ಪುರಸಭೆ ಹಾಗೂ ತಾಲೂಕ ದಂಡಾಧಿಕಾರಿಗಳ ಕಾರ್ಯಕ್ರಮದಲ್ಲಿ – ಕಲ್ಯಾಣ ಕರ್ನಾಟಕ ವಿಮೋಚನಾ ಹಾಗೂ ವಿಶ್ವಕರ್ಮ ಜಯಂತಿ ಉದ್ಘಾಟಿಸಿದ ಶಾಸಕ ಸಾಹುಕಾರ.

ಮಾನ್ವಿ ಸೆ.18

ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಪುರಸಭೆ ಕಾರ್ಯಾಲಯ ಹಾಗೂ ತಾಲೂಕ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಈ ದಿನ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿದ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರು.

ಈ ಸಂದರ್ಭದಲ್ಲಿ ಉದ್ಘಾಟನೆ ಭಾಷಣ ಮಾಡಿದ ಮಾನ್ಯ ಶಾಸಕರು ಅವರು 1947 ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೆ 1948 ರಲ್ಲಿ 13 ತಿಂಗಳ ನಂತರ ನಮ್ಮ ಭಾಗಕ್ಕೆ ಸ್ವತಂತ್ರ ಎರಡನೇ ಸಂಗ್ರಾಮವಾಗಿ ಹೊರ ಹೊಮ್ಮಿತು.

ಬ್ರಿಟಿಷರು ದೇಶವನ್ನು ಬಿಟ್ಟು ಹೋಗುವಾಗ ಮಾಡಿರ್ತಕ್ಕಂತ ಕೆಲ ತಪ್ಪಿನಿಂದ ನಮ್ಮ ರಾಷ್ಟ್ರದ ಒಕ್ಕೂಟಕೆ ಮೂರು ರಾಜ್ಯಗಳು ಸೇರದೆ ಇದ್ದಾಗ ರಾಜರು ತಮ್ಮ ಆಳ್ವಿಕೆಯನ್ನು ಸ್ವತಂತ್ರವಾಗಿ ನಡೆಸ್ತಾ ಇರುವ ಸಂದರ್ಭದಲ್ಲಿ ಅಂದಿನ ಕೇಂದ್ರದ ಗೃಹ ಮಂತ್ರಿ ಆಗಿರತಕ್ಕಂತ ಸರ್ದಾರ್ ವಲ್ಲಭಾಯಿ ಪಟೇಲರು ಹಾಗೂ ದೇಶದ ಅಂದಿನ ಕಾನೂನು ಮಂತ್ರಿಯಾಗಿದ್ದ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರ ಚಾಣಾಕ್ಷತನ ನೀತಿಯಿಂದ ಆಪರೇಷನ್ ಪೋಲೋ ಎಂಬ ಕಾರ್ಯಾಚರಣೆಗಳಿಂದ ನಿಜಾಮನ ಆಳ್ವಿಕೆಯನ್ನು ಕೊನೆ ಗೊಳಿಸಲಾಯಿತು.

ಈ ದಿನ ನಾವು ವಿಮೋಚನ ದಿನಾಚರಣೆಯನ್ನು ಸಂತಸದಿಂದ ಆಚರಿಸುತ್ತಿರುವುದಕ್ಕೆ ಮೂಲ ಕಾರಣ ಇದಾಗಿದೆ ಹಿರಿಯರು ತಂದು ಕೊಟ್ಟಂತ ಈ ಒಂದು ಸ್ವಾತಂತ್ರವನ್ನು ನಾವು ಎಲ್ಲರೂ ಸೇರಿಕೊಂಡು ದೇಶದ ಪ್ರಗತಿಗೆ ಕೈಜೋಡಿಸೋಣ ಎಂದು ಕರೆ ನೀಡಿದರು.

ವಿಶ್ವಕರ್ಮ ಬಂಧುಗಳು ಅವರ ಕುಶಲ ಕಾರ್ಯದಿಂದ ಅನ್ನದಾತರ ಹೆಚ್ಚು ಸಾಮಗ್ರಿಗಳನ್ನು ಮಾಡಿ ಮತ್ತು ದೇವಿಗಳ ಪ್ರತಿಮೆಗಳನ್ನು ತಮ್ಮ ಕಲಾತ್ಮಕ ಕಲೆಯಿಂದ ದೈನಂದಿನ ಕಾರ್ಯ ಚಟುವಟಿಕೆಗಳಿಂದ ಸಮಾಜವು ಅದ್ಭುತವಾದ ಕಲೆಯಿಂದ ಹೆಸರುವಾಸಿ ಆಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಾಫುರ್ ಸಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿಕೆ ಅಮರೇಶಪ್ಪ ವಕೀಲರು, ರೌಡ್ರು ಮಹಾತೇಶ್ ಸ್ವಾಮಿ,ರಾಜ ಸುಭಾಷ್ ಚಂದ್ರ ನಾಯಕ್,ಜಿ ನಾಗರಾಜ್, ಸೈಯದ್ ಅಕ್ಬರ್ ಪಾಷಾ ಗುತ್ತೇದಾರರು, ಜಮೀಲ ಅಹಮದ್,ಡಿ ವಿರೇಶ್, ಸತ್ತಾರ್ ಬಂಗ್ಲೆವಲೇ, ಹಂಪ್ಪಾಯ್ ನಾಯಕ್, ಕಾಮೇಶ್,ಅಂಬಣ್ಣ ಮದ್ಲಾಪುರ್, ಮೌನೇಶ್, ಶರಣು ಮುಖ ಆಚಾರ್ಯ, ವಿಜಯ್ ರಾವ್ ಕೋಪನೇಶ್, ಶ್ರೀಶೈಲ ಮಾಸ್ಟರ್, ತಾಲೂಕ ದಂಡಾಧಿಕಾರಿಗಳು, ಪಿ.ಐ ಸುಮಶೇಖರ್ ಕೆಂಚರೆಡಿ ಗ್ರೇಡ್ 2 ತಹಶೀಲ್ದಾರ್ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇನ್ನಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button