾದಿಹಳ್ಳಿ ರವರ ತಮ್ಮ ಮಗಳ ವೇಷ ಭೂಷಣವನ್ನು ಧರಿಸಿದ ಪುಟಾಣಿಯ ಆಚರಣೆಯ ಸಂಭ್ರಮವನ್ನು ಕಂಡು ಸಂತೋಷ ಪಟ್ಟರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ ಸಾಲುಮನೆ ಕೂಡ್ಲಿಗಿ
