ಭಗವಂತನ ಪ್ರಸಾದ ತಿನ್ನುವುದರಿಂದ ಮನಸ್ಸು ಪರಿ ಶುದ್ಧವಾಗುತ್ತದೆ - ಯತೀಶ್ ಎಂ ಸಿದ್ದಾಪುರ.
ಚಳ್ಳಕೆರೆ ಸೆ.04


ಭಗವಂತ ಸ್ವೀಕರಿಸಿದ ಪ್ರಸಾದವನ್ನು ತಿನ್ನುವುದರಿಂದ ನಮ್ಮ ಮನಸ್ಸು ಪರಿ ಶುದ್ಧವಾಗುತ್ತದೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ಗಾಂಧಿ ನಗರದ ಸದ್ಭಕ್ತರಾದ ಶ್ರೀಮತಿ ಗೀತಾ ಪ್ರಕಾಶ್ ಅವರ ಮಂಜುನಾಥ ನಿವಾಸದಲ್ಲಿ “ಶ್ರಾವಣ ಮಾಸದ ಮಂಗಳಗೌರಿ ಪೂಜೆ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಭಜನೆ ನಡೆಸಿಕೊಟ್ಟ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಶ್ರೀಮಾತೆ-ಶ್ರೀರಾಮಕೃಷ್ಣ ರೂಪವೆರಡು ಶಕ್ತಿಯೊಂದು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಯಾವುದೇ ಆಹಾರವನ್ನಾಗಲಿ ಭಗವಂತನಿಗೆ ಅರ್ಪಿಸಿ ತಿನ್ನಬೇಕು. ಪ್ರಸಾದವಲ್ಲದ ಆಹಾರವನ್ನು ಸೇವಿಸುವುದರಿಂದ ಮನಸ್ಸು ಮಲಿನವಾಗುತ್ತದೆ ಎಂದು ಅವರು ಹೇಳಿದರು.
ವಿಶೇಷ ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಲಲಿತಾ ಸಹಸ್ರನಾಮ ಪಾರಾಯಣ, ಶ್ರೀನಿವಾಸ ಅವರ ಮೃದಂಗಕ್ಕೆ ಅಭಿಜ್ವಲ್, ಸುನೀತಾ ಗೋಪಾಲಕೃಷ್ಣ,ಎಂ ಗೀತಾ ನಾಗರಾಜ್, ವನಜಾಕ್ಷಿ ಮೋಹನ್, ಮಂಜುಳಾ ಬಸವರಾಜ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಗಂಗಾಂಬಿಕೆ, ಸುಲೋಚನಾ , ತ್ರಿವೇಣಿ ಅವರಿಂದ ವಿಶೇಷ ಭಜನೆ, ದಿವ್ಯತ್ರಯರು ಮತ್ತು ಮಂಗಳಗೌರಿಗೆ ಮಂಗಳಾರತಿ ಹಾಗೂ ಅನ್ನಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಸಭೆಯಲ್ಲಿ ಗೀತಾ ಪ್ರಕಾಶ್, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಯಶೋಧಾ, ಶೋಭಾ, ಮಲ್ಲಿಕಾ, ದಾಕ್ಷಾಯಣಿ, ಸುನೀತಾ, ನೇತ್ರಾ, ಸಿಂಧು, ವೇದ, ವಿಜಯಶ್ರೀ, ಶಾಂತಾ, ಸುಜಾತಾ, ಗೀತಾ ಪ್ರಸನ್ನ, ಅಪರ್ಣ ದೇವೇಂದ್ರಪ್ಪ, ಪ್ರೇಮಾ, ಕವಿತಾ, ಅಂಬುಜಾ, ತೊಯಜಾಕ್ಷಿ, ಅನುಸೂಯ, ಸವಿತಾ, ವನಜಾಕ್ಷಿ ಪಂಚಾಕ್ಷರಿ, ವಿಜಯಾ, ಶೈಲಜಾ, ಅನ್ನಪೂರ್ಣ, ಕೃಷ್ಣವೇಣಿ, ಸಂಗೀತ, ಜ್ಯೋತಿ ನಾಗರಾಜ್, ಗೀತಾ, ಅಂಬಿಕಾ, ಲತಾ, ಸರಸ್ವತಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

