ಹಿರಿಯರ ಮಾರ್ಗದರ್ಶನ ಮುಂದಿನ ಸಾಧನೆಗೆ ಸುಲಭ ದಾರಿ – ಹುಸೇನಪ್ಪ ಕುರ್ಡಿ.

ಮಾನ್ವಿ ಅ.01

ಸಮಾಜದಲ್ಲಿ ಕಡೆಗಣಿಸಲ್ಪಡುವ ಹಿರಿಯ ಜೀವಿಗಳು ಬೀಳುವ ಮರ ಎಂದು ವ್ಯಂಗ್ಯ ಮಾಡುವರು “ಅಯ್ಯೋ ಮರೆತಿರೇ ಈ ಜೀವ ನಿಮಗಾಗಿ ಮಾಡಿದ ಶ್ರಮ” ತಾಯಿ ಹತ್ತು ಮಕ್ಕಳನ್ನು ಕಿಂಚಿತ್ತು ಬೇಸರ ವಿಲ್ಲದೆ ಸಾಕುವಳ, ಹತ್ತು ಮಕ್ಕಳು ಒಬ್ಬ ತಾಯಿಯನ್ನು ಸಾಕಲು ಹತ್ತು ದಿನಗಳಲ್ಲಿ ಭಾಗ ಮಾಡಿ ಕೊಳ್ಳುವ ಕಾಲದಲ್ಲಿದ್ದೇವೆ ಬಂಧುಗಳೇ.

ಅನಾಥರು ಯಾರು ಗೊತ್ತೇ ಮಕ್ಕಳಿದ್ದು ಆಶ್ರಮ ದಲ್ಲಿರುವವರಲ್ಲ, ತಂದೆ ತಾಯಿ ಆಶ್ರಮದಲ್ಲಿದ್ದು ತಾವು ಅವರಿಂದ ದೂರ ಇದ್ದ ಅಂತ ಮಕ್ಕಳ್ಳೇ ನಿಜವಾದ ಅನಾಥರು. ಹಿರಿಯರೇ ಚಿಂತೆಗೆ ಒಳಗಾಗಬೇಡಿ, ಸಾರ್ಥಕ ಬದುಕು ಸಾಗಲಿ ಯುವಕರೇ ಪೋಷಕರ ಸೇವೆ ದೇವರ ಸೇವೆ ಎಂಬುದರ ಬಗ್ಗೆ ದೃಷ್ಟಾಂತ ಮೂಲಕ ಹೇಳಿದ ನಿವೃತ್ತ ಮುಖ್ಯೋಪಾಧ್ಯಾಯ ಹುಸೇನಪ್ಪ ಕುರ್ಡಿ ಎಂದರು.

ಮೇರಾ ಯುವ ಭಾರತ ರಾಯಚೂರು ಯುವ ಕ್ರೀಡಾ ಸಚಿವಾಲಯ ಮತ್ತು ವಂದೇ ಮಾತರಂ ಯುವ ಸಂಘ ಮದ್ಲಾಪುರ ಸಹಯೋಗದಲ್ಲಿ ಮಾನವಿಯ ನೆರಳು ಹಿರಿಯರ ಮನೆಯಲ್ಲಿ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು.

ಮುಖ್ಯ ಅತಿಥಿ ನಿಡಿಯಲ್ಲಿ ಮಾಜಿ ಪುರಸಭೆ ಸದಸ್ಯ ಎಚ್ ಬಿ ಎಂ ಹುಸೇನ್ ಭಾಷ ಮಾತನಾಡಯತ್ತಾ ಕಾರ್ಯಕ್ರಮ ಸಾವಿರಾರು ಆದರೆ ದೇವರಿಗೆ ಮೆಚ್ಚುವ ಕೆಲವು ಕಾರ್ಯಕ್ರಮದಲ್ಲಿ ಇದೊಂದು ಅರ್ಥಪೂರ್ಣ. ತಂದೆ ತಾಯಿ ಸ್ವರ್ಗದ ಎರಡು ಭಾಗಿಲು ಎಂಬ ಪ್ರವಾದಿ ಪೈಗಂಬರರ ಮಾತು ಸ್ಮರಿಸ ಬೇಕಿದೆ.

ಜೀವನದಲ್ಲಿ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ನೀಡುವ ಗೌರವ ಜವಾಬ್ದಾರಿಗಳು ಇವತ್ತಿನ ಸಮಾಜದಲ್ಲಿ ಕ್ಷೀಣಿಸುತ್ತಿವೆ ಮುಂದಿನ ಪೀಳಿಗೆಗಾಗಿ ನಾವು ಕೊಡುವ ಕೊಡುಗೆ ಇಂದು ಅರಿತು ಕೊಳ್ಳಬೇಕಿದೆ.

ಶಿಕ್ಷಕರ ಕೈಯಲ್ಲಿ ತಿದ್ದುವ ಚಡಿ ಕಸಿದು ಕೊಂಡೆವು ರಕ್ಷಣೆಯ ಪೋಲಿಸರಲ್ಲಿ ಶಿಕ್ಷಿಸುವ ಲಾಠಿ ಕಸಿದು ಕೊಂಡೆವು ಅದರ ಪರಿಣಾಮವಾಗಿ ಇಂದು ಸಮಾಜದಲ್ಲಿ ಅನೈತಿಕ ಕೃತ್ಯಗಳ ಸಂಖ್ಯೆ ಹೆಚ್ಚಾಗಿ ಕಾಣುವ ಉದಾಹರಣೆ ಕಾಣುತ್ತಿದ್ದೇವೆ. ಮನೆ ಎಂದರೆ ಹಿರಿಯರು ಇರಬೇಕು ಊರೆಂದರೆ ಮರಗಳಿರಬೇಕು ಎಂಬ ನಾಣ್ಯುಡಿ ಗೌನವಾಗುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಸಂಘದ ಅಧ್ಯಕ್ಷ ಮಹಿಬೂಬ್ ಮದ್ಲಾಪುರ ಮಾತನಾಡುತ್ತಾ “ಅತ್ಯಂತ ಉನ್ನತ ಶಿಕ್ಷಣ ಕೆಲವೊಮ್ಮೆ ಅಪಾಯಕಾರಿವಾಗಬಹುದು ಕಾರಣ ಈ ಪದವಿ ಪಡೆದವರು ವಿದೇಶದಲ್ಲಿದ್ದಾರೆ ವೃದ್ಧ ತಂದೆ ತಾಯಿ ಇಲ್ಲೆ ಅನಾಥ ಆಶ್ರಮದಲ್ಲಿದ್ದಾರೆ.

ನನಗಾಗಿ ಪ್ರಾರ್ಥಿಸು ಎಂದು ಯಾರಾರನ್ನೋ ಕೆಳಿ ಕೊಳ್ಳುತ್ತೇವೆ ಆದರೆ ಪ್ರಾರ್ಥಿಸುವ ಸ್ವರ್ಗದ ದಾರಿ ಮಾಡಿ ಕೊಡುವ ತಂದೆ ತಾಯಿಗಳು ಮನೆಯಲ್ಲಿಯೆ ಸೇವೆ ಮಾಡಲು ಹಿಂಜರಿಯುತ್ತೇವೆ.

ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಅವರನ್ನೇ ಆಸ್ತಿಯನ್ನಾಗಿಸಿ ಎಂಬ ಮಾತು ಪಾಲಿಸ ಬೇಕಿದೆ ಹಿರಿಯರು ನಮ್ಮ ಇತಿಹಾಸ ನಮಗೆ ದಾರಿ ದೀಪ ಮುಂದಿನ ಭವಿಷ್ಯ ಚನ್ನಾಗಿರಲು ಅವರ ಅಭಿಪ್ರಾಯ ಸ್ವೀಕರಿಸುವುದು ಅವಶ್ಯಕತೆ ಇದೆ ಗೌರವಿಸೋಣ ಸೇವೆ ಮಾಡೋಣ ನಮಗಾಗಿ ಬದುಕಿದವರಿಗೆ ನಾವು ಅವರಿಗಾಗಿ ಶ್ರಮ ವಹಿಸೋಣ.

ಸಮಾಜಕ್ಕೆ ಕಿವಿ ಮಾತು ಮಕ್ಕಳಿಗೆ ನೀವು ಕೊಡುವ ಬಳುವಳಿ ಒಳ್ಳೆ ಹೆಸರಿಡಿ ಸಂಸ್ಕಾರ ಸಂಸ್ಕೃತಿ ಮೌಲ್ಯ ಶಿಕ್ಷಣ ಕೊಡಿ ಉತ್ತಮ ಗುಣಗಳ ವುಳ್ಳವರೊಂದಿಗೆ ಮದುವೆ ಮಾಡಿಸಿ ದೇಶ ಸಮಾಜ ತಾನಾಗಿಯೇ ಬದಲಾಗುತ್ತದೆ.

ವೇದಿಕೆಯಲ್ಲಿ ಸಮಾಜ ಸೇವಕ ಕೆ.ಎಂ ಭಾಷ, ಕೆ.ಎಂ.ಎಂ.ಡಿ.ಎಸ್ ಸಂಘದ ಶಬ್ಬಿರ್, ಇಕ್ಬಾಲ್ ಖುರೇಶಿ, ಬಡವರ ಬಂಧು ಸಂಘದ ಅಧ್ಯಕ್ಷ ದೇವಣ್ಣ ಭಜಂತ್ರಿ, ಆಶ್ರಮ ಪಾಲಕ ಚನ್ನಾಬಸವ ಸ್ವಾಮಿ ಕುಟುಂಬದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button